ಚಿಕ್ಕಬಳ್ಳಾಪುರ; ಜಿಲ್ಲೆಯ ಚಿಂತಾಮಣಿ ನಗರಸಭೆ ಸಾಮಾನ್ಯ ಸಭೆ ವೇಳೆ ಭಾರೀ ಗದ್ದಲ ಗಲಾಟೆ ಉಂಟಾಗಿ ನಗರಸಭಾ ಸದಸ್ಯರ ಮಧ್ಯೆ ವಾಗ್ವಾದ ನಡುವೆ ತಳ್ಳಾಟ ನೂಕಾಟ ನಡೆದಿದ್ದು (Video), ಪರಸ್ಪರ ಕೈ ಕೈ ಮಿಲಾಯಿಸುವ ಹಂತಕ್ಕೆ ನಗರಸಭಾ ಸದಸ್ಯರು ತಲುಪಿದ್ದಾರೆ.
ಅಂದಹಾಗೆ ಕಳೆದ ಬಾರಿ ಸಾಮಾನ್ಯ ಸಭೆ ವೇಳೆಯೂ ಗಲಾಟೆ ಆಗಿತ್ತು. ಹೀಗಾಗಿ ಆಯುಕ್ತ ಚಪಲತಿ ಈ ಬಾರಿ ಸಭೆಗೆ ಪೊಲೀಸ್ ಭದ್ರೆತೆ ಪಡೆದುಕೊಂಡಿದ್ರು.. ಇದ್ರಿಂದ ಕೆರಳಿದ ನಗರಸಭಾ ಸದಸ್ಯರು, ಪೊಲೀಸ್ ಭದ್ರೆತೆಯಲ್ಲಿ ಸಾಮಾನ್ಯ ಸಭೆ ನಡೆಸುವ ಔಚಿತ್ಯ ಏನು ಅಂತ ನಗರಸಭೆ ಆಯುಕ್ತ ಚಲಪತಿ ವಿರುದ್ದ ಆಕ್ರೋಶ ಹೊರಹಾಕಿದ್ರು.
ಇದೇ ವಿಚಾರದಲ್ಲಿ ಎರಡು ಗುಂಪುಗಳ ಸದಸ್ಯರ ನಡುವೆ ಪರ ವಿರೋಧ ಗಲಾಟೆಯಾಗಿ ಸಭೆ ಗೊಂದಲದಲ್ಲೇ ನಡೆದಿದೆ.