ರೈತರು ಪರಿಹಾರ ಪಡೆಯಲು ತಪ್ಪದೇ ತ್ವರಿತವಾಗಿ ಆಧಾರ್ ಸಂಖ್ಯೆಗೆ ಬ್ಯಾಂಕ್ ಅಕೌಂಟನ್ನು ಜೋಡಣೆ‌ ಮಾಡಿ : ಕೃಷಿ ಸಚಿವ ಬಿ.ಸಿ.ಪಾಟೀಲ್

ಬೆಂಗಳೂರು : ಆಧಾರ್ ಸಂಖ್ಯೆಗೆ ಇದೂವರೆಗೂ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆಯನ್ನು ಜೋಡಣೆ ಮಾಡದ ರೈತರು ಆದಷ್ಟು ಬೇಗ ತಪ್ಪದೇ ಆಧಾರ್ ಸಂಖ್ಯೆಗೆ ಬ್ಯಾಂಕ್ ಅಕೌಂಟನ್ನು ಜೋಡಣೆ‌ ಮಾಡಬೇಕೆಂದು ಕೃಷಿ ಸಚಿವ  ಬಿ.ಸಿ.ಪಾಟೀಲರು ಮನವಿ ಮಾಡಿದ್ದಾರೆ.

ವಿಕಾಸಸೌಧದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಸರ್ಕಾರ ರೈತರಿಗೆ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಸೇರಿದಂತೆ ರಾಜ್ಯದ ವಿವಿಧ ಯೋಜನೆಯಡಿ ಡಿಬಿಟಿ ಮಾರ್ಗಸೂಚಿಯಂತೆ ವಿದ್ಯುನ್ಮಾನವಾಗಿ ನೇರವಾಗಿ ರೈತರ ಖಾತೆಗೆ ಆಧಾರ್ ಆಧಾರಿತ ವ್ಯವಸ್ಥೆಯ ಮೂಲಕವರ್ಗಾಯಿಸಲಾಗುತ್ತಿದೆ. ಬಹುತೇಕ ರೈತರು ತಮ್ಮ ಆಧಾರ್ ಕಾರ್ಡನ್ನು ಅಕೌಂಟ್ ನಂ.ಗೆ ಲಿಂಕ್ ಮಾಡಿಲ್ಲ.ರೈತರು ತಮ್ಮತಮ್ಮ ಆಧಾರ್ ಕಾರ್ಡನ್ನು ತಾವು ಉಪಯೋಗಿಸುತ್ತಿರುವ ಬ್ಯಾಂಕ್ ಖಾತೆಗೆ ಕಡ್ಡಾಯವಾಗಿ ಜೋಡಣೆ ಮಾಡಬೇಕು ಎಂದು ಮನವಿ ಮಾಡಿದರು.ಮೆಕ್ಕೆಜೋಳ ಹಾಗೂ ಹೂವುಬೆಳೆದ ರೈತರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು

ಹತ್ತು ಲಕ್ಷ ರೈತರಿಗೆ ತಲಾ ಐದು ಸಾವಿರದಂತೆ ಪರಿಹಾರ ಧನದ   ಮೊದಲ ಕಂತು ಬಿಡುಗಡೆ ಮಾಡಿದ್ದಾರೆ. ಇದಕ್ಕೆ ಆನ್ಲೈನ್ ಮೂಲಕ  ಪರಿಹಾರ ಯೋಜನೆಗೆ ಚಾಲನೆ ನೀಡಲಾಗಿದೆ. ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಸಂಖ್ಯೆ ಜೋಡಣೆ ಮಾಡಿದ ರೈತರಿಗೆ ಪರಿಹಾರ ಹೋಗಿದೆ.ಆದರೆ ಇನ್ನೂ ಕೆಲವು ರೈತರು ತಮ್ಮ ಬ್ಯಾಂಕ್ ಖಾತೆ ಸಂಖ್ಯೆಯನ್ನು ಆಧಾರ್ ಸಂಖ್ಯೆಗೆ ಜೋಡಣೆ ಮಾಡಿಲ್ಲ.ಇನ್ನೂ ಕೆಲವು ಹೋಗಿದೆ.

ಏರ್ಟೆಲ್ ಪೇಮೆಂಟ್ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಿದ್ದಾರೆ.ಹೀಗಾಗಿ ಏರ್ಟೆಲ್ ಪೇಮೆಂಟ್ ಬ್ಯಾಂಕ್ ಖಾತೆಗೆ ಪರಿಹಾರದ ಹಣ ಹೋಗಿರುವುದು ತಮ್ಮ ಗಮನಕ್ಕೆ ಬಂದಿದೆ.ಏರ್‌ಟೆಲ್ ಯಾವುದೇ ಶಾಖೆಗಳನ್ನು ಹೊಂದಿಲ್ಲ.ಹೀಗಾಗಿ ಏರ್‌ಟೆಲ್ ಔಟ್‌ಲೆಟ್‌ಗಳಿಗೆ ಹೋಗಿ ಹಣ ಪಡೆಯಬೇಕಿದೆ.ಬೇರೆ ಜಿಲ್ಲೆಗಳಲ್ಲಿಯೂ ಇಂತಹದ್ದೇ ಘಟನೆ ನಡೆದಿದೆ.ಇದನ್ನು ನಾವು ಪತ್ತೆ ಹಚ್ಚಿದ್ದೇವೆ.ಈ ಬಗ್ಗೆ ಏರ್ಟೆಲ್ ಕಂಪೆನಿಯ ಗಮನಕ್ಕೂ ತಂದು ಸೂಕ್ತ ಕ್ರಮಕೈಗೊಳ್ಳಲಾಗುವುದುಈ ಸಂಬಂಧ ಅಧಿಕಾರಿಗಳ ಜೊತೆ  ಈ ಸಮಸ್ಯೆಯನ್ನು ಹೇಗೆ ಬಗೆಹರಿಸಬಹುದೆಂದು ಚರ್ಚಿಸಲಾಗುವುದು ಎಂದರು.

ಮುಂದುವರೆದ ನಕಲಿ ಬೀಜ ಮಾರಾಟ ಜಾಲ ಪತ್ತೆ

ವಿಚಕ್ಷಣಾ ದಳದಿಂದ ನಕಲಿ ಬೀಜ ಮಾರಾಟ ಪತ್ತೆ ಮುಂದುವರೆದಿದೆ.ಮೆಕ್ಕೆಜೋಳದಂತೆ ನಕಲಿ ಹತ್ತಿಬೀಜ ಮಾರಾಟ ಜಾಲವೂ ಪತ್ತೆಯಾಗಿದೆ.ರಾಯಚೂರಿನ ತುರುವೆಹಾಳದಲ್ಲಿ ಕಳೆದ ಬುಧವಾರ ತೇಜಸ್ ಎನ್ನುವ ಆಂದ್ರ ಮೂಲಕ ಖಾಸಗಿ ಕಂಪೆನಿಗೆ ಸೇರಿದ ಮೈ ಸೀಡ್ಸ್ ಹೆಸರಿನ ಕಳಪೆ ನೂರು ಕೆಜಿ ಕಳಪೆ ಹತ್ತಿಬೀಜ ಪ್ಯಾಕೆಟ್ ವಶಪಡಿಸಿಕೊಳ್ಳಲಾಗಿದೆ.ಕಳೆದ ಹದಿನೈದು ದಿನಗಳ ಹಿಂದೆ ಈ ಖಾಸಗಿ ಕಂಪೆನಿಯಿಂದ ಬೀಜ ಕೊಂಡು ಬಿತ್ತಿದ ರೈತರಿಗೆ ಸಸಿ ಬಂದಿಲ್ಲ.ಇದನ್ನು ಗಮನಿಸಿದ ರಾಯಚೂರು ಎಡಿ ಹಾಗೂ ವಿಚಕ್ಷಣಾದಳ ಜಮೀನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.ಅದೇ ರೀತಿ ಮೇ.30 ರಂದು ಯಾದಗಿರಿಯ ಗೋದಾಮಿನಲ್ಲಿ ಹೈದರಾಬಾದಿನ ಮೂಲದ ಕಂಪೆನಿಯೊಂದು ಅಕ್ರಮವಾಗಿ ದಾಸ್ತಾನು ಮಾಡಿದ ಬಗ್ಗೆ ಖಚಿತ ಮಾಹಿತಿಯನ್ನಾಧರಿಸಿ ನಡೆಸಿದ ದಾಳಿಯಲ್ಲಿ ಸುಮಾರು 34,595ಕ್ವಿಂಟಾಲ್ ಹತ್ತಿಬೀಜ ವಶಪಡಿಸುಕೊಳ್ಳಲಾಗಿದ್ದು, ಅನಧಿಕೃತ ಸಂಗ್ರಹ ಹಾಗೂ ಪ್ಯಾಕಿಂಗ್ ದಂಧೆ ಮಾಡುತ್ತಿರುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.ವಶಪಡಿಸಿಕೊಂಡ ಹತ್ತಿಬೀಜಗಳನ್ನು ಗುಣಮಟ್ಟ ಪತ್ತೆಗಾಗಿ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.ವರದಿ ಬಂದ ಬಳಿಕ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಕೃಷಿಸಚಿವರು ಸ್ಪಷ್ಟಪಡಿಸಿದರು.

ರಾಜಕೀಯ

ಸಹಜವಾಗಿ ಅಡುಗೆ ಅನಿಲದ ಬೆಲೆ ಏರಿಕೆಯಾಗಿದೆ: ಪ್ರತಿಪಕ್ಷ ನಾಯಕ ಆರ್‌.ಅಶೋಕ

ಸಹಜವಾಗಿ ಅಡುಗೆ ಅನಿಲದ ಬೆಲೆ ಏರಿಕೆಯಾಗಿದೆ: ಪ್ರತಿಪಕ್ಷ ನಾಯಕ ಆರ್‌.ಅಶೋಕ

ಯುದ್ಧ ಇನ್ನೂ ಸ್ಥಗಿತಗೊಂಡಿಲ್ಲ. ಅಡುಗೆ ಅನಿಲ ಸೇರಿದಂತೆ ತೈಲ ಸಮಸ್ಯೆ ಎಲ್ಲ ದೇಶಗಳಿಗೆ ತಟ್ಟಿದೆ. ಸಹಜವಾಗಿ ಅಡುಗೆ ಅನಿಲದ ಬೆಲೆ ಏರಿಕೆಯಾಗಿದೆ: ಆರ್‌. ಅಶೋಕ (R. Ashoka)

[ccc_my_favorite_select_button post_id="121608"]
ಬೌರಿಂಗ್ ಆಸ್ಪತ್ರೆ ದುರ್ಘಟನೆ: ಟೀಕೆ ಮಾಡೋದ್ ಬಿಟ್ಟು ಬಿಜೆಪಿಗರು ಸಹಾಯ ಮಾಡಲ್ಲ – ಡಿಸಿಎಂ‌ ಡಿ.ಕೆ. ಶಿವಕುಮಾರ್

ಬೌರಿಂಗ್ ಆಸ್ಪತ್ರೆ ದುರ್ಘಟನೆ: ಟೀಕೆ ಮಾಡೋದ್ ಬಿಟ್ಟು ಬಿಜೆಪಿಗರು ಸಹಾಯ ಮಾಡಲ್ಲ –

"ಬೌರಿಂಗ್ ಆಸ್ಪತ್ರೆ (Bowring Hospital) ಕಾಂಪೌಂಡ್ ಕುಸಿದು ಏಳು ಜನ ಮೃತಪಟ್ಟಿರುವುದು ಅತ್ಯಂತ ದುಃಖಕರ ವಿಚಾರ. ಇಂತಹ ಘಟನೆಗಳು ಆಗಬಾರದಿತ್ತು. ನನಗೂ ಇದರಿಂದ ಆಘಾತವಾಗಿದೆ" ಎಂದು ಡಿಸಿಎಂ ಡಿ.ಕೆ‌. ಶಿವಕುಮಾರ್ (D.K. Shivakumar) ಬೇಸರ

[ccc_my_favorite_select_button post_id="121538"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ವೇಪಿಂಗ್ ಮಾಡಿದ್ದ ರಿಯಾನ್ ಪರಾಗ್ ಕಠಿಣ ಕ್ರಮದಿಂದ ಪಾರು..!

ವೇಪಿಂಗ್ ಮಾಡಿದ್ದ ರಿಯಾನ್ ಪರಾಗ್ ಕಠಿಣ ಕ್ರಮದಿಂದ ಪಾರು..!

ಮುಲ್ಲನ್‌ಪುರದಲ್ಲಿ ನಡೆದ ಐಪಿಎಲ್ (IPL) ಪಂದ್ಯದ ವೇಳೆ ವ್ಯಾಪಿಂಗ್ ಮಾಡಿದ್ದಕ್ಕಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ರಿಯಾನ್ ಪರಾಗ್‌ಗೆ (Riyan Parag) ಪಂದ್ಯ ಶುಲ್ಕದ 25% ದಂಡ ವಿಧಿಸಿದೆ, ರಾಜಸ್ಥಾನ ರಾಯಲ್ಸ್ ನಾಯಕ ಕಠಿಣ

[ccc_my_favorite_select_button post_id="121572"]
ಮದುವೆಗೆ ಹುಡುಗಿ ಸಿಗಲಿಲ್ಲವೆಂದು ಯುವಕ ಆತ್ಮಹತ್ಯೆ..!

ಮದುವೆಗೆ ಹುಡುಗಿ ಸಿಗಲಿಲ್ಲವೆಂದು ಯುವಕ ಆತ್ಮಹತ್ಯೆ..!

ಮದುವೆಯಾಗಲು ಸೂಕ್ತ ಯುವತಿ ದೊರೆಯದ ಕಾರಣ ಮನನೊಂದ ಯುವಕನೊಬ್ಬ ಕಲ್ಯಾಣಿಗೆ ಬಿದ್ದು ಆತ್ಮಹತ್ಯೆ (suicide) ಮಾಡಿಕೊಂಡಿರುವ ಘಟನೆ ನಡೆದಿದೆ.

[ccc_my_favorite_select_button post_id="121591"]
ದೊಡ್ಡಬಳ್ಳಾಪುರ:  ಡಿವೈಡರ್ಗೆ ಕಾರು ಡಿಕ್ಕಿ.. ಚಾಲಕನಿಗೆ ಗಂಭೀರ ಗಾಯ

ದೊಡ್ಡಬಳ್ಳಾಪುರ: ಡಿವೈಡರ್ಗೆ ಕಾರು ಡಿಕ್ಕಿ.. ಚಾಲಕನಿಗೆ ಗಂಭೀರ ಗಾಯ

ದಾಬಸ್ ಪೇಟೆ ಮಾರ್ಗವಾಗಿ ದೊಡ್ಡಬಳ್ಳಾಪುರ ಕಡೆಗೆ ತೆರಳುತ್ತಿದ್ದ ಕಾರು, ಏಕಾಏಕಿ ಚಾಲಕ ನಿಯಂತ್ರಣ ತಪ್ಪಿ ರಸ್ತೆ ಬದಿಯ ಡಿವೈಡರ್ಗೆ ಡಿಕ್ಕಿ (Accident) ಹೊಡೆದಿದೆ.

[ccc_my_favorite_select_button post_id="121485"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]