ಬಾಶೆಟ್ಟಿಹಳ್ಳಿ ಗ್ರಾಪಂ ಪಿಡಿಒ ಕುಮಾರ್ ವರ್ಗಾವಣೆ / ಮಾದರಿ ಗ್ರಾಮಪಂಚಾಯಿತಿ ಕೀರ್ತಿ ತಂದ ಪಿಡಿಒ ಕುಮಾರ್

ದೊಡ್ಡಬಳ್ಳಾಪುರ: ನಗರದ ಹೊರವಲಯದ ಬಾಶೆಟ್ಟಿಹಳ್ಳಿ ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದ ಕುಮಾರ್ ಕೊಡಿಗೇಹಳ್ಳಿ ಗ್ರಾಮಪಂಚಾಯಿತಿಗೆ ವರ್ಗಾವಣೆಯಾಗಿದ್ದು,ಸೋಮವಾರ ಅಧಿಕಾರ ಸ್ವೀಕರಿಸಲಿದ್ದಾರೆ.

ಬಾಶೆಟ್ಟಿಹಳ್ಳಿ ಗ್ರಾಮಪಂಚಾಯಿತಿಗೆ ರಾಷ್ಟ್ರ ಮಟ್ಟದ ಕೀರ್ತಿ ತಂದ ಪಿಡಿಒ ಕುಮಾರ್ ಕುರಿತು ಹರಿತಲೇಖನಿ ಸಂಗ್ರಹಿಸಿದ ವಿಶೇಷ ವರದಿ.

ಕಳೆದ ಮೂರು ವರ್ಷಗಳ ಕಾಲ ಬಾಶೆಟ್ಟಿಹಳ್ಳಿ ಪಿಡಿಒ ಆಗಿ ಸೇವೆ ಸಲ್ಲಿಸಿದ ಉತ್ಸಾಹಿ ಯುವ ಪಿಡಿಒ ಕುಮಾರ್,ಅಧ್ಯಕ್ಷರು,ಸದಸ್ಯರ ವಿಶ್ವಾಸಗಳಿಸಿ ರಾಷ್ಟ ಮಟ್ಟದಲ್ಲಿ ಬಾಶೆಟ್ಟಹಳ್ಳಿಯ ಕೀರ್ತಿ ಸಾರಿದ್ದಾರೆ. ಇವರ ಅಧಿಕಾರ ಅವಧಿಯಲ್ಲಿ ಬೆಂಗಳೂರು /ಹಿಂದೂಪುರ ನಡುವಿನ ಬ್ಯಾಂಕ್ ಸರ್ಕಲ್ ಬಳಿ ಉಂಟಾಗುತ್ತಿದ್ದ ಟ್ರಾಫಿಕ್ ಸಮಸ್ಯೆ ನೀಗಿಸಲು,ಹಲವು ವಿರೋಧದ ನಡುವೆಯೂ ರಸ್ತೆ ಬದಿಯಲ್ಲಿನ ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸಿ ಮೇಲ್ ಸೇತುವೆ ನಿರ್ಮಾಣಕ್ಕೆ ಅವಕಾಶ ಕಲ್ಪಿಸಿ ಟ್ರಾಫಿಕ್ ಸಮಸ್ಯೆಗೆ ನೀಗಿಸಲು ಶ್ರಮಿಸಿದ್ದಾರೆ.ಸರ್ಕಾರಿ ಶಾಲೆಗೆ ಉತ್ತಮವಾದ ಜಾಗ ಸೌಲಭ್ಯ ಕಲ್ಪಿಸಿದ್ದು,ಗ್ರಾಪಂ ವ್ಯಾಪ್ತಿಯ ಪ್ರತಿ ಗ್ರಾಮಕ್ಕು ಡಿಜಿಟಲ್ ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪನೆ (ಡಿಜಿಟಲ್ ರಿಚಾರ್ಜ್ ಜೊತೆ), ಹಸಿ ಕಸ / ಒಣ ಕಸ ಬೇರ್ಪಡಿಸಲು ಪ್ರತಿ ಮನೆಗೆ ಉಚಿತವಾಗಿ ಎರಡು ಬಣ್ಣದ ಬಕೇಟ್ ವಿತರಣೆ, ಅಲ್ಲದೆ ರಾಜ್ಯಮಟ್ಟದ ಡಿಜಿಟಲ್ ಲೈಬ್ರರಿ ಸ್ಥಾಪನೆ,ರಾಜ್ಯ ಹಾಗೂ ಜಿಲ್ಲಾ ಮಟ್ಟದ  ಕಾರ್ಯಕ್ರಮಗಳ ಯಶಸ್ವಿ ಆಯೋಜನೆ ಇವರ ಶ್ರಮವನ್ನು ಸಾರುತ್ತದೆ.

ಮಾದರಿ ಘನ ತ್ಯಾಜ್ಯ ನಿರ್ವಹಣೆ ಘಟಕ ಸ್ಥಾಪನೆ

ಬಾಶೆಟ್ಟಿಹಳ್ಳಿ ವ್ಯಾಪ್ತಿಯಲ್ಲಿ ರಾಜ್ಯಕ್ಕೆ ಮಾದರಿಯಾದ ಘನ ತ್ಯಾಜ್ಯ ನಿರ್ವಹಣೆ ಘಟಕ ಸ್ಥಾಪಿಸಿದ್ದ ಇವರು,ಪ್ರತಿ ಗ್ರಾಮ,ಶಾಲೆಗಳಲ್ಲಿ ತ್ಯಾಜ್ಯ ವಿಂಗಡಣೆಗೆ ಅರಿವು ಮೂಡಿಸುವ ಕ್ರಮಕೈಗೊಂಡು ಪರಿಸರ ಕಾಳಜಿ ಮೆರೆದಿದ್ದಾರೆ. ಈ ಘಟಕದ ವೀಕ್ಷಣೆಗೆ ರಾಜ್ಯ ಹಾಗೂ ರಾಷ್ಟ್ರದ ಒಂದು ಸಾವಿರಕ್ಕು ಹೆಚ್ಚು ಹಿರಿಯ ಅಧಿಕಾರಿಗಳು,ವಿವಿಧ ಗ್ರಾಮಪಂಚಾಯಿತಿ ಸದಸ್ಯರು ಭೇಟಿ ನೀಡಿ,ತಮ್ಮ ವ್ಯಾಪ್ತಿಯಲ್ಲಿ ಇದೇ ಮಾದರಿಯ ಘಟಕ ಅಳವಡಿಕೆ ಕುರಿತು ಮಾಹಿತಿ ಸಂಗ್ರಹಿಸಿದ್ದಾರೆ. 

ರಾಷ್ಟ್ರ ಹಾಗೂ ಎರಡು ರಾಜ್ಯ ಪ್ರಶಸ್ತಿ ಹಿರಿಮೆ

ಇವರ ಅಧಿಕಾರವಧಿಯಲ್ಲಿ ಬಾಶೆಟ್ಟಿಹಳ್ಳಿ ಗ್ರಾಮಪಂಚಾಯಿತಿಗೆ ದೀನ ದಯಾಳ್ ಉಪಾಧ್ಯಾಯ ಗ್ರಾಮ ಸಶಕ್ತಿಕರಣ ರಾಷ್ಟ್ರ ಪ್ರಶಸ್ತಿ, ಗಾಂಧಿ ಗ್ರಾಮ ಪುರಸ್ಕಾರ ಹಾಗೂ ಕರ್ನಾಟಕ ವಿಧಾನ ಪರಿಷತ್ ಪುರಸ್ಕಾರ ಸೇರಿದಂತೆ ಒಂದು ರಾಷ್ಟ್ರ ಹಾಗೂ ಎರಡು ರಾಜ್ಯ ಪ್ರಶಸ್ತಿ ದೊರೆತಿದೆ.

ಗ್ರಾಮಪಂಚಾಯಿತಿಗೆ ಪಿಡಿಒಗಳಾಗಿ ಅಧಿಕಾರಿಗಳು ಬರುತ್ತಾರೆ / ಓಗುತ್ತಾರೆ.ಆದರೆ,ಅವರ ಆಡಳಿತ ಅವಧಿಯಲ್ಲಿ ಕೈಗೊಂಡ ಕ್ರಮಗಳು ಶಾಶ್ವತವಾಗಿ ಉಳಿತ್ತವೆ.

ಉತ್ಸಾಹಿ ಯುವ ಅಧಿಕಾರಿ ಪಿಡಿಒ ಕುಮಾರ್ ಈಗ ಕೊಡಿಗೇಹಳ್ಳಿ ಗ್ರಾಮಪಂಚಾಯಿತಿಗೆ ವರ್ಗಾವಣೆಯಾಗಿದ್ದು ಇಲ್ಲಿಯೂ ಬಾಶೆಟ್ಟಿಹಳ್ಳಿಯಲ್ಲಿ ಆದಂತ ಅಭಿವೃದ್ಧಿ ಕಾರ್ಯಗಳು ಆಗಲೆಂಬುದು ಹರಿತಲೇಖನಿ ತಂಡದ ಕಳಕಳಿ.

ರಾಜಕೀಯ

ನಾನು ದೆಹಲಿಗೆ ಗಾಳಿ ಕುಡಿಯಲು ಬಂದಿಲ್ಲ: ಘರ್ಜಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್

ನಾನು ದೆಹಲಿಗೆ ಗಾಳಿ ಕುಡಿಯಲು ಬಂದಿಲ್ಲ: ಘರ್ಜಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್

"ನಾನು ಪಕ್ಷದ ನಾಯಕರನ್ನು ಭೇಟಿಯಾಗಿದ್ದೇನೆ. ನಾನು ನಮ್ಮ ಕೆಲಸ ಮಾಡುತ್ತಿರುತ್ತೇನೆ. ಆದರೆ, ಯಾರನ್ನು ಭೇಟಿಯಾಗಿರುವೆ ಎಂದು ಹೇಳುವುದಿಲ್ಲ. ದೆಹಲಿಗೆ ಗಾಳಿ ಕುಡಿಯಲು ಬಂದಿಲ್ಲ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (D.K. Shivakumar) ಘರ್ಜಿಸಿದ್ದಾರೆ

[ccc_my_favorite_select_button post_id="121329"]
ಭಾಷಣದಲ್ಲಿ 60 ಬಾರಿ ಕಾಂಗ್ರೆಸ್‌ ಜಪ: ಪ್ರಧಾನಿ ಮೋದಿ ವಿಡಿಯೋ ಟ್ರೋಲ್!

ಭಾಷಣದಲ್ಲಿ 60 ಬಾರಿ ಕಾಂಗ್ರೆಸ್‌ ಜಪ: ಪ್ರಧಾನಿ ಮೋದಿ ವಿಡಿಯೋ ಟ್ರೋಲ್!

ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ, ಕ್ಷೇತ್ರ ಮರು ವಿಂಗಡನೆ ಮಸೂದೆಗೆ ಸೋಲಾದ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ Narendra Modi) ಅವರು ನೀಡಿದ ಭಾಷಣದಲ್ಲಿ 59 ಬಾರಿ ಕಾಂಗ್ರೆಸ್‌ (Congress) ಹೆಸರು ಮಾತ್ರವೇ ಕೇಳಿಸಿದೆ

[ccc_my_favorite_select_button post_id="121182"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ದೋಸ, ಇಡ್ಲಿ, ಸಾಂಬಾರ್, ಚಟ್ನಿ, ಚಟ್ನಿ ಗೀತೆ ಬಳಸಿ ಅವಮಾನಿಸುತ್ತಾರೆ.. CSK ದೂರು.!

ದೋಸ, ಇಡ್ಲಿ, ಸಾಂಬಾರ್, ಚಟ್ನಿ, ಚಟ್ನಿ ಗೀತೆ ಬಳಸಿ ಅವಮಾನಿಸುತ್ತಾರೆ.. CSK ದೂರು.!

ಇತ್ತೀಚೆಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ (RCB) ಮತ್ತು ಸಿಎಸ್‌ಕೆ (CSK) ಪಂದ್ಯದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಡಿಜೆ ಸಿಎಸ್​ಕೆ ಅಭಿಮಾನಿಗಳನ್ನು ಹಾಗೂ ಆಟಗಾರರನ್ನು ಅವಮಾನಿಸಿದ್ದಾರೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ಮ್ಯಾನೇಜ್ಮೆಂಟ್

[ccc_my_favorite_select_button post_id="121029"]
ಸುಳ್ಳು ವಿಡಿಯೋ ಪೋಸ್ಟ್.. ನಟ ದುನಿಯಾ ವಿಜಯ್‌, ಭಾಸ್ಕರ್ ರಾವ್ಗೆ ಸಂಕಷ್ಟ..!

ಸುಳ್ಳು ವಿಡಿಯೋ ಪೋಸ್ಟ್.. ನಟ ದುನಿಯಾ ವಿಜಯ್‌, ಭಾಸ್ಕರ್ ರಾವ್ಗೆ ಸಂಕಷ್ಟ..!

ಝಾಂಬಿ ಡ್ರಗ್ಸ್ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಮಾಹಿತಿಯ ವಿಡಿಯೊ ಶೇರ್ ಮಾಡಿದ್ದ ನಟ ದುನಿಯಾ ವಿಜಯ್‌ಗೆ (Duniya Vijay) ಸಂಕಷ್ಟ ಎದುರಾಗಿದೆ.

[ccc_my_favorite_select_button post_id="121217"]
ದೊಡ್ಡಬಳ್ಳಾಪುರ: ಕ್ಯಾಂಟರ್- ಟ್ರ್ಯಾಕ್ಟರ್ ನಡುವೆ ಬೆಳ್ಳಂಬೆಳಗ್ಗೆ ಅಪಘಾತ.. ಓರ್ವ ಸಾವು

ದೊಡ್ಡಬಳ್ಳಾಪುರ: ಕ್ಯಾಂಟರ್- ಟ್ರ್ಯಾಕ್ಟರ್ ನಡುವೆ ಬೆಳ್ಳಂಬೆಳಗ್ಗೆ ಅಪಘಾತ.. ಓರ್ವ ಸಾವು

ಕ್ಯಾಂಟರ್ ಹಾಗೂ ಟ್ರಾಕ್ಟರ್ ನಡುವೆ ಡಿಕ್ಕಿ (Accident) ಸಂಭವಿಸಿ, ಓರ್ವ ಸಾವನಪ್ಪಿರುವ ಘಟನೆ ತಾಲೂಕಿನ *** ಬಳಿ ಇಂದು ಬೆಳಗ್ಗಿನ ಜಾವ ಸಂಭವಿಸಿದೆ.

[ccc_my_favorite_select_button post_id="121087"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]
error: Content is protected !!