ದೊಡ್ಡಬಳ್ಳಾಪುರ: ತಾಲೂಕು ಆಡಳಿತ ಬಿಡುಗಡೆ ಮಾಡಿರುವ ಗುರುವಾರದ ಬುಲೆಟಿನ್ ಮಾಹಿತಿಯಂತೆ ತಾಲೂಕಿನ 43 ಜನರಿಗೆ ಕರೊನಾ ಸೋಂಕು ದೃಢಪಟ್ಟಿದ್ದು,ಸೋಂಕಿತರಿಬ್ಬರು ತೀವ್ರ ಉಸಿರಾಟದ ತೊಂದರೆ ಸಾವನಪ್ಪಿದ್ದಾರೆ.

ತಹಶಿಲ್ದಾರ್ ಟಿ.ಎಸ್.ಶಿವರಾಜ್ ಅವರು ಬಿಡುಗಡೆ ಮಾಡಿರುವ ತಾಲೂಕಿನ ಹೆಲ್ತ್ ಬುಲೆಟಿನ ಅನ್ವಯ,ಗುರುವಾರದ ಸಂಜೆಯ ವರಗೆ.ದೊಡ್ಡಬಳ್ಳಾಪುರ ತಾಲ್ಲೂಕಿನ 35 ಪುರುಷರು ಹಾಗೂ 8 ಮಹಿಳೆಯರು ಸೇರಿ 43 ಜನರಿಗೆ ಸೋಂಕು ದೃಡಪಟ್ಟಿದ್ದು, 69ಮಂದಿ ಸೋಂಕಿನಿಂದ ಗುಣಮುಖರಾಗಿ ಮನೆಗೆ ಮರಳಿದ್ದರೆ, ಆಕಾಶ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ತ್ಯಾಗರಾಜನಗರದ 75ವರ್ಷದ ಮಹಿಳೆ, ದೇವರಾಜನಗರ 54 ಮಹಿಳೆ ಉಸಿರಾಟದ ತೊಂದರೆಯಿಂದ ಸಾವನಪ್ಪಿದ್ದಾರೆ.

ಹರಿತಲೇಖನಿಗೆ ದೊರೆತಿರುವ ಮಾಹಿತಿಯಂತೆ. ಬಾಶೆಟ್ಟಿಹಳ್ಳಿ, ಚೈತನ್ಯನಗರ 3, ರೋಜಿಪುರ,,ತ್ಯಾಗರಾಜನಗರ, ಕತ್ತಿಹೊಸಹಳ್ಳಿಯಲ್ಲಿ 2, ಕೊಂಗಾಡಿಯಪ್ಪ ಕಾಲೇಜು ರಸ್ತೆ, ಸ್ಕೌಟ್ ಕ್ಯಾಂಪ್ ರಸ್ತೆ, ವಿನಾಯಕನಗರ, ಅಂತರಹಳ್ಳಿ, ಅಕ್ಷರ ಕಾಂಪ್ಲೆಕ್ಸ್, ಪಾಲನಜೋಗಹಳ್ಳಿ, ಧರ್ಮರಾಯ ಸ್ವಾಮಿ ನಗರ, ಲಕ್ಷ್ಮೀದೇವಿ ಪುರ, ಶಾಂತಿನಗರ, ಮುತ್ಸಂದ್ರ, ಲಿಂಗನಹಳ್ಳಿ, ದರ್ಗಾಜೋಗಹಳ್ಳಿ, ಮೇಡಿಹಳ್ಳಿ, ಮಾನಸ ಆಸ್ಪತ್ರೆ ಸಮೀಪ, ಸೋಮೇಶ್ವರ ಬಡಾವಣೆ, ವಿದ್ಯಾನಗರ, ತೇರಿನಬೀದಿ, ಮೆಳೇಕೋಟೆ, ಚಿಕ್ಕತುಮಕೂರು, ರೋಜಿಪುರ, ಎಲೆಪುರ, ಚಿಕ್ಕಪೇಟೆ, ಗುಂಡಮಗೆರೆ, ಮದುರೆ, ಕರೇನಹಳ್ಳಿ, ಮುತ್ತೂರು, ಪೊಲೀಸ್ ಕ್ವಾಟ್ರಸ್, ಚಿಕ್ಕಪೇಟೆ, ಎಂ.ಕಾಳೇನಹಳ್ಳಿ, ಕತ್ತಿಹೊಸಹಳ್ಳಿ, ವೀರಭದ್ರಮನಪಾಳ್ಯ, ಗಾಣಿಗರಪೇಟೆ, ತಾಲೂಕು ಆರೋಗ್ಯಾಧಿಕಾರಿ ಕಚೇರಿಯ ತಲಾ ಒಬ್ಬರಲ್ಲಿ ಸೊಂಕು ದೃಢಪಟ್ಟಿದೆ.
ಪ್ರಸ್ತುತ ತಾಲೂಕಿನಲ್ಲಿ 1519 ಮಂದಿಗೆ ಸೋಂಕು ತಗುಲಿದ್ದು, 1023 ಮಂದಿ ಗುಣಮುಖರಾಗಿದ್ದರೆ 50 ಮಂದಿ ಸಾವನಪ್ಪಿದ್ದಾರೆ.
ಸೋಂಕಿಗೆ ಒಳಗಾದ 56 ಮಂದಿಯನ್ನು ದೊಡ್ಡಬಳ್ಳಾಪುರ ಕೊವಿಡ್ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು,ಉಳಿದ 390 ಮಂದಿಯನ್ನು ದೇವನಹಳ್ಳಿ / ಹಜ್ ಭವನ/ಖಾಸಗಿ ಆಸ್ಪತ್ರೆ / ಹೊಂ ಹೈಸೋಲೇಷನ್ / ಇಸ್ತೂರಿನ ವಸತಿ ನಿಲಯ / ಬಚ್ಚಹಳ್ಳಿ ವಸತಿ ನಿಲಯ / ಬೆಂಗಳೂರಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.
