ದೊಡ್ಡಬಳ್ಳಾಪುರ: ತಾಲೂಕು ಆಡಳಿತ ಬಿಡುಗಡೆ ಮಾಡಿರುವ ಶುಕ್ರವಾರದ ಬುಲೆಟಿನ್ ಮಾಹಿತಿಯಂತೆ ತಾಲೂಕಿನ 36 ಜನರಿಗೆ ಕರೊನಾ ಸೋಂಕು ದೃಢಪಟ್ಟಿದ್ದು, 50 ವರ್ಷದ ಸೋಂಕಿತ ವ್ಯಕ್ತಿ ತೀವ್ರ ಉಸಿರಾಟದ ತೊಂದರೆಯಿಂದ ಸಾವನಪ್ಪಿದ್ದಾರೆ.

ತಹಶಿಲ್ದಾರ್ ಟಿ.ಎಸ್.ಶಿವರಾಜ್ ಅವರು ಬಿಡುಗಡೆ ಮಾಡಿರುವ ತಾಲೂಕಿನ ಹೆಲ್ತ್ ಬುಲೆಟಿನ ಅನ್ವಯ,ಶುಕ್ರವಾರದ ಸಂಜೆಯ ವರಗೆ.ದೊಡ್ಡಬಳ್ಳಾಪುರ ತಾಲ್ಲೂಕಿನ 26 ಪುರುಷರು ಹಾಗೂ 10 ಮಹಿಳೆಯರು ಸೇರಿ 36 ಜನರಿಗೆ ಸೋಂಕು ದೃಡಪಟ್ಟಿದ್ದು, ಆಕಾಶ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ತಾಲೂಕು ಕಚೇರಿ ರಸ್ತೆಯ 50ವರ್ಷದ ಪುರುಷ ಉಸಿರಾಟದ ತೊಂದರೆಯಿಂದ ಸಾವನಪ್ಪಿದ್ದಾರೆ.

ಹರಿತಲೇಖನಿಗೆ ದೊರೆತಿರುವ ಮಾಹಿತಿಯಂತೆ.ವಿನಾಯಕನಗರ, ಕನಕದಾಸನಗರ ತಲಾ 2, ಸಂಜಯನಗರ, ಚಿಕ್ಕಪೇಟೆ, ವಕ್ಕಲಿಗರ ಸಮುದಾಯ ಭವನದ ಸಮೀಪ ತಲಾ 2, ಕುಚ್ಚಪ್ಪನಪೇಟೆ, ಎಸ್.ನಾಗೇನಹಳ್ಳಿ, ವಿದ್ಯಾನಗರ, ಮುತ್ತೂರು, ಪಾಲನಜೋಗಹಳ್ಳಿ, ಮಲ್ಲತ್ ಹಳ್ಳಿ, ಸೋಮಶೇಖರ್ ಬಡಾವಣೆ, ಬ್ಯಾಂಕ್ ಸರ್ಕಲ್, ಖಾಸ್ ಬಾಗಿಲು, ಮಾರಸಂದ್ರ, ತೂಬಗೆರೆ, ದೇವರಾಜನಗರ, ಇಸ್ಲಾಂಪುರ, ಬ್ರಾಹ್ಮಣರ ಬೀದಿ, ಭುವನೇಶ್ವರಿ ನಗರ, ಮಾರ್ಕೆಟ್ ರಸ್ತೆ, ಚೈತನ್ಯನಗರ, ಬಾಶೆಟ್ಟಿಹಳ್ಳಿ, ಟ್ಯಾಂಕ್ ರಸ್ತೆ, ವಿವೇಕಾನಂದ ನಗರ, ಎಲೆಪೇಟೆ, ಕನಕದಾಸನಗರ, ಚೌಡೇಶ್ವರಿ ದೇವಸ್ಥಾನದ ರಸ್ತೆಯ ತಲಾ ಒಬ್ಬರಲ್ಲಿ ಸೊಂಕು ದೃಢಪಟ್ಟಿದೆ.
ಪ್ರಸ್ತುತ ತಾಲೂಕಿನಲ್ಲಿ 1555 ಮಂದಿಗೆ ಸೋಂಕು ತಗುಲಿದ್ದು, 1023 ಮಂದಿ ಗುಣಮುಖರಾಗಿದ್ದರೆ 51 ಮಂದಿ ಸಾವನಪ್ಪಿದ್ದಾರೆ.
ಸೋಂಕಿಗೆ ಒಳಗಾದ 56 ಮಂದಿಯನ್ನು ದೊಡ್ಡಬಳ್ಳಾಪುರ ಕೊವಿಡ್ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು,ಉಳಿದ 425 ಮಂದಿಯನ್ನು ದೇವನಹಳ್ಳಿ / ಹಜ್ ಭವನ/ಖಾಸಗಿ ಆಸ್ಪತ್ರೆ / ಹೊಂ ಹೈಸೋಲೇಷನ್ / ಇಸ್ತೂರಿನ ವಸತಿ ನಿಲಯ / ಬಚ್ಚಹಳ್ಳಿ ವಸತಿ ನಿಲಯ / ಬೆಂಗಳೂರಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.
