ದೊಡ್ಡಬಳ್ಳಾಪುರ: ತಾಲ್ಲೂಕಿನ ಹಣಬೆ ಗ್ರಾಮ ಪಂಚಾಯತಿವತಿಯಿಂದ ಸ್ವಚ್ಛ ಭಾರತ್ ಮಿಷನ್ ಗ್ರಾಮೀಣ ಯೋಜನೆಯಡಿಯಲ್ಲಿ ಘನ ತ್ಯಾಜ್ಯ ಸಂಗ್ರಹಣೆಗೆ ಗ್ರಾಮಸ್ಥರಿಗೆ ಡಸ್ಟ್ ಬಿನ್ ಗಳನ್ನು ವಿತರಿಸಲಾಯಿತು.

ಇದೇ ವೇಳರ ಗ್ರಾಮದಲ್ಲಿನ 130 ಮನೆಗಳಿಗೆ ಸಮಾಲೋಚಕರು ಭೇಟಿ ನೀಡಿ ಹಸಿ ಕಸ, ಒಣ ಕಸದ ಬಗ್ಗೆ ಜನರಿಗೆ ಸಲಹೆ.ಹಾಗೂ

ಶೌಚಾಲಯ ಬಳಕೆ ,ಶುದ್ಧ ಕುಡಿಯುವ ನೀರಿನ ಸೇವನೆಯಿಂದ ಆರೋಗ್ಯದಲ್ಲಾಗುವ ಲಾಭಗಳು,ಪರಿಸರ ಸಂರಕ್ಷಣೆ,ವಿಷಯಗಳ ಕುರಿತು ಜನರಿಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಹಣಬೆ ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮುನಿಯನಾಯಕ್ ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿಗಳು ಉಪಸ್ಥಿತರಿದ್ದರು
