ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಇಂದು (ಸೆಪ್ಟೆಂಬರ್ 11 ರಂದು) 93 ಪುರುಷರು ಹಾಗೂ 53 ಮಹಿಳೆಯರು ಸೇರಿದಂತೆ 146 ಜನರಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿದೆ

ನೆಲಮಂಗಲ ತಾಲ್ಲೂಕಿನಲ್ಲಿ 43 ಪುರುಷರು ಮತ್ತು 33 ಮಹಿಳೆಯರು, ಹೊಸಕೋಟೆ ತಾಲ್ಲೂಕಿನಲ್ಲಿ 8 ಪುರುಷರು ಮತ್ತು 3 ಮಹಿಳೆಯರು, ದೇವನಹಳ್ಳಿ ತಾಲ್ಲೂಕಿನಲ್ಲಿ 7 ಪುರುಷರು ಮತ್ತು 2 ಮಹಿಳೆಯರು ಹಾಗೂ ಬೆಂಗಳೂರು ನಗರ ಜಿಲ್ಲೆ ಮತ್ತು ಇತರೆ ಜಿಲ್ಲೆಗಳಿಗೆ ಸೇರಿದ 1 ಪುರುಷ ಹಾಗೂ 1 ಮಹಿಳೆಗೆ ಕೋವಿಡ್ ಸೋಂಕು ದೃಢಪಟ್ಟಿದೆ.

*ಮೂರು ಸಾವು*
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನಲ್ಲಿ 60 ವರ್ಷದ ವ್ಯಕ್ತಿ ಮತ್ತು 53 ವರ್ಷದ ವ್ಯಕ್ತಿ ಹಾಗೂ ನೆಲಮಂಗಲ ತಾಲ್ಲೂಕಿನಲ್ಲಿ 70 ವರ್ಷದ ಮಹಿಳೆ ಕೋವಿಡ್-19 ಸೋಂಕಿನಿಂದ ಮೃತಪಟ್ಟಿದ್ದಾರೆ.
(ದೊಡ್ಡಬಳ್ಳಾಪುರದ ಅಂಕಿಅಂಶಗಳ ಕುರಿತು ಗೊಂದಲದ ಕಾರಣ ಹರಿತಲೇಖನಿ ಪ್ರಕಟಿಸುತ್ತಿಲ್ಲ)
