ದೊಡ್ಡಬಳ್ಳಾಪುರ: ಲಯನ್ಸ್ ಕ್ಲಬ್ ವತಿಯಿಂದ ನಗರದ ಸರ್ಕಾರಿ ಆಸ್ಪತ್ರೆಗೆ ಕೋವಿಡ್ ಪರೀಕ್ಷಾ ಬೂತ್- 19 ಅನ್ನು ಮತ್ತು 40 ಕೋವಿಡ್ ಕಿಟ್ ಗಳನ್ನು ಲಯನ್ಸ್ ಜಿಲ್ಲಾ ರಾಜ್ಯಪಾಲ ಲಯನ್ ದೀಪಕ್ ಸುಮನ್ ಅವರು ತಹಶಿಲ್ದಾರ್ ಶಿವರಾಜ್ ಅವರ ಮೂಲಕ ಉಚಿತವಾಗಿ ಆಸ್ಪತೆಯ ಮುಖ್ಯಸ್ಥ ಡಾ.ರಮೇಶ್ ಕುಮಾರ್ ಅವರಿಗೆ ನೀಡಿದರು.

ಈ ವೇಳೆ ಮಾತನಾಡಿದ ತಹಶಿಲ್ದಾರ್ ಶಿವರಾಜ್, ಸದಾ ಸೇವೆಯಲ್ಲಿ ನಿರತವಾಗಿರುವ ಸಂಸ್ಥೆಗಳಲ್ಲಿ. ಅಂತರ ರಾಷ್ಟ್ರೀಯ ಮಟ್ಟದ ಸಂಸ್ಥೆಯಾದ ಲಯನ್ಸ್ ಕ್ಲಬ್ ಉತ್ತಮ ಸೇವೆ ಮಾಡುತ್ತಿದೆ.

ಸರ್ಕಾರಿ ಆಸ್ಪತ್ರೆಗೆ ಉಚಿತವಾಗಿ ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಜನರ ಆರೋಗ್ಯಕ್ಕಾಗಿ ಸಹಾಯ ಮಾಡುತ್ತಿರುವುದು ಶ್ಲಾಘನೀಯವಾದುದು ಎಂದರು.
ಲಯನ್ಸ್ ಜಿಲ್ಲಾ ರಾಜ್ಯಪಾಲ ದೀಪಕ್ ಸುಮನ್ ಮಾತನಾಡಿ, ನಮ್ಮ ಲಯನ್ಸ್ ಕ್ಲಬ್ ಜನರ ಆರೋಗ್ಯ ಸೇವೆಗೆ ಸದಾ ಸಿದ್ದವಿದೆ ಎಂದರು.
ಲಯನ್ಸ್ ಕ್ಲಬ್ ಅದ್ಯಕ್ಷರಾದ ಲಯನ್ ಆರ್ ಎಸ್ ಮಂಜುನಾಥ್ ಮಾತನಾಡಿ,ಹಗಲಿರುಳೆನ್ನದೆ ಕರೊನಾ ನಿರ್ವಹಣೆಯಲ್ಲಿ ತೊಡಗಿಸಿಕೊಂಡರು ಆಸ್ಪತ್ರೆಯ ಎಲ್ಲಾ ವಾರಿಯರ್ಸ್ ಗಳನ್ನು ಮುಂದಿನ ದಿನಗಳಲ್ಲಿ ಅಭಿನಂದಿಸಲಾಗುವುದೆಂದರು.
ಈ ವೇಳೆ ಲಯನ್ಸ್ ಕ್ಲಬ್ ಕಾರ್ಯದರ್ಶಿ ಎಂ.ಆರ್.ಶ್ರೀನಿವಾಸ್, ಕೋಶಾಧಿಕಾರಿ ಡಾ.ಹುಲಿಕಲ್ ನಟರಾಜ್, ಸಹಕಾರ್ಯದರ್ಶಿ. ಮಂಗಳಗೌರಿ ಮತ್ತಿತರಿದ್ದರು.
