ಹೈದರಾಬಾದ್: ಕರೊನಾ ಲಸಿಕೆ ಕೊವಾಕ್ಸಿನ್ ಪ್ರಾಣಿಗಳ ಮೇಲಿನ ಪ್ರಯೋಗದ ಫಲಿತಾಂಶ ಬಹಿರಂಗಗೊಂಡಿದೆ.ಎಂದು ಲಸಿಕೆ ಅಭಿವೃದ್ಧಿಪಡಿಸುತ್ತಿರುವ ಹೈದರಾಬಾದ್ನ ಭಾರತ್ ಬಯೋಟೆಕ್ ಘೋಷಿಸಿದೆ.

ಈ ಕುರಿತು ಸಂಸ್ಥೆ ಟ್ವಿಟ್ ಮೂಲಕ ಘೋಷಣೆ ಮಾಡಿದ್ದು,ಪ್ರಾಣಿಗಳ ಮೇಲೆ ಮಾಡಲಾದ ಪರೀಕ್ಷೆಯಲ್ಲಿ ಲಸಿಕೆ ಯಶಸ್ವಿಯಾಗಿದ್ದು, ಲಸಿಕೆ ಅತಿ ಹೆಚ್ಚು ರೋಗ ನಿರೋಧಕ ಶಕ್ತಿಯನ್ನು ಉಂಟು ಮಾಡಿರುವುದು ಕಂಡುಬಂದಿದ್ದು ಅತ್ಯಂತ ಪರಿಣಾಮಕಾರಿಯಾಗಿದೆ ಎಂದು ಸಂಸ್ಥೆ ಹೇಳಿದೆ

