ದೊಡ್ಡಬಳ್ಳಾಪುರ: 2020-21ನೇ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿಯಲ್ಲಿ ಸಂರಕ್ಷಿತ ಬೇಸಾಯ ಕಾರ್ಯಕ್ರಮ ಯೋಜನೆಯಲ್ಲಿ ಪಾಲಿಥೀನ್ ಶೀಟ್ ಹಾಗೂ ಗಿಡಗಳ ಬದಲಾವಣೆಗೆ ಮತ್ತು ತೋಟಗಾರಿಕೆ ಯಾಂತ್ರೀಕರಣ ಕಾರ್ಯಕ್ರಮದಡಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.


ಪಾಲಿಥೀನ್ ಶೀಟ್ ಬದಲಾವಣೆ ಹಾಗೂ ಹಳೆಯ,ಅನುತ್ಪಾದಕ ತರಕಾರಿ ಅಥವಾ ಹೂ ಗಿಡಗಳನ್ನು ನೆಡಲು ಇಚ್ಚೆಯುಳ್ಳವರು ಮತ್ತು ಹೊಸದಾಗಿ ವಿವಿಧ ಯಾಂತ್ರೀಕರಣ ಕೊಳ್ಳುವ ರೈತರು ಅರ್ಜಿ ಸಲ್ಲಿಸಲು ಸೆ.23 ಕೊನೆಯ ದಿನವಾಗಿದೆ ಎಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಶ್ರೀನಿವಾಸ್ ತಿಳಿಸಿದ್ದಾರೆ.
