ದೊಡ್ಡಬಳ್ಳಾಪುರ: ತಾಲೂಕು ಆಡಳಿತ ಬಿಡುಗಡೆ ಮಾಡಿರುವ ಭಾನುವಾರದ ಬುಲೆಟಿನ್ ಮಾಹಿತಿಯಂತೆ ತಾಲೂಕಿನ 73 ಜನರಿಗೆ ಕರೊನಾ ಸೋಂಕು ದೃಢಪಟ್ಟಿದ್ದು,ಸೋಂಕಿತ ಮೂವರು ತೀವ್ರ ಉಸಿರಾಟದ ತೊಂದರೆ ಸಾವನಪ್ಪಿದ್ದಾರೆ.

ತಹಶಿಲ್ದಾರ್ ಟಿ.ಎಸ್.ಶಿವರಾಜ್ ಅವರು ಬಿಡುಗಡೆ ಮಾಡಿರುವ ತಾಲೂಕಿನ ಹೆಲ್ತ್ ಬುಲೆಟಿನ ಅನ್ವಯ,ಭಾನುವಾರದ ಸಂಜೆಯ ವರಗೆ.ದೊಡ್ಡಬಳ್ಳಾಪುರ ತಾಲ್ಲೂಕಿನ 51 ಪುರುಷರು ಹಾಗೂ 22 ಮಹಿಳೆಯರು ಸೇರಿ 73 ಜನರಿಗೆ ಸೋಂಕು ದೃಡಪಟ್ಟಿದೆ.

ಹರಿತಲೇಖನಿಗೆ ದೊರೆತಿರುವ ಮಾಹಿತಿಯಂತೆ. ಸೋಂಕಿಗೆ ಒಳಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಚಿಕ್ಕಪೇಟೆಯ 47ವರ್ಷದ ಪುರುಷ, 70ವರ್ಷದ ಪುರುಷ ಹಾಗೂ ನಗರದ ಕೋವಿಡ್ ಕೇರ್ ಸೆಂಟರ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮುತ್ತೂರಿನ 64 ವರ್ಷದ ಪುರುಷ ಸಾವನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.
ಉಳಿದಂತೆ ಚಿಕ್ಕಪೇಟೆ, ಖಾಸ್ ಬಾಗ್, ರೋಜಿಪುರ 4, ಕಾವೇರಿ ಬಡಾವಣೆ,ತ್ಯಾಗರಾಜನಗರ, ಶಾಂತಿನಗರ ತಲಾ 3, ಬಸವೇಶ್ವರ ನಗರ, ದರ್ಜಿಪೇಟೆ, ರಂಗಪ್ಪ ಸರ್ಕಲ್, ವಡ್ಡರಹಳ್ಳಿ, ಹಮಾಮ್ ರಾಜೂಸ್ ಲೇಔಟ್, ಕೊನಘಟ್ಟ, ದರ್ಗಾಜೋಗಹಳ್ಳಿ, ರೈಲ್ವೆ ಸ್ಟೇಷನ್ ತಲಾ 2, ಹುಸ್ಕೂರು, ಹೊಸಹಳ್ಳಿ ಕೊಡಿಗೇಹಳ್ಳಿ, ಎಳ್ಳುಪುರ, ಕರೇನಹಳ್ಳಿ, ರಾಮಯ್ಯನಪಾಳ್ಯ, ಭುವನೇಶ್ವರಿ ನಗರ, ಬಸವೇಶ್ವರ ನಗರ, ಸೂಲಿಕುಂಟೆ, ವಿನಾಯಕನಗರ ಮುಖ್ಯ ರಸ್ತೆ, ಕನಕದಾಸ ನಗರ, ಮುತ್ಸಂದ್ರ, ವಿನಾಯಕನಗರ, ಶ್ರೀನಗರ, ದರ್ಜಿಪೇಟೆ, ಬಾಶೆಟ್ಟಿಹಳ್ಳಿ, ಸಂಜಯನಗರ, ಎಲೆಪೇಟೆ, ವಿದ್ಯಾನಗರ, ಜೆಪಿ ಪ್ಯಾಲೇಸ್, ಮಾರ್ಕೆಟ್ ರಸ್ತೆ, ದೊಡ್ಡಬೆಳವಂಗಲ ಅಜ್ಜನಕಟ್ಟೆ, ತಿಮ್ಮಸಂದ್ರ, ಕನ್ನಮಂಗಲ, ಕತ್ತಿಹೊಸಹಳ್ಳಿ, ಗಂಗಾಧರಪುರ ಲೇಔಟ್, ಹೊಸಹಳ್ಳಿ, ದೊಡ್ಡತುಮಕೂರು, ವೀರಾಪುರ, ಕೊಂಗಾಡಿಯಪ್ಪ ಕಾಲೇಜು ರಸ್ತೆ, ಸುಭಾಷ್ ನಗರ, ಓಬದೇನಹಳ್ಳಿ, ಮುತ್ತೂರು, ಹೊನ್ನಾಘಟ್ಟ, ಕಚೇರಿ ಪಾಳ್ಯ, ಕೋಟೆ ರಸ್ತೆ, ಕುಚ್ಚಪ್ಪನಪೇಟೆ, ಲಿಂಗನಹಳ್ಳಿಯಲ್ಲಿ ತಲಾ ಒಬ್ವರಿಗೆ ಸೋಂಕು ದೃಡಪಟ್ಟಿದೆ.
ಪ್ರಸ್ತುತ ತಾಲೂಕಿನಲ್ಲಿ 1653 ಮಂದಿಗೆ ಸೋಂಕು ತಗುಲಿದ್ದು, 1073 ಮಂದಿ ಗುಣಮುಖರಾಗಿದ್ದರೆ 55 ಮಂದಿ ಸಾವನಪ್ಪಿದ್ದಾರೆ.
ಸೋಂಕಿಗೆ ಒಳಗಾದ 56 ಮಂದಿಯನ್ನು ದೊಡ್ಡಬಳ್ಳಾಪುರ ಕೊವಿಡ್ ಕೇರ್ ಸೆಂಟರ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು,ಉಳಿದ 480 ಮಂದಿಯನ್ನು ದೇವನಹಳ್ಳಿ / ಹಜ್ ಭವನ/ಖಾಸಗಿ ಆಸ್ಪತ್ರೆ / ಹೊಂ ಹೈಸೋಲೇಷನ್ / ಇಸ್ತೂರಿನ ವಸತಿ ನಿಲಯ / ಬಚ್ಚಹಳ್ಳಿ ವಸತಿ ನಿಲಯ / ಬೆಂಗಳೂರಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.
