ದೊಡ್ಡಬಳ್ಳಾಪುರ: ಖ್ಯಾತ ಕ್ರಿಮಿನಲ್ ವಕೀಲರಾದ ಸಿ.ಎಚ್.ಹನುಮಂತರಾಯ ಅವರ ತಾಯಿ ಅಕ್ಕಚ್ಚಮ್ಮ(95)ಭಾನುವಾರ ತಾಲ್ಲೂಕಿನ ಚಿಕ್ಕಬೆಳವಂಗಲ ಗ್ರಾಮದ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಅವರಿಗೆ ಜ್ಯೇಷ್ಠಪುತ್ರ ಸಿ.ಎಚ್.ಹನುಮಂತರಾಯ ಸೇರಿದಂತೆ ಇಬ್ಬರು ಗಂಡು ಮಕ್ಕಳು ಹಾಗೂ ಇಬ್ಬರು ಪುತ್ರಿಯರು ಇದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಕೆಲ ದಿನಗಳ ಹಿಂದೆ ಕೋಮಾ ಸ್ಥಿತಿಗೆ ಜಾರಿದ್ದರು.

ಮೃತರ ಅಂತ್ಯಕ್ರಿಯೆ ಸೋಮವಾರ(ಸೆ.14) ಬೆಳಿಗ್ಗೆ 11.30ಕ್ಕೆ ಚಿಕ್ಕಬೆಳವಂಗಲದ ಜಮೀನಿನಲ್ಲಿ ಅವರ ಪತಿ ಹನುಮಂತಯ್ಯ ಅವರ ಸಮಾಧಿ ಪಕ್ಕದಲ್ಲಿ ನಡೆಯಲಿದೆ.
