ಬೆಂಗಳೂರು: ಕನ್ನಡದ ಮೇಲೆ ಹಿಂದಿ ಹೇರಿಕೆ ಬೇಡವೆಂದು ನಟ ಪ್ರಕಾಶ್ ರಾಜ್ ಟ್ವಿಟ್ ಮಾಡುವ ಮೂಲಕ ಹಿಂದಿದಿವಸ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಟ್ವಿಟ್ ಮಾಡಿರುವ ಅವರು,ಹಲವು ಭಾಷೆ ಬಲ್ಲೆ. ಹಲವು ಭಾಷೆಗಳಲ್ಲಿ ಕೆಲಸ ಮಾಡಬಲ್ಲೆ.ಆದರೆ ನನ್ನ ಕಲಿಕೆ.ನನ್ನ ಗ್ರಹಿಕೆ.ನನ್ನ ಬೇರು.ನನ್ನ ಶಕ್ತಿ ನನ್ನ ಹೆಮ್ಮೆ..ನನ್ನ ಮಾತೃಭಾಷೆ ಕನ್ನಡ. ಹಿಂದಿ ಹೇರಿಕೆ ಬೇಡ ಎಂದು ಬರೆದು ಟ್ವಿಟ್ ಮಾಡಿ ನಂಗೆ ಹಿಂದಿ ಬರಲ್ಲ ಹೋಗ್ರಪ್ಪ ಎಂದು ಬರೆದಿರೋ ಟಿ-ಶರ್ಟ್ ಧರಿಸಿದ್ದಾರೆ.

