ಹರಿತಲೇಖನಿ ನ್ಯೂಸ್ ದೊಡ್ಡಬಳ್ಳಾಪುರ: ತಾಲೂಕು ಆಡಳಿತ ಬಿಡುಗಡೆ ಮಾಡಿರುವ ಬುಲೆಟಿನ್ ಮಾಹಿತಿಯಂತೆ ತಾಲೂಕಿನ 15 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ತಹಶಿಲ್ದಾರ್ ಟಿ.ಎಸ.ಶಿವರಾಜ್ ಅವರು ಬಿಡುಗಡೆ ಮಾಡಿರುವ ತಾಲೂಕಿನ ಹೆಲ್ತ್ ಬುಲೆಟಿನ ಅನ್ವಯ,ಸೋಮವಾರ ಸಂಜೆಯವರಗೆ, ದೊಡ್ಡಬಳ್ಳಾಪುರ ತಾಲೂಕಿನ 13 ಪುರುಷರು ಹಾಗೂ 2 ಮಹಿಳೆಯರು ಸೇರಿ, 15 ಜನರಿಗೆ ಸೋಂಕು ದೃಢಪಟ್ಟಿದೆ.ಲಕ್ಷ್ಮೀದೇವಿಪುರದ 70 ವರ್ಷದ ಪುರುಷ, ದೊಡ್ಡಬಳ್ಳಾಪುರ ನಗರದ 59 ವರ್ಷದ ಪುರುಷ, ದೊಡ್ಡತಿಮ್ಮನ ಹಳ್ಳಿ 47 ವರ್ಷದ ಪುರುಷ ಈ ಸೋಂಕಿತ ಮೂವರು ವ್ಯಕ್ತಿಗಳು ತೀವ್ರ ಉಸಿರಾಟದ ತೊಂದರೆಯಿಂದ ಸಾವನಪ್ಪಿದ್ದಾರೆ.

ಹರಿತಲೇಖನಿಗೆ ದೊರೆತಿರುವ ಮಾಹಿತಿ ಅನ್ವಯ, ದೊಡ್ಡಬಳ್ಳಾಪುರ ನಗರ(ವಿಳಾಸ ನೀಡಿಲ್ಲ) , ಟ್ಯಾಂಕ್ ರಸ್ತೆ, ಕೊಡಿಗೇಹಳ್ಳಿಯಲ್ಲಿ ತಲಾ 2, ಮುಪ್ಪಡಿಘಟ್ಟ, ಕರೇನಹಳ್ಳಿ, ಕನಸವಾಡಿ, ಹಣಬೆ, ರಂಗಪ್ಪ ವೃತ್ತ, ದೇವರಾಜನಗರ, ಬಾಶೆಟ್ಟಿಹಳ್ಳಿ, ಹುಲಿಕುಂಟೆ ಹಾಗೂ ಎಂಹೆಚ್ ಪಾಳ್ಯದ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ.
ಪ್ರಸ್ತುತ ತಾಲೂಕಿನಲ್ಲಿ 1668 ಮಂದಿಗೆ ಸೋಂಕು ತಗುಲಿದ್ದು, 1110 ಮಂದಿ ಗುಣಮುಖರಾಗಿದ್ದರೆ 58 ಮಂದಿ ಸಾವನಪ್ಪಿದ್ದಾರೆ.
ಸೋಂಕಿಗೆ ಒಳಗಾದ 53 ಮಂದಿಯನ್ನು ದೊಡ್ಡಬಳ್ಳಾಪುರ ಕೊವಿಡ್ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು,ಉಳಿದ 447 ಮಂದಿಯನ್ನು ದೇವನಹಳ್ಳಿ / ಹಜ್ ಭವನ/ಖಾಸಗಿ ಆಸ್ಪತ್ರೆ / ಹೊಂ ಹೈಸೋಲೇಷನ್ / ಇಸ್ತೂರಿನ ವಸತಿ ನಿಲಯ / ಬಚ್ಚಹಳ್ಳಿ ವಸತಿ ನಿಲಯ / ಬೆಂಗಳೂರಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.
