ದೊಡ್ಡಬಳ್ಳಾಪುರ: ತಾಲೂಕು ಆಡಳಿತ ಬಿಡುಗಡೆ ಮಾಡಿರುವ ಬುಲೆಟಿನ್ ಮಾಹಿತಿಯಂತೆ ತಾಲೂಕಿನ 85 ಜನರಿಗೆ ಕರೊನಾ ಸೋಂಕು ದೃಢಪಡುವ ಮೂಲಕ,ತಾಲೂಕಿನಲ್ಲಿ ಸೋಂಕಿಗೆ ಒಳಗಾದವರ ಸಂಖ್ಯೆ 2000 ಗಡಿಗೆ ಬಂದಿದೆ.
ತಹಶೀಲ್ದಾರ್ ಟಿ.ಎಸ್.ಶಿವರಾಜ್ ಅವರು ಬಿಡುಗಡೆ ಮಾಡಿರುವ ತಾಲೂಕಿನ ಹೆಲ್ತ್ ಬುಲೆಟಿನ ಅನ್ವಯ, ಶನಿವಾರ ಸಂಜೆಯವರಗೆ, ದೊಡ್ಡಬಳ್ಳಾಪುರ ತಾಲೂಕಿನ 53 ಪುರುಷರು ಹಾಗೂ 32 ಮಹಿಳೆಯರು ಸೇರಿ, 85 ಜನರಿಗೆ ಸೋಂಕು ದೃಢಪಟ್ಟಿದೆ.
ಆಕಾಶ್ ಆಸ್ಪತ್ರೆಗೆ ದಾಖಲಾಗಿದ್ದ ನಗರದ ದೇವರಾಜ ನಗರದ 60 ವರ್ಷದ ಪುರುಷ ಹಾಗೂ ಏಕಾಶಿಪುರದ 80ವರ್ಷದ ಪುರುಷ, ತಾಲೂಕಿನ ವೀರಾಪುರದ 74 ವರ್ಷದ ಪುರುಷರೊಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಪ್ರಸ್ತುತ ತಾಲೂಕಿನಲ್ಲಿ 1995 ಮಂದಿಗೆ ಕರೊನಾ ಸೋಂಕು ತಗುಲಿದ್ದು, 1337 ಮಂದಿ ಗುಣಮುಖರಾಗಿದ್ದು, 70 ಮಂದಿ ಸಾವನಪ್ಪಿದ್ದಾರೆ.

