ದೊಡ್ಡಬಳ್ಳಾಪುರ: ರ್ಯಾಪಿಡ್ ಕಿಟ್ ಕೊರತೆ ಕಾರಣ ಬೆಂಗಳೂರಿಗೆ ಕಳಿಸಲಾಗಿದ್ದ ಕರೊನಾ ತಪಾಸಣೆ ವರದಿ ಬಂದಿದೆ.
ತಾಲೂಕು ಆಡಳಿತ ಬಿಡುಗಡೆ ಮಾಡಿರುವ ಬುಲೆಟಿನ್ ಮಾಹಿತಿಯಂತೆ ತಾಲೂಕಿನ 25 ಜನರಿಗೆ ಕರೊನಾ ಸೋಂಕು ದೃಢಪಟ್ಟಿದ್ದರೆ,46 ಮಂದಿ ಗುಣಮುಖರಾಗಿ ಮನೆಗೆ ಮರಳಿದ್ದಾರೆ.
ತಹಶಿಲ್ದಾರ್ ಟಿ.ಎಸ್.ಶಿವರಾಜ್ ಅವರು ಬಿಡುಗಡೆ ಮಾಡಿರುವ ತಾಲೂಕಿನ ಹೆಲ್ತ್ ಬುಲೆಟಿನ ಅನ್ವಯ, ದೊಡ್ಡಬಳ್ಳಾಪುರ ತಾಲೂಕಿನ 15 ಪುರುಷರು ಹಾಗೂ 10 ಮಹಿಳೆಯರು ಸೇರಿ, 25 ಜನರಿಗೆ ಸೋಂಕು ದೃಢಪಟ್ಟಿದೆ.
ಹರಿತಲೇಖನಿಗೆ ದೊರೆತಿರುವ ಮಾಹಿತಿಯನ್ವಯ, ಲಕ್ಷ್ಮೀದೇವಿಪುರದಲ್ಲಿ 5, ಬಾಶೆಟ್ಟಿಹಳ್ಳಿ, ಮಾರುತಿನಗರ ತಲಾ 2, ಚೈತನ್ಯನಗರ, ಚಿಕ್ಕಪೇಟೆ, , ತೇರಿನಬೀದಿ, ಅಪಕಾರನಹಳ್ಳಿ, ದೊಡ್ಡಬೆಳವಂಗಲ, ಮದುರೆ, ಮುತ್ತೂರು, ದೊಡ್ಡಬಳ್ಳಾಪುರ( ವಿಳಾಸ ನೀಡಿಲ್ಲ), ಗಂಗಾಧರಪುರ, ನರಸಯ್ಯನ ಅಗ್ರಹಾರ, ಶ್ರೀರಾಮನಹಳ್ಳಿ, ಶಾಂತಿನಗರ, ಕುಚ್ಚಪ್ಪನಪೇಟೆ, ಕಲ್ ಪೇಟೆ, ದೇವರಾಜನಗರ ಹಾಗೂ ತೂಬಗೆರೆ ಪೇಟೆಯ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ. ಉಳಿದಂತೆ ತಾಲೂಕಿನ ನಾಲ್ಕು ಮಂದಿ ಕರೊನಾ ಸೋಂಕಿನ ಕಾರಣ ಮೃತಪಟ್ಟಿದ್ದು ಸಾವನಪ್ಪಿರುವವರ ವಿವರ ಲಭ್ಯವಾಗಿಲ್ಲ.
ಪ್ರಸ್ತುತ ತಾಲೂಕಿನಲ್ಲಿ 2072 ಮಂದಿಗೆ ಸೋಂಕು ತಗುಲಿದ್ದು, 1476 ಮಂದಿ ಗುಣಮುಖರಾಗಿದ್ದರೆ 75 ಮಂದಿ ಸಾವನಪ್ಪಿದ್ದಾರೆ.
ಸೋಂಕಿಗೆ ಒಳಗಾದ 56 ಮಂದಿಯನ್ನು ದೊಡ್ಡಬಳ್ಳಾಪುರ ಕೊವಿಡ್ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಉಳಿದ 490 ಮಂದಿಯನ್ನು ದೇವನಹಳ್ಳಿ / ಹಜ್ ಭವನ/ಖಾಸಗಿ ಆಸ್ಪತ್ರೆ / ಹೊಂ ಹೈಸೋಲೇಷನ್ / ಇಸ್ತೂರಿನ ವಸತಿ ನಿಲಯ / ಬಚ್ಚಹಳ್ಳಿ ವಸತಿ ನಿಲಯ / ಬೆಂಗಳೂರಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.

