ದೊಡ್ಡಬಳ್ಳಾಪುರ: ವಿಕಲಚೇತನರು ಹಾಗೂ ಹಿರಿಯ ನಾಗರಿಕರೊಂದಿಗೆ ನೇರ ಫೋನ್ ಇನ್ ಕಾರ್ಯಕ್ರಮವನ್ನು ಅಕ್ಟೋಬರ್ 2ರಿಂದ ಪ್ರತಿ ಶುಕ್ರವಾರ ನೇರ ಫೋನ್ ಇನ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತಿದೆ ಎಂದು ಜಿಲ್ಲಾ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ಜಗದೇಶ.ಎನ್.ಎಂ ಹರಿತಲೇಖನಿಗೆ ತಿಳಿಸಿದ್ದಾರೆ.
ಈ ಕುರಿತು ಮಾಹಿತಿನೀಡಿರುವ ಅವರು.2020-21 ನೇ ಸಾಲಿನಿಂದ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಯೋಜನೆಗಳನ್ನು ಪರಿಣಾಮಕಾರಿಯಾಗಿ ಹಾಗೂ ಸಮಾಜದ ಕಟ್ಟಕಡೆಯ ವಿಕಲಚೇತನರಿಗೆ ಹಾಗೂ ನೊಂದ ಹಿರಿಯ ನಾಗರಿಕರಿಗೆ ಶೀಘ್ರವಾಗಿ ತಲುಪಿಸಲು ಹಾಗೂ ಕೋವಿಡ್ -19 ರ ಸಂಕಷ್ಟದ ಪರಿಸ್ಥಿತಿಯಲ್ಲಿ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸುವ ಸಲುವಾಗಿ ಅಕ್ಟೋಬರ್ 2 ರಿಂದ ಪ್ರತೀ ಶುಕ್ರವಾರ ನೇರ ಫೋನ್ ಇನ್ ಕಾರ್ಯಕ್ರಮ ನಡೆಸಲಾಗುತ್ತಿದೆ.
ಕಾರ್ಯಕ್ರಮದ ಅಂಗವಾಗಿ ವಾರದ ಒಂದು ನಿಗದಿತ ದಿನದಂದು 2 ಗಂಟೆಗಳ ಕಾಲ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಕಲಚೇತನರು ಹಾಗೂ ನೊಂದ ಹಿರಿಯ ನಾಗರಿಕರಿಗಾಗಿ ನೇರ ಫೋನ್ ಇನ್ ಕಾರ್ಯಕ್ರಮ ಮೂಲಕ ಸಮಸ್ಯೆಗಳ ಬಗ್ಗೆ ನೇರವಾಗಿ ಚರ್ಚೆ ನಡೆಸುವುದು. ಈ ಕಾರ್ಯಕ್ರಮಕ್ಕಾಗಿಯೇ ಮೀಸಲಿಟ್ಟ ಮೊಬೈಲ್ ದೂರವಾಣಿ ಸಂಖ್ಯೆ : 7411336818 ಯನ್ನು ಬಳಸುಬಹುದಾಗಿದ್ದು, ಸ್ವೀಕೃತವಾಗುವ ಎಲ್ಲಾ ಕರೆಗಳನ್ನು ನಿಗಧಿತ ರಿಜಿಸ್ಟರ್‌ನಲ್ಲಿ ನೋಂದಾಯಿಸಲಾಗುತ್ತದೆ.
ಕರೆಮಾಡಿ ಕೊರಿದ ಯಾವುದೇ ಸೌಲಭ್ಯದ ಅರ್ಜಿಗಳು ಮಾಹಿತಿಯನ್ನು ಕರೆದಾರರ ವಿಳಾಸಕ್ಕೆ ಪೋಸ್ಟ್ ಮೂಲಕ ಕಳುಹಿಸಲಾಗುವುದು ತುರ್ತು ವಿಚಾರಗಳನ್ನು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಫಲಾನುಭವಿಗಳ ಮನೆ ಭೇಟಿ ಮಾಡಿ ಕರೆದಾರರಿಗೆ ಅವಶ್ಯಕವಿರುವಂತಹ ಸೌಲಭ್ಯದ ಮಾಹಿತಿ ನೀಡಲು ಕ್ರಮ ವಹಿಸಲಾಗುವುದು . 5. ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಎಲ್ಲಾ ಇಲಾಖೆಗಳ ಫಲಾನುಭವಿ ಆಧಾರಿತ ಕಾರ್ಯಕ್ರಮಗಳಲ್ಲಿ ಶೇಕಡಾ .5 % ಅನುದಾನದ ವ್ಯಾಪಾಕ ಪ್ರಚಾರ ಮಾಡುವುದು . ಹಾಗೂ ಅಧಿಕಾರಿಗಳೊಂದಿಗೆ ಮಾತನಾಡಲು ಸಾಧ್ಯವಾಗದಿರುವವರಿಗೆ ಈ ನೇರ ಫೋನ್ ಇನ್ ಕಾರ್ಯಕ್ರಮ ಅನುಕೂಲವಾಗುತ್ತದೆ ಎಂದವರು ತಿಳಿಸಿದ್ದಾರೆ.

