ದೊಡ್ಡಬಳ್ಳಾಪುರ: ಡಾ.ಬಿ.ಆರ್.ಅಂಬೇಡ್ಕರ್ ಡಾ.ಬಾಬು ಜಗಜೀವನ್ ರಾಂ-ಕ್ರೆಡಿಟ್-ಕೋ-ಅಪರೇಟಿವ್ ಸೊಸೈಟಿ (ರಿ)ಯ ಮುಂದಿನ 5 ವರ್ಷಗಳ ಆಡಳಿತ ಮಂಡಳಿಯ ಚುನಾವಣೆ ಸಾಮಾನ್ಯ 11, ಮಹಿಳಾ ಮೀಸಲು 2 ಸೇರಿ ಒಟ್ಟು 13 ಸ್ಥಾನಗಳಿಗೆ ಇಂದು ನಾಮಪತ್ರ ಸಲ್ಲಿಕೆ ಮಾಡಲಾಯಿತು.
ಅಭ್ಯರ್ಥಿಗಳಾಗಿ ರಾಮಕೃಷ್ಣಪ್ಪ,ರಾಜಘಟ್ಟ ಕಾಂತರಾಜು, ತೂಬಗೆರೆ ವೆಂಕಟೇಶ್, ಎಂ.ಮುನಿರಾಜು, ನಾಗರಾಜು.ಹೆಚ್, ಕೆಂಪರಾಜು, ನಾಗರಾಜು ಬಚ್ಚಹಳ್ಳಿ, ಆರ್.ಎಂ.ಮುನಿರಾಜು, ಚನ್ನಮ್ಮ ಆರ್.ಸಿ.ರಾಮಲಿಂಗಯ್ಯ, ಕನ್ಯಾಕುಮಾರಿ ಶ್ರೀನಿವಾಸ್, ಅಂಜನಮೂರ್ತಿ, ಕೃಷ್ಣಮೂರ್ತಿ, ವೆಂಕಟರಮಣಪ್ಪ ನಾಮಪತ್ರಗಳನ್ನು ಸಲ್ಲಿಸಿದರು. ಅಂತಿಮ ದಿನವಾದ ಕಾರಣ ಹಾಗೂ ಇತರರು ಯಾರು ನಾಮಪತ್ರ ಸಲ್ಲಿಸದ ಕಾರಣ ಬಹುತೇಕ ಇವರೇ ಆಯ್ಕೆಯಾಗುವುದು ಖಚಿತವಾಗಿದೆ.
ನಾಮಪತ್ರ ಸಲ್ಲಿಕೆ ಸಮಯದಲ್ಲಿ ಜಿಲ್ಲಾಪಂಚಾಯಿತಿ ಉಪಾಧ್ಯಕ್ಷೆ ಕನ್ಯಾಕುಮಾರಿ ಶ್ರೀನಿವಾಸ್, ಶ್ರೀ ಮಾದಾರ ಚನ್ನಯ್ಯ ಮಹಾಸಭಾ ಕೋರ್ ಕಮಿಟಿ ಆಧ್ಯಕ್ಷ ಮಾ.ಮುನಿರಾಜು, ಅಧ್ಯಕ್ಷ ಆದಿತ್ಯ ನಾಗೇಶ್, ಪ್ರಧಾನ ಕಾರ್ಯದರ್ಶಿ ಟಿ.ಡಿ.ಮುನಿಯಪ್ಪ, ಕಾರ್ಯಾಧ್ಯಕ್ಷ ನರಸಿಂಮೂರ್ತಿ, ಖಜಾಂಚಿಗಳಾದ ಮಾರಪ್ಪ, ಭವಾನಿ, ನಗರ ಅಧ್ಯಕ್ಷ ಅಂಜನಮೂರ್ತಿ, ಯುವ ಘಟಕದ ಅಧ್ಯಕ್ಷ ಕೋಳೂರು ಸಿ.ನಾಗರಾಜು, ನಗರ ಘಟಕ ಯುವ ಅಧ್ಯಕ್ಷ ಶೇಖರ್ ಮತ್ತಿತರಿದ್ದರು.

