ದೊಡ್ಡಬಳ್ಳಾಪುರ: ತಾಲೂಕು ಆಡಳಿತ ಬಿಡುಗಡೆ ಮಾಡಿರುವ ಭಾನುವಾರದ ಬುಲೆಟಿನ್ ಮಾಹಿತಿಯಂತೆ. ತಾಲೂಕಿನ 31 ಜನರಿಗೆ ಕರೊನಾ ಸೋಂಕು ದೃಢಪಟ್ಟಿದೆ.
ತಹಶಿಲ್ದಾರ್ ಟಿ.ಎಸ್.ಶಿವರಾಜ್ ಅವರು ಬಿಡುಗಡೆ ಮಾಡಿರುವ ತಾಲೂಕಿನ ಹೆಲ್ತ್ ಬುಲೆಟಿನ ಅನ್ವಯ, ಭಾನುವಾರದ ಸಂಜೆಯ ವರಗೆ.ದೊಡ್ಡಬಳ್ಳಾಪುರ ತಾಲ್ಲೂಕಿನ 23 ಪುರುಷರು ಹಾಗೂ 08 ಮಹಿಳೆಯರು ಸೇರಿ 31 ಜನರಿಗೆ ಸೋಂಕು ದೃಡಪಟ್ಟಿದೆ.
ಹರಿತಲೇಖನಿಗೆ ದೊರಕಿರುವ ಮಾಹಿತಿ ಅನ್ವಯ, ದೊಡ್ಡಬಳ್ಳಾಪುರ ನಗರ 4 ( ವಿಳಾಸ ನೀಡಲ್ಲ), ಹೊಸಹಳ್ಳಿ 3, ಬಾಶೆಟ್ಟಿಹಳ್ಳಿ, ದೇವರಾಜನಗರ, ಯಾಕಾಶಿಪುರ ತಲಾ 2, ಬಸವೇಶ್ವರ ನಗರ, ಬೆಸ್ತರಪೇಟೆ, ಕರೇನಹಳ್ಳಿ, ಕೊಡಿಗೇಹಳ್ಳಿ, ಕುಚ್ಚಪ್ಪನಪೇಟೆ, ಹೇಮಾವತಿ ಪೇಟೆ, ನಾಗಸಂದ್ರ, ಗಂಗಾಧರಪುರ, ಪಿಂಡಕೂರ್ ತಿಮ್ಮನಹಳ್ಳಿ, ಪೊಲೀಸ್ ಕ್ವಾಟ್ರಸ್, ಸಂಜಯನಗರ, ಟಿಬಿ ಸರ್ಕಲ್, ತಿರುಮಗೊಂಡನಹಳ್ಳಿ, ತೂಬಗೆರೆ ಪೇಟೆ, ವೈಶ್ಯರಬೀದಿ ಹಾಗೂ ವೀರಾಪುರದಲ್ಲಿ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ.
ಪ್ರಸ್ತುತ ತಾಲೂಕಿನಲ್ಲಿ 2430 ಮಂದಿಗೆ ಸೋಂಕು ತಗುಲಿದ್ದು, 1555 ಮಂದಿ ಗುಣಮುಖರಾಗಿದ್ದರೆ 82 ಮಂದಿ ಸಾವನಪ್ಪಿದ್ದಾರೆ.
ಸೋಂಕಿಗೆ ಒಳಗಾದ 56 ಮಂದಿಯನ್ನು ದೊಡ್ಡಬಳ್ಳಾಪುರ ಕೊವಿಡ್ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು,ಉಳಿದ 737 ಮಂದಿಯನ್ನು ದೇವನಹಳ್ಳಿ / ಹಜ್ ಭವನ/ಖಾಸಗಿ ಆಸ್ಪತ್ರೆ / ಹೊಂ ಹೈಸೋಲೇಷನ್ / ಇಸ್ತೂರಿನ ವಸತಿ ನಿಲಯ / ಬಚ್ಚಹಳ್ಳಿ ವಸತಿ ನಿಲಯ / ಬೆಂಗಳೂರಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.

