ದೊಡ್ಡಬಳ್ಳಾಪುರ: ಪವರ್ ಟಿವಿ ವಾಹಿನಿ ಪ್ರಸಾರ ಬಂದ್ ಮಾಡಿರುವುದು ಸರಿಯಾದ ಕ್ರಮವಲ್ಲ ಎಂದು ಪತ್ರಕರ್ತರು, ಸಂಪಾದಕರು ಆಕ್ಷೇಪಿಸಿದರು.
ಪವರ್ ಟಿವಿ ಸ್ಥಗಿತ ಖಂಡಿಸಿ ನಗರದ ತಾಲೂಕು ಕಚೇರಿ ಆವರಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ರಾಜಕೀಯ ವೈಷಮ್ಯದಿಂದ ಪವರ್ ಚಾನಲ್ ಸ್ಥಗಿತಗೊಳಿಸಿರುವುದು ಪತ್ರಿಕೋದ್ಯಮದ ಮೇಲಿನ ಹಲ್ಲೆಯಾಗಿದೆ. ಒಂದು ಟಿವಿ ಚಾನಲ್ ಬಂದ್ ನಿಂದಾಗಿ ಅದನ್ನು ಅವಲಂಬಿಸಿ ವೃತ್ತಿ ಮಾಡುತ್ತಿರುವ ಪತ್ರಕರ್ತರ ಬದುಕು ಬೀದಿಗೆ ಬೀಳುತ್ತದೆ.
ಟಿವಿ ಮಾಲಿಕರ ವಿರುದ್ದ ಕಾನೂನು ರೀತಿಯ ಕ್ರಮವಿದ್ದರೆ ತನಿಖೆ ನಡೆಸುವುದಕ್ಕೆ ಅಭ್ಯಂತರವಿಲ್ಲ. ಆದರೆ ರಾಜಕೀಯ ಪಕ್ಷ ಯಾವುದೇ ಆದರೂ ಟಿವಿ ಚಾನಲ್ ಬಂದಿಗೆ ಮುಂದಾಗಿರುವುದು ಖಂಡನೀಯ ಎಂದರು.
ಪ್ರತಿಭಟನೆಯ ನಂತರ ಉಪ ತಹಶಿಲ್ದಾರ್ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ವೇಳೆ ವಿವಿಧ ಪತ್ರಿಕೆಗಳ, ವೆಬ್ ಚಾನಲ್, ಹಾಗೂ ಖಾಸಗಿ ಚಾನಲ್ ಸಂಪಾದಕರು,ವರದಿಗಾರರು ಹಾಜರಿದ್ದರು.

