ದೊಡ್ಡಬಳ್ಳಾಪುರ: ತಾಲೂಕಿನ ಮಜರಾಹೊಸಹಳ್ಳಿ ಗ್ರಾಮಪಂಚಾಯಿತಿಗೆ ಒಳಪಡುವ ಎಲ್ಲಾ ಗ್ರಾಮಗಳಿಗೆ ಗ್ರಾಪಂ ಅನುದಾನದಲ್ಲಿ ಉಚಿತ ವೈಫೈ ನೀಡಲು ಸಿದ್ದತೆ ನಡೆಸಲಾಗಿರುವುದಾಗಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಘೋಷಿಸಿದರು.
ಪಾರದರ್ಶಕ ಆಡಳಿತ ಜಾರಿಯ ಉದ್ದೇಶದಿಂದ ತಾಲೂಕಿನ ಮಜರಾಹೊಸಹಳ್ಳಿ ಗ್ರಾಪಂನಲ್ಲಿ ಬುಧವಾರ ನಡೆದ ಜಮಾಬಂದಿ ಕಾರ್ಯಕ್ರಮದಲ್ಲಿ ಲೆಕ್ಕ ಪತ್ರ ಮಂಡಿಸಿ ಅವರು ಮಾತನಾಡಿದರು.ಗ್ರಾಮಪಂಚಾಯಿತಿಯಲ್ಲಿ ಸ್ವಂತ ಅನುದಾನ ಹೆಚ್ಚಿರುವುದರಿಂದ ಗ್ರಾಪಂಗೆ ಒಳಪಡುವ 7 ಗ್ರಾಮಗಳಲ್ಲಿ ಅಂಗನವಾಡಿ, ಶಾಲೆಗಳಿಗೆ ಹೈಟೆಕ್ ರೀತಿಯಲ್ಲಿ ಮೂಲಸೌಕರ್ಯ ಒತ್ತು. ಪ್ಯಾಕ್ಟರಿ ಸರ್ಕಲ್ ನಲ್ಲಿ ಜನೌಷಧಿ ಕೇಂದ್ರ ತೆರೆಯಲು ಸಿದ್ದತೆ ನಡೆಸಲಾಗಿದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾಪಂಚಾಯಿತಿ ಸಿಇಒ ನಾಗರಾಜ ಮಾತನಾಡಿ, ಕಂದಾಯ ಪಡೆಯುವ ಯಾವುದೇ ಸಂಸ್ಥೆ ಸರಕಾರವಾಗಲಿದ್ದು, ತೆರಿಗೆ ಸಂಗ್ರಹಿಸುವ ಪಂಚಾಯಿತಿಗೂ ಸ್ಥಳೀಯ ಸರಕಾರದ ಮಾನ್ಯತೆಯಿದೆ ಎಂದು ಸಭೆಯಲ್ಲಿ ಪ್ರಸ್ತಾಪಿಸಿದರು.ಅಲ್ಲದೆ ಅನುದಾನವನ್ನು ಸಾರ್ವಜನಿಕರ ಅಗತ್ಯಗೆ ಬಳಕೆಯಾಗುವ ಯೋಜನೆಗಳಿಗೆ ಹೆಚ್ಚಾಗಿ ಬಳಸಲು ಸಲಹೆ ನೀಡಿದರು.
ಸಭೆಯಲ್ಲಿ ಸ್ಥಳೀಯರು ಹಣಕಾಸಿನ ಲೆಕ್ಕಪತ್ರಗಳನ್ನು ಕೇಳುವ ಮೂಲಕ ಸಭೆಯಲ್ಲಿ ಗಮನ ಸೆಳೆದರು.
ಈ ವೇಳೆ ತಾಪಂ ಇಒ ಮುರುಡಯ್ಯ, ಗ್ರಾಮಪಂಚಾಯಿತಿ ಅಧ್ಯಕ್ಷೆ ನಳಿನಕರ್ಗಪ್ಪ, ಕಾರ್ಯದರ್ಶಿ ಹನುಂತಪ್ಪ ಮತ್ತಿತರಿದ್ದರು.

