ಬೆಂ.ಗ್ರಾ.ಜಿಲ್ಲೆ: ವಿವಿಧ ಯೋಜನೆಗಾಗಿ ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾಂಗದವರಿಂದ ಅರ್ಜಿ ಆಹ್ವಾನ

ದೊಡ್ಡಬಳ್ಳಾಪುರ: ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮ ನಿಯಮಿತದ ವತಿಯಿಂದ 2020-21ನೇ ಸಾಲಿನಲ್ಲಿ ಅಲೆಮಾರಿ/ಅರೆ ಅಲೆಮಾರಿ ಜನಾಂಗಕ್ಕೆ ಸೇರಿದ ಬೈರಾಗಿ (ಬಾವ), ಬಾ ಸಂತೋಷಿ-ಜೋಷಿ, ಬಾಜಿಗರ್, ಭರಡಿ, ಬುಡಬುಡಕಿ-ಜೋಷಿ-ಗೋಂಧಳಿ, ಚಾರ, ಚಿತ್ರಕಥಿ-ಜೋಷಿ, ಧೋಲಿ, ಢವೇರಿ, ದೊಂಬರಿ, ಘಿಸಾಡಿ, ಗರುಡಿ, ಗೋಪಾಲ್, ಗೊಂದಳಿ, ಹೆಳವ, ಜೋಗಿ, ಕೇಲ್ಕರಿ, ಕೋಲ್ಹಟಿ, ನಂದಿವಾಲ-ಜೋಷಿ-ಗೊಂದಳಿ, ಪುಲ್‍ಮಾಲ್ಲಿ, ನಾಥಪಂಥಿ-ಡೌರಿ-ಗೋಸಾವಿ, ನಿರ್ತಿಕಾರಿ, ಪಾಂಗ್ಯುಯಲ್, ಜೋಷಿ (ಸಾದ ಜೋಷಿ), ಸಾನ್ಸಿಯ, ಸರಾನಿಯ, ತಿರುಮಲಿ, ವಾಯ್ಡು, ವಾಸುದೇವ್, ವಾಡಿ, ವಾಗ್ರಿ, ವಿರ್, ಬಜನಿಯ, ಶಿಕ್ಕಲಿಗರ್, ಗೊಲ್ಲ, ಕಿಲ್ಲಿಕ್ಯಾತಸ್, ಸರೋಡಿ, ದುರ್ಗ-ಮುರ್ಗ (ಬುರ್‍ಬುರ್‍ಚ), ಹಾವಗಾರ್ (ಹಾವಾಡಿಗಾರ್), ಪಿಚಗುಂಟಲ, ಮಸಣಿಯ ಯೋಗಿ, (ಬೆಸ್ತರ್), ಬುಂಡಬೆಸ್ತ, ಕಟಬು, ದರ್ವೇಶ್, ಕಾಶಿ ಕಪಾಡಿ, ದೊಂಬಿದಾಸ ಮತ್ತು ಟೈಲ್‍ಪತರ್ ಜನರ ಆರ್ಥಿಕ ಅಭಿವೃದ್ಧಿಗಾಗಿ ಸ್ವಯಂ ಉದ್ಯೋಗ ಸಾಲ ಯೋಜನೆ, ಸ್ವ ಸಹಾಯ ಗುಂಪುಗಳ ಮೂಲಕ ಸಾಲ ಮತ್ತು ಸಹಾಯಧನ ಯೋಜನೆ, ಅರಿವು ಶೈಕ್ಷಣಿಕ ಸಾಲ ಯೋಜನೆ, ಗಂಗಾ ಕಲ್ಯಾಣ ನೀರಾವರಿ ಯೋಜನೆ, ಭೂಖರೀದಿ ಯೋಜನೆ ಮತ್ತು ಬ್ಯಾಂಕ್‍ಗಳ ಸಹಯೋಗದೊಂದಿಗೆ ಸಾಲ ಮತ್ತು ಸಹಾಯಧನ ಸೌಲಭ್ಯ ಪಡೆಯಲು ಇಚ್ಛಿಸುವ ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯ ಅರ್ಹ ಅಲೆಮಾರಿ/ಅರೆ ಅಲೆಮಾರಿ ಫಲಾನುಭವಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಈ ಯೋಜನೆಗಳಲ್ಲಿ ಸೌಲಭ್ಯ ಪಡೆಯಲು ಇಚ್ಛಿಸುವ ಅಲೆಮಾರಿ/ಅರೆ ಅಲೆಮಾರಿ ಜನಾಂಗದವರು ಅರ್ಜಿ ನಮೂನೆಯನ್ನು ಜಿಲ್ಲಾ ಕಚೇರಿಯಲ್ಲಿ ಅಥವಾ ನಿಗಮದ ವೆಬ್‍ಸೈಟ್‍ನಲ್ಲಿ ಪಡೆದು ಅರ್ಜಿಯೊಂದಿಗೆ ಅಗತ್ಯ ದಾಖಲೆಗಳಾದ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಮತ್ತು ಫೆÇೀಟೋವನ್ನು ಮತ್ತು ವಿದ್ಯಾರ್ಥಿಗಳ ವ್ಯಾಸಂಗದ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸುವುದು.

ಗಂಗಾ ಕಲ್ಯಾಣ ನೀರಾವರಿ ಯೋಜನೆಯಲ್ಲಿ ಸೌಲಭ್ಯ ಪಡೆಯಲು ಅರ್ಜಿದಾರರು ಹೊಂದಿರುವ ಜಮೀನಿನ ದಾಖಲಾತಿಗಳು ಮತ್ತು ಸಣ್ಣ ರೈತರ ಪ್ರಮಾಣ ಪತ್ರಗಳನ್ನು ಮತ್ತು ಭೂ ಖರೀದಿಗೆ ಸಂಬಂಧಿಸಿದಂತೆ ಜಮೀನುದಾರರ ಕಂದಾಯ ದಾಖಲೆಗಳೊಂದಿಗೆ ನಿಗಮದ ವೆಬ್‍ಸೈಟ್  www.dbcdc.karnataka.gov.iಟಿ ಮೂಲಕ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬಹುದು, ಅರ್ಜಿ ಸಲ್ಲಿಸಲು ಸಾಧ್ಯವಾಗದಿದ್ದಲ್ಲಿ, ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲಾತಿಗಳೊಂದಿಗೆ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವ್ಯವಸ್ಥಾಪಕರ ಕಚೇರಿಗೆ ಸಲ್ಲಿಸುವುದು. ಅರ್ಜಿ ಸಲ್ಲಿಸಲು 2020ರ ಅಕ್ಟೋಬರ್ 29 ಕೊನೆಯ ದಿನವಾಗಿದೆ.

ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮ ನಿಯಮಿತ, ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಕೊಠಡಿ ಸಂ.08, ಜಿಲ್ಲಾಡಳಿತ ಭವನ, ಬೀರಸಂದ್ರ ಗ್ರಾಮ, ಕುಂದಾಣ ಹೋಬಳಿ, ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ-562110 ಹಾಗೂ ನಿಗಮದ ದೂರವಾಣಿ ಸಂಖ್ಯೆ: 080-29605761 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮ ನಿಯಮಿತದ ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯವಸ್ಥಾಪಕರಾದ ಎನ್. ಸುಜಾತ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜಕೀಯ

ಮೇ 5ರಂದು ಅದಾಲತ್.. ಗ್ರಾ.ಪಂ ಸದಸ್ಯ ಸ್ಥಾನಗಳ ಕರಡು ಪ್ರಕಟಣೆಗೆ ಆಕ್ಷೇಪಣೆ ಸಲ್ಲಿಸುವ ಅವಧಿ ವಿಸ್ತರಣೆ

ಮೇ 5ರಂದು ಅದಾಲತ್.. ಗ್ರಾ.ಪಂ ಸದಸ್ಯ ಸ್ಥಾನಗಳ ಕರಡು ಪ್ರಕಟಣೆಗೆ ಆಕ್ಷೇಪಣೆ ಸಲ್ಲಿಸುವ

ಕರ್ನಾಟಕ ಪಂಚಾಯತ್‌ರಾಜ್ ಸೀಮಾ ನಿರ್ಣಯ ಆಯೋಗ ಏಪ್ರಿಲ್ 18ರಂದು ಹೊರಡಿಸಿರುವ ರಾಜ್ಯದ ಗ್ರಾಮ ಪಂಚಾಯಿತಿಗಳ ಚುನಾಯಿತ ಸದಸ್ಯ (Grama Panchayat member) ಸ್ಥಾನಗಳ ಕರಡು ಪ್ರಕಟಣೆಗೆ ಆಕ್ಷೇಪಣೆ ಸಲ್ಲಿಸುವ ಅವಧಿಯನ್ನು ಮೇ 2ರ ಸಂಜೆ

[ccc_my_favorite_select_button post_id="121469"]
ಮಧ್ಯವರ್ತಿಗಳನ್ನು ದೂರವಿಟ್ಟು, ಜನರ ಸಮಸ್ಯೆಗಳನ್ನು ಬಗೆಹರಿಸಿ: ಸಿಎಂ ಸಿದ್ದರಾಮಯ್ಯ ಸೂಚನೆ

ಮಧ್ಯವರ್ತಿಗಳನ್ನು ದೂರವಿಟ್ಟು, ಜನರ ಸಮಸ್ಯೆಗಳನ್ನು ಬಗೆಹರಿಸಿ: ಸಿಎಂ ಸಿದ್ದರಾಮಯ್ಯ ಸೂಚನೆ

ಮಧ್ಯವರ್ತಿಗಳು (Brokers) ಎಲ್ಲೆಡೆ ಇರುತ್ತಾರೆ ಆದರೆ ಅವರನ್ನು ಕಚೇರಿಯೊಳಗೆ ಬಿಟ್ಟುಕೊಳ್ಳದೇ ಹೊರಗೆ ಕಳಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ( Cm Siddaramaiah) ಅಧಿಕಾರಿಗಳಿಗೆ ಸೂಚಿಸಿದರು

[ccc_my_favorite_select_button post_id="121435"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ದೊಡ್ಡಬಳ್ಳಾಪುರ: ವಕೀಲರ ಭವನದಲ್ಲಿ ವಾರ್ಷಿಕ ಕ್ರೀಡಾಕೂಟದ ಪ್ರಶಸ್ತಿ ವಿತರಣೆ..

ದೊಡ್ಡಬಳ್ಳಾಪುರ: ವಕೀಲರ ಭವನದಲ್ಲಿ ವಾರ್ಷಿಕ ಕ್ರೀಡಾಕೂಟದ ಪ್ರಶಸ್ತಿ ವಿತರಣೆ..

ದೊಡ್ಡಬಳ್ಳಾಪುರ ತಾಲೂಕು ವಕೀಲರ ಸಂಘ ಹಾಗೂ ನ್ಯಾಯಾಂಗ ಇಲಾಖೆಯಿಂದ ವಾರ್ಷಿಕ ಕ್ರೀಡಾಕೂಟ 2026-27ರ (Annual sports event) ಪ್ರಶಸ್ತಿ ವಿತರಣೆ ಕಾರ್ಯಕ್ರಮ (Awards ceremony) ನಗರದ ವಕೀಲರ ಭವನದಲ್ಲಿ ಆಯೋಜಿಸಲಾಗಿತ್ತು.

[ccc_my_favorite_select_button post_id="121459"]
ದೊಡ್ಡಬಳ್ಳಾಪುರ: ಸಿಡಿಲು ಬಡಿದು 2 ಹಸುಗಳ ಸಾವು..!

ದೊಡ್ಡಬಳ್ಳಾಪುರ: ಸಿಡಿಲು ಬಡಿದು 2 ಹಸುಗಳ ಸಾವು..!

ಬಿಸಿಲ ಬೇಗೆಯಿಂದ ದೊಡ್ಡಬಳ್ಳಾಪುರ (Doddaballapur) ತಾಲೂಕಿನ ಜನತೆ ತತ್ತರಿಸುತ್ತಿರುವ ನಡುವೆಯೇ ಇಂದು ಮಧ್ಯಾಹ್ನದಿಂದ ತಾಲೂಕಿನ ಹಲವೆಡೆ ಮಳೆಯ ಸಿಂಚನವಾಗಿದೆ.

[ccc_my_favorite_select_button post_id="121471"]
ದೊಡ್ಡಬಳ್ಳಾಪುರ: ಅಪಘಾತ.. ಬೈಕ್ ಸವಾರ ದುರ್ಮರಣ

ದೊಡ್ಡಬಳ್ಳಾಪುರ: ಅಪಘಾತ.. ಬೈಕ್ ಸವಾರ ದುರ್ಮರಣ

ಹೆಲ್ಮೆಟ್ ಕಡ್ಡಾಯ ಜಾರಿ ಮಾಡಿ, ಹಲವು ರೀತಿಯಲ್ಲಿ ಅರಿವು ಮೂಡಿಸಿದರು, ಬೈಕ್ ಸವಾರರು ಹೆಲ್ಮೆಟ್ ಧರಿಸದೆ ಬೇಜವಬ್ದಾರಿ ತೋರಿಸುತ್ತಿದ್ದಾರೆ. ಶನಿವಾರ ರಾತ್ರಿ ಸಂಭವಿಸಿದ ಅಪಘಾತದಲ್ಲಿ (Accident) ಇಬ್ಬರು ಬ್ಯಾಂಕ್ ಉದ್ಯೋಗಿ ಯುವಕರು ಕೂಡ ಹೆಲ್ಮೆಟ್

[ccc_my_favorite_select_button post_id="121414"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]