ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಇಂದು (ಅಕ್ಟೋಬರ್ 14 ರಂದು) 230 ಪುರುಷರು ಹಾಗೂ 114 ಮಹಿಳೆಯರು ಸೇರಿದಂತೆ 344 ಜನರಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ವರದಿ ತಿಳಿಸಿದೆ.
ವರದಿಯ ಅನ್ವಯ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ 68 ಪುರುಷರು ಮತ್ತು 30 ಮಹಿಳೆಯರು, ನೆಲಮಂಗಲ ತಾಲ್ಲೂಕಿನಲ್ಲಿ 58 ಪುರುಷರು ಮತ್ತು 37 ಮಹಿಳೆಯರು, ಹೊಸಕೋಟೆ ತಾಲ್ಲೂಕಿನಲ್ಲಿ 52 ಪುರುಷರು ಮತ್ತು 28 ಮಹಿಳೆಯರು, ದೇವನಹಳ್ಳಿ ತಾಲ್ಲೂಕಿನಲ್ಲಿ 47 ಪುರುಷರು ಮತ್ತು 15 ಮಹಿಳೆಯರಾಗಿದ್ದಾರೆ.
ಅಲ್ಲದೆ ಬೆಂಗಳೂರು ನಗರ ಜಿಲ್ಲೆ ಹಾಗೂ ಇತರೆ ಜಿಲ್ಲೆಗಳಿಗೆ ಸೇರಿದ 5 ಪುರುಷರು ಹಾಗೂ 4 ಮಂದಿ ಮಹಿಳೆಯರಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು ಇಬ್ಬರು ಸಾವನಪ್ಪಿದ್ದಾರೆ ಎನ್ನಲಾಗಿದೆ.
ಉಳಿದಂತೆ ಇತರ ಜಿಲ್ಲೆಯಂತೆ ಮಾಹಿತಿ ನೀಡದ ಬೆಂ.ಗ್ರಾ.ಜಿಲ್ಲೆಯ ಬುಲೆಟಿನ್ ಗೊಂದಲ ಮುಂದುವರೆದಿದೆ ಎನ್ನುವ ಆರೋಪ ಸಾರ್ವಜನಿಕವಲಯದ್ದಾಗಿದೆ.

