ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ: ಇತ್ತೀಚೆಗಷ್ಟೇ ವರ್ಗಾವಣೆಯಾದ ಸರ್ಕಲ್ ಇನ್ಸ್ಪೆಕ್ಟರ್ ರಾಘವ ಎಸ್.ಗೌಡರಿಗೆ ಪೊಲೀಸ್ ಇಲಾಖೆವತಿಯಿಂದ ನಗರ ಪೊಲೀಸ್ ಠಾಣೆ ಸಭಾಂಗಣದಲ್ಲಿ ಬುಧವಾರ ಸಂಜೆ ಬೀಳ್ಕೋಡುಗೆ ಸಮಾರಂಭ ಆಯೋಜಿಸಲಾಗಿತ್ತು.
ಈ ವೇಳೆ ಡಿವೈಎಸ್ಪಿ ಟಿ.ರಂಗಪ್ಪ, ಮಾತನಾಡಿ ಪೊಲೀಸ್ ಇಲಾಖೆಯ ಮೇಲೆ ಇರುವಂತಹ ಹಲವು ಒತ್ತಡದ ನಡುವೆಯೂ ಜನತೆಗೆ ಇಷ್ಟವಾಗುವಂತೆ ಕಾರ್ಯ ನಿರ್ವಹಿಸುವುದು ಸಾಧ್ಯ. ಕರೊನಾ ಸೋಂಕಿನ ಸಂದರ್ಭದಲ್ಲಿ ರಾಘವ ಅವರ ಕಾರ್ಯವೈಖರಿ ಪ್ರಶಂಸನೀಯ. ಮುಂದಿನ ದಿನಗಳಲ್ಲಿ ಡಿವೈಎಸ್ಪಿ ಆಗಿ ಮತ್ತೆ ಇದೇ ವೃತ್ತಕ್ಕೆ ಬಂದು ಕಾರ್ಯ ನಿರ್ವಹಿಸುವಂತಾಗಲಿ ಎಂದರು.
ಕರವೇ ಪ್ರವೀಣ್ ಶೆಟ್ಟಿ ಬಣದ ರಾಜ್ಯ ಕಾರ್ಯದರ್ಶಿ ರಾಜಘಟ್ಟರವಿ ಮಾತನಾಡಿ, ಕಾರೊನಾ ಸೋಂಕು ತಡೆಗಟ್ಟಲು ಘೋಷಿಸಲಾದ ಲಾಕ್ ಡೌನ್ ಸಂಧರ್ಭದಲ್ಲಿ ಸಂಘಟನೆಗಳೊಂದಿಗೆ ರಾಘವ ಎಸ್.ಗೌಡ ಸೇರಿ ಹಸಿವಿನಿಂದ ಬಳಲಿದವರಿಗೆ ನೆರವಾಗಿದ್ದು ಅವಿಸ್ಮರಣೀಯ ಕಾರ್ಯವಾಗಿದ್ದು,ತಾಲೂಕಿನ ಜನತೆಯೊಂದಿಗೆ ಉತ್ತಮ ಒಡನಾಟಗಳಿಸಿದ ವ್ಯಕ್ತಿ ಎಂದರು.
ಸರ್ಕಲ್ ಇನ್ಸ್ಪೆಕ್ಟರ್ ರಾಘವ ಎಸ್.ಗೌಡ ಮಾತನಾಡಿ, ದೊಡ್ಡಬಳ್ಳಾಪುರ ತಾಲ್ಲೂಕಿನ ಕಾರ್ಯನಿರ್ವಹಿಸಿದ ಕ್ಷಣ ನನ್ನ ಜೀವನದ ಅವಿಸ್ಮರಣೀಯವಾದುದ್ದಾಗಿದೆ ಎಂದರು.
ಈ ವೇಳೆ ಸರ್ಕಲ್ ಇನ್ಸ್ಪೆಕ್ಟರ್ ಎಂ.ಬಿ.ನವೀನ್ ಕುಮಾರ್, ರೈತ ಸಂಘದ ಬಚ್ಚಹಳ್ಳಿ ಸತೀಶ್, ಸಿಐಟಿಯು ಸಂಘಟನೆಯ ವೆಂಕಟೇಶ್ ಮಾತನಾಡಿದರು.
ಇದೇ ಸಂಧರ್ಭದಲ್ಲಿ ಸಂಘಟನೆಗಳು ಹಾಗೂ ನಾಗರಿಕರು ಅಭಿನಂದನೆ ಸಲ್ಲಿಸಿದರು. ಸಮಾರಂಭದಲ್ಲಿ ಸಬ್ ಇನ್ಸ್ಪೆಕ್ಟರ್ ಗಳಾದ ಬೇಬಿವಾಲೇಕರ್, ಸೋಮಶೇಖರ್, ಮಂಜೇಗೌಡ, ಶಂಕರ್, ರಂಗಸ್ವಾಮಯ್ಯ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಹಾಜರಿದ್ದರು.

