ದುಬೈ: ಕಳೆದ ರಾತ್ರಿ ನಡೆದ ಸನ್ರೈಸರ್ಸ್ ಹೈದರಾಬಾದ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯದ ಬಳಿಕ ಸಿಎಸ್ ಕೆ ನಾಯಕ ಮಹೇಂದ್ರ ಸಿಂಗ್ ಧೋನಿ ಅಭಿಮಾನಿಗಳಿಂದ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ.
ಆಟದ ವೇಳೆ ವೈಡ್ ವಿಚಾರವಾಗಿ ಎಂಎಸ್ ಧೋನಿ ಅಂಪೈರ್ ಮೇಲೆ ತೋರಿದ ಒತ್ತಡದ ನಡತೆಯನ್ನು ಬಲವಾಗಿ ಖಂಡಿಸಿದ್ದಾರೆ ಹಾಗೂ ಸಿಎಸ್ಕೆ ಫ್ರಾಂಚೈಸಿಯನ್ನು ರದ್ದು ಮಾಡಿ ಒತ್ತಾಯಿಸಲಾಭಿಸಿದ್ದಾರೆ.
ಕಾರಣ ಏನು..? ಸನ್ರೈಸರ್ಸ್ ಹೈದರಾಬಾದ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯದ ವೇಳೆ ಶಾರ್ದೂಲ್ ಠಾಕೂರ್ ಅವರ ಎರಡನೇ ಎಸೆತ ವೈಡ್ ಇತ್ತು, ಆದರೆ ಅಂಪೈರ್ ರೀಫೆಲ್ ವೈಡ್ ನೀಡಲಿಲ್ಲ.
ಮೊದಲನೇ ಬಾರಿ ಕೈ ವೈಡ್ ಸಿಗ್ನಲ್ ಅರ್ಧ ನೀಡಿದ್ದರು, ಆದರೆ, ಎಂಎಸ್ ಧೋನಿ ಕೋಪದ ಮುಖವನ್ನು ನೋಡಿದ ಬಳಿಕ, ತಮ್ಮ ನಿರ್ಧಾರವನ್ನು ಬದಲಿಸಿದರು. ಅಂತಿಮವಾಗಿ ವೈಡ್ ಎಂದು ಘೋಷಿಸಿದರು. ಇದರಿಂದ ಎಂಎಸ್ ಧೋನಿ ಅಂಪೈರ್ ವಿರುದ್ಧ ಬೆದರಿಸುವ ಹಾಗೆ ವರ್ತಿಸಿದ್ದು ಆಕ್ರೋಶಕ್ಕೆ ಕಾರಣವಾಗಿದೆ.
ಈಗಾಗಲೇ ನಿಷೇಧದಿಂದ ಹೊರಬಂದಿರುವ ಸಿಎಸ್ ಕೆ ತಂಡದ ಮೇಲಿನ ಆರೋಪ ಬೆನ್ನ ಹಿಂದಿರುವಾಗಲೇ, ಪದೇ ಪದೇ ಇಂತಹ ಘಟನೆಗಳು ಎದುರಾಳಿ ತಂಡದ ಬೆಂಬಲಿಗ ಟ್ರೋಲರ್ಸ್ ಗಳು ಸಿಎಸ್ಕೆ ತಂಡವನ್ನು ಕಾಲೆಳೆಯುತ್ತಿದ್ದಾರೆ.

