ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಇಂದು (ಅಕ್ಟೋಬರ್ 15 ರಂದು) 307 ಪುರುಷರು ಹಾಗೂ 147 ಮಹಿಳೆಯರು ಸೇರಿದಂತೆ 454 ಜನರಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ವರದಿ ತಿಳಿಸಿದೆ.
ವರದಿಯ ಅನ್ವಯ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ 85 ಪುರುಷರು ಮತ್ತು 46 ಮಹಿಳೆಯರು, ನೆಲಮಂಗಲ ತಾಲ್ಲೂಕಿನಲ್ಲಿ 62 ಪುರುಷರು ಮತ್ತು 37 ಮಹಿಳೆಯರು, ಹೊಸಕೋಟೆ ತಾಲ್ಲೂಕಿನಲ್ಲಿ 54 ಪುರುಷರು ಮತ್ತು 25 ಮಹಿಳೆಯರು, ದೇವನಹಳ್ಳಿ ತಾಲ್ಲೂಕಿನಲ್ಲಿ 91 ಪುರುಷರು ಮತ್ತು 32 ಮಹಿಳೆಯರಾಗಿದ್ದಾರೆ.
ಅಲ್ಲದೆ ಬೆಂಗಳೂರು ನಗರ ಜಿಲ್ಲೆ ಹಾಗೂ ಇತರೆ ಜಿಲ್ಲೆಗಳಿಗೆ ಸೇರಿದ 15 ಪುರುಷರು ಹಾಗೂ 7 ಮಂದಿ ಮಹಿಳೆಯರಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಯಾವುದೇ ಸಾವು ಸಂಭವಿಸಿಲ್ಲ ಎನ್ನಲಾಗಿದೆ.
ಉಳಿದಂತೆ ರಾಜ್ಯದ ಇತರ ಜಿಲ್ಲೆಯಂತೆ ಕೋವಿಡ್ ಬುಲೆಟಿನ್ ಮಾಹಿತಿ ನೀಡದ ಬೆಂ.ಗ್ರಾ.ಜಿಲ್ಲೆಯ ಮಾಹಿತಿ ಗೊಂದಲ ಮುಂದುವರೆದಿದೆ ಎನ್ನುವ ಆರೋಪ ಸಾರ್ವಜನಿಕವಲಯದ್ದು.

