ದೊಡ್ಡಬಳ್ಳಾಪುರ: ಅಬ್ದುಲ್ ಕಲಾಂ ರವರ ಜನ್ಮದಿನದ ಪ್ರಯುಕ್ತ ಅಬ್ದುಲ್ ಕಲಾಂ ಪ್ರಜಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಶಾಲಾ ಮಟ್ಟದ ಸ್ಪರ್ಧೆಯಲ್ಲಿ ವಿವಿಧ ಶಾಲೆಯ ವಿದ್ಯಾರ್ಥಿಗಳು ಅಬ್ದುಲ್ ಕಲಾಂ ರವರ ಆದರ್ಶ ಮತ್ತು ಸಾಧನೆಗಳ ಕುರಿತು ಕ್ವಿಜ್ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅಬ್ದುಲ್ ಕಲಾಂ ಪ್ರಜಾ ಸಮಿತಿಯ ದೊಡ್ಡಬಳ್ಳಾಪುರ ವ್ಯವಸ್ಥಾಪಕ ಗೋಪಿನಾಥ್ ಎಸ್.ಎನ್ ಅಬ್ದುಲ್ ಕಲಾಂರ ಜೀವನ, ಸಾಧನೆ ಹಾಗೂ ಮೌಲ್ಯಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.
ಸುಮಾರು ಮುವತ್ತು ಮಕ್ಕಳು ಸ್ಪರ್ಧೆಯಲ್ಲಿ ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸಿ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದರು.
ಸ್ಪರ್ಧೆಯಲ್ಲಿ ಎಂ. ಎಸ್.ವಿ.ಪಬ್ಲಿಕ್ ಶಾಲೆಯ ತನಿಷಾ ಪ್ರಥಮ ಸ್ಥಾನ,ದೇವರಾಜ್ ಅರಸ್ ಶಾಲೆಯ ಚಿನ್ಮಯಿ ದ್ವಿತೀಯ ಸ್ಥಾನ ಹಾಗೂ ಆದಿತ್ಯ ಪಬ್ಲಿಕ್ ಶಾಲೆಯ ಹರ್ಷಿತ್ ಗೌಡ ತೃತೀಯ ಸ್ಥಾನ ಪಡೆದುಕೊಂಡರು.
ಈ ವೇಳೆ ಅಬ್ದುಲ್ ಕಲಾಂ ಪ್ರಜಾ ಸಮಿತಿ ಸದಸ್ಯರಾದ ಉಮೇಶ್, ಶರತ್ ಎಂಎಸ್ ವಿ ಶಾಲೆ ಶಿಕ್ಷಕಿ ಮಂಜುಳ.ಎಂ, ಆದರ್ಶ ಪಬ್ಲಿಕ್ ಶಾಲೆಯ ಶಿಕ್ಷಕಿಯರಾದ ನೂರ್ಜಾನ್, ಜಬೀನ, ಸಿಬ್ಬಂದಿಗಳಾದ ಮಂಜುನಾಥ್, ಚಂದ್ರಶೇಖರ್, ರವಿಕಿರಣ್ ರೆಡ್ಡಿ, ಮೇಘ, ನಯನ, ಸುಪ್ರಿಯಾ, ಐಶ್ವರ್ಯ, ಕಾರ್ತಿಕ್, ಅರುಣ್ ಮತ್ತಿತರಿದ್ದರು .

