ಶಾರ್ಜಾ: ಆರ್ಸಿಬಿ ಮತ್ತು ಕಿಂಗ್ಸ್ ಇಲೆವೆನ್ ತಂಡಗಳ ಎರಡನೇ ಪಂದ್ಯದಲ್ಲಿ ಪಂಜಾಬ್ ಎದುರು ಆರ್ ಸಿಬಿ ಮತ್ತೆ ಸೋಲನ್ನು ಅನುಭವಿಸಿದೆ.
ಇಂದು ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ RCB 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 171 ರನ್ ಗಳಿಸಿತು.
172 ರನ್ಗಳ ಬೆನ್ನತ್ತಿದ ಕಿಂಗ್ಸ್ ಇಲೆವೆನ್ ಪಂಜಾಬ್ ಕೊನೆಯ ಓವರ್ನ ಕೊನೆಯ ಬಾಲ್ನಲ್ಲಿ ಗೆಲುವನ್ನು ತನ್ನದಾಗಿಸಿಕೊಂಡಿತು.
ಪಂಜಾಬ್ ಪರ ಕೆ.ಎಲ್ ರಾಹುಲ್ 61, ಮಯಾಂಕ್ ಅಗರ್ವಾಲ್ 45, ಜ್ರಿಸ್ ಗೇಯ್ಲ್ 53, ನಿಕೋಲಸ್ ಪೋರನ್ 6 ರನ್ ಗಳಿಸಿದರು.
ಮೂರನೆ ಕ್ರಮಾಂಕದಲ್ಲಿ ಬಾರದ ಎಬಿಡಿ ಹಾಗೂ ಬೌಲಿಂಗ್ ಬದಲಾವಣೆ ಆರ್ ಸಿಬಿ ಸೋಲಿಗೆ ಕಾರಣ ಎನ್ನಲಾಯಿತು.

