ದೊಡ್ಡಬಳ್ಳಾಪುರ: ತಾಲ್ಲೂಕು ವಕೀಲರ ಸಂಘಕ್ಕೆ ಅ.17 ರಂದು ಬೆಳಿಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಗರದ ನ್ಯಾಯಾಲಯ ಆವರಣದಲ್ಲಿನ ವಕೀಲರ ಸಂಘದ ಭವನದಲ್ಲಿ ಮತದಾನ ನಡೆಯಲಿದೆ.
15 ಸ್ಥಾನಗಳ ಪೈಕಿ ಅಧ್ಯಕ್ಷ, ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಸಹ ಕಾರ್ಯದರ್ಶಿ,ಖಜಾಂಚಿ ಹಾಗೂ 10 ಜನ ನಿರ್ದೇಶಕರ ಆಯ್ಕೆ ನಡೆಯಲಿದೆ. ಇದರಲ್ಲಿ 2 ಸ್ಥಾನ ಮಹಿಳಾ ಅಭ್ಯರ್ಥಿಗಳಿಗೆ, ಒಂದು ಸ್ಥಾನ ಪರಿಶಿಷ್ಟ ವರ್ಗಕ್ಕೆ ಮೀಸಲಾಗಿದೆ.
15 ಸ್ಥಾನಗಳಿಗೆ ಎರಡೂ ಬಣಗಳಿಂದ 30 ಜನ ಹಾಗೂ ಒಬ್ಬರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ತಾಲ್ಲೂಕು ವಕೀಲರ ಸಂಘದಲ್ಲಿ ಒಟ್ಟು 230 ಜನ ಸದಸ್ಯರಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಬಿ.ಎಂ.ಬೈರೇಗೌಡ, ಎಂ.ರವಿ, ಉಪಾಧ್ಯಕ್ಷ ಸ್ಥಾನಕ್ಕೆ ಎಚ್.ಎಂ.ಮಂಜುನಾಥ್, ಸಿ.ಪ್ರಕಾಶ್ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ, ಎ.ಕೃಷ್ಣಮೂರ್ತಿ, ಡಿ.ಕೆ.ಲಕ್ಷ್ಮೀನಾರಾಯಣ್ , ಎನ್.ಮೋಹನ್, ಸಹ ಕಾರ್ಯದರ್ಶಿ ಸ್ಥಾನಕ್ಕೆ ಬಿ.ಎಸ್.ರೇಖಾ, ಸಿ.ವಿಜಯ್ಕುಮಾರ್, ಖಜಾಂಚಿ ಸ್ಥಾನಕ್ಕೆ ಎ.ವಿ.ಮುರಳೀಧರ, ಎಂ.ಮುನಿರಾಜು ಸ್ಫರ್ಧಿಸಿದ್ದಾರೆ. ಮತಗಳ ಎಣಿಕೆ ಸಂಜೆ 4 ಗಂಟೆಯ ನಂತರ ನಡೆಯಲಿದೆ.

