ದೊಡ್ಡಬಳ್ಳಾಪುರ: ನವೆಂಬರ್ ತಿಂಗಳಿಂದ ಎಲ್‌ಪಿಜಿ ಸಿಲಿಂಡರ್ ಹೋಮ್ ಡೆಲಿವರಿಗೆ ಸಂಬಂಧಿಸಿದಂತೆ ನಿಯಮಗಳು ಬದಲಾಗಲಿದೆ.
ದೇಶೀಯ ಸಿಲಿಂಡರ್ ಕಳ್ಳತನವನ್ನು ತಡೆಗಟ್ಟಲು ಮತ್ತು ಗ್ರಾಹಕರಿಗೆ ಸಿಲಿಂಡರನ್ನು ಸೂಕ್ತ ರೀತಿಯಲ್ಲಿ ತಲುಪಿಸಲು ತೈಲ ಕಂಪನಿಗಳು ನವೆಂಬರ್ 1 ರಿಂದ ಹೊಸ ಎಲ್ಪಿಜಿ ಸಿಲಿಂಡರ್ ವಿತರಣಾ ವ್ಯವಸ್ಥೆಯನ್ನು ಜಾರಿಗೆ ತರಲಿವೆ.
ಈ ಹೊಸ ವ್ಯವಸ್ಥೆಯನ್ನು ಡಿಎಸಿ ಅಂದರೆ ಡೆಲಿವರಿ ದೃಢೀಕರಣ ಕೋಡ್ ಎಂದು ಕರೆಯಲಾಗುತ್ತಿದೆ. ಸಿಲಿಂಡರ್ ಬುಕ್ ಆದ ನಂತರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕೋಡ್ ಕಳುಹಿಸಲಾಗುತ್ತದೆ. ಡೆಲಿವರಿ ಬಾಯ್ ಮನೆಗೆ ಬಂದಾಗ ಕೋಡ್ ತೋರಿಸಬೇಕು. ನಂತರದಲ್ಲಿ ಡೆಲಿವರಿ ಬಾಯ್ ಸಿಲಿಂಡರ್ ಮನೆಗೆ ನೀಡಲಿದ್ದಾನೆ.
ಮೊಬೈಲ್ ಸಂಖ್ಯೆ ನವೀಕರಿಸದ ಗ್ರಾಹಕರಿದ್ದರೆ, ಡೆಲಿವರಿ ಬಾಯ್ ಬಳಿ ಅಪ್ಲಿಕೇಷನ್ ಇರುತ್ತದೆ. ಅದರಲ್ಲಿ ಅಪ್ಡೇಟ್ ಮಾಡುವ ಮೂಲಕ ಕೋಡ್ ಪಡೆಯಬೇಕಾಗುತ್ತದೆ. ವಿಳಾಸ ತಪ್ಪಾಗಿರುವ ಅಥವಾ ಮೊಬೈಲ್ ನಂಬರ್ ತಪ್ಪಾಗಿರುವ ಸಂದರ್ಭದಲ್ಲಿ ಗ್ರಾಹಕರು ತೊಂದರೆ ಅನುಭವಿಸಬೇಕಾಗುತ್ತದೆ. ತೈಲ ಕಂಪನಿಗಳು ಸದ್ಯ 100 ಸ್ಮಾರ್ಟ್ ಸಿಟಿಗಳಲ್ಲಿ ಈ ಯೋಜನೆ ಜಾರಿಗೆ ತರಲಿವೆ. ನಂತರದಲ್ಲಿ ಬೇರೆ ನಗರಗಳಿಗೆ ಇದನ್ನು ವಿತರಿಸುವ ಯೋಜನೆ ಇದೆ.
ಏನು ಮಾಡಬೇಕು..?
ಸಿಲಿಂಡರ್‌ಗೆ ಬುಕಿಂಗ್ ಬಳಿಕ ಗ್ರಾಹಕನ ನೋಂದಾಯಿತ ಮೊಬೈಲ್‌ಗೆ ಒಟಿಪಿ ರವಾನಿಸಲಾಗುತ್ತದೆ. ಸಿಲಿಂಡರ್ ತರುವ ವ್ಯಕ್ತಿಗೆ ಈ ಒಟಿಪಿ ಸಂಖ್ಯೆ ನೀಡಬೇಕು. ವಾಣಿಜ್ಯ ಸಿಲಿಂಡರ್‌ಗಳಿಗೆ ಈ ನಿಯಮ ಅನ್ವಯವಾಗುವುದಿಲ್ಲ.

