ದೊಡ್ಡಬಳ್ಳಾಪುರ: ಮಾಜಿ ಕೇಂದ್ರ ಸಚಿವ ಅರ್ ಎಲ್ ಜಾಲಪ್ಪ ಅವರ ಜನ್ಮದಿನದ ಅಂಗವಾಗಿ ನಗರದ ಆರ್.ಎಲ್ ಜಾಲಪ್ಪ ಸಮೂಹ ಸಂಸ್ಥೆಗಳವತಿಯಿಂದ ಗಿಡ ನೆಡಲಾಯಿತು.
ನಿರ್ದೇಶಕ ಜೆ.ರಾಜೇಂದ್ರ ಮಾತನಾಡಿ, ನೇರ ನಿಷ್ಥುರವಾದಿ ಹಾಗೂ ಜನಪರ ನೀರಾವರಿ ಯೋಜನೆಗಳ ಮುಂದಾಲೋಚನೆ ಉಳ್ಳ ರಾಜಕೀಯ ಮುತ್ಸದ್ದಿ ಜಾಲಪ್ಪನವರು ಇಂದಿನ ರಾಜಕಾರಣಿಗಳಿಗೆ ಮಾದರಿಯಾದವರು.
ದೊಡ್ಡಬಳ್ಳಾಪುರಕ್ಕೆ ಕೈಗಾರಿಕಾ ಪ್ರದೇಶ ತರುವ ಮೂಲಕ ಸಾವಿರಾರು ಜನರಿಗೆ ಉದ್ಯೋಗ ಒದಗಿಸಿದ ಕೀರ್ತಿ ಅವರದೆಂದರು.
ಈ ವೇಳೆ ಪ್ರಾಂಶುಪಾಲರಾದ ಶ್ರೀನಿವಾಸ್ ರೆಡ್ಡಿ ಸೇರಿದಂತೆ ವಿವಿಧ ಕಾಲೇಜುಗಳ ಪ್ರಾಂಶುಪಾಲರು, ಸಿಬ್ಬಂದಿ ಹಾಜರಿದ್ದರು.
ಅಭಿಮಾನಿಗಳಿಂದ ತೂಬಗೆರೆಯಲ್ಲಿ ಅಭಿನಂದನೆ ಸಲ್ಲಿಕೆ
ಜಾಲಪ್ಪರ ಜನ್ಮದಿನದ ಅಂಗವಾಗಿ ತೂಬಗೆರೆಯ ಸ್ವಗೃಹದಲ್ಲಿ ಅಭಿಮಾನಿಗಳು ಜಾಲಪ್ಪರ ಭೇಟಿಯಾಗಿ ಅಭಿನಂದನೆ ಸಲ್ಲಿಸಿದರು.

