ನವದೆಹಲಿ: ಇಂದು ಸಂಜೆ 6ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ದೇಶದ ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಕೆಲವೆ ನಿಮಿಷಗಳ ಹಿಂದೆ ಟ್ವಿಟ್ ಮಾಡಿರುವ ಅವರು, ಸಂಜೆ 6 ಗಂಟೆಗೆ ರಾಷ್ಟ್ರದ ಜನರನ್ನು ಉದ್ದೇಶಿಸಿ ಸಂದೇಶವನ್ನು ಹಂಚಿಕೊಳ್ಳಲಿದ್ದು ತಪ್ಪದೇ ವೀಕ್ಷಿಸಿ ಎಂದಿದ್ದಾರೆ.
ಮೋದಿ ಅವರ ಟ್ವಿಟ್ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದು, ತೀವ್ರ ಚರ್ಚೆಗೆ ಕಾರಣವಾಗಿದೆ. ಇನ್ನು ಮುಂದುವರೆದು ಕರೊನಾ ಲಸಿಕೆಯ ಕುರಿತಾದ ಶುಭಸುದ್ದಿ ನೀಡಲಿದ್ದಾರಾ..? ಯಾವ ಸಂದೇಶ ನೀಡಲಿದ್ದಾರೆ, ದಿಢೀರ್ ಸಂದೇಶ ಯಾವ ಕಾರಣಕ್ಕೆ ಎಂಬ ಚರ್ಚೆ ಆರಂಭವಾಗಿದೆ.
( ಪ್ರಧಾನಿಯವರ ಭಾಷಣ ಹರಿತಲೇಖನಿಯಲ್ಲಿ ನೇರ ಪ್ರಸಾರವಾಗಲಿದೆ )

