ಟ್ರೋಲಾಗುತ್ತಿದ್ದ ಸಿರಾಜ್ ಒಂದೇ ರಾತ್ರಿ ಹೀರೋ ಆದ / ಬಡ ಆಟೋ ಡ್ರೈವರ್ ಮಗನತ್ತ ಎಲ್ಲರ ಚಿತ್ತ

ದೊಡ್ಡಬಳ್ಳಾಪುರ: ಮೊಹಮ್ಮದ್ ಸಿರಾಜ್ ಎಲ್ಲರಿಗೂ ನೆನಪಾಗಿದ್ದು ಅಬುಧಾಬಿಯಲ್ಲಿ ಬುಧವಾರ ರಾತ್ರಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಸಿರಾಜ್ ಎರಡು ಮೇಡನ್ ಓವರ್ ದಾಖಲೆಯ ಸಮೇತ ಮೂರು ವಿಕೆಟ್ ಗಳಿಸಿದಾಗ.

ಇಡೀ ಐಪಿಎಲ್ ಇತಿಹಾಸದಲ್ಲಿ ಹೈದರಾಬಾದಿನ ಕೊಳಗೇರಿಯಿಂದ ಬಂದ ಈ ಹುಡುಗ ಟ್ರೋಲ್ ಆಗಿದ್ದು ಲೆಕ್ಕವಿಲ್ಲದಷ್ಟು ಸಲ. ಆದರೆ ಆತ ಕಳೆದ ರಾತ್ರಿಯ ಪಂದ್ಯದಲ್ಲಿ ಮಾಡಿದ ದಾಖಲೆ ಐಪಿಎಲ್ ಇತಿಹಾಸಕ್ಕೆ ಹೊಸದು. ಪವರ್ ಪ್ಲೇ ಒಳಗೆ ಎರಡು ಮೇಡನ್ ಓವರ್ ಎಸೆದು ಮೂರು ವಿಕೆಟ್ ಗಳಿಸಿದ. ಸಣ್ಣ ಮಾತೇ ?

ಸಿರಾಜ್ ತಾಯಿ ಶಬಾನ ಬೇಗಮ್ ಅನಕ್ಷರಸ್ಥೆ. ಅಪ್ಪ ಮಹಮದ್ ಗೌಸ್ ಶಾಲೆ ಮೆಟ್ಟಿಲು ನೋಡದ ಆಟೋ ಡ್ರೈವರ್. ಹೈದರಾಬಾದಿನ ಕಡು ಕೊಳಕು ಕೊಳಗೇರಿ ಬಡಾವಣೆಯಲ್ಲಿ ದಟ್ಟ ದಾರಿದ್ರ್ಯವನ್ನೇ ಹೊತ್ತು ಬೆಳೆದ ಸಿರಾಜ್ ಎಷ್ಟೇ ಅವಮಾನಗಳುಂಟಾದರೂ ಎದುರಿಸಿದವ, ಗೆದ್ದವ. ಆದರೆ ಅವನ ಬದುಕು ಬದಲಾಗಿದ್ದು RCB ಸೇರಿದ ಮೇಲೆ.

ಆಗ ಹೇಳಿದ ಮಾತು: ಅಪ್ಪ–ಅಮ್ಮನಿಗೆ ಹೈದರಾಬಾದಿನ ಪ್ರತಿಷ್ಠಿತ ಮತ್ತು ಸುಂದರವಾದ ಪ್ರದೇಶದಲ್ಲಿ ಮನೆ ಕಟ್ಟಿಸಿಕೊಡುವ ಕನಸು ಈಗ ಕೈಗೂಡಲಿದೆ. ನಾನು ಕ್ರಿಕೆಟಿಗನಾಗಲು ಅಪ್ಪ ಜೀವನವಿಡೀ ಆಟೋ ರಿಕ್ಷಾ ಚಾಲನೆ ಮಾಡಿದ್ದಾರೆ. ಇಡೀ ಕುಟುಂಬವನ್ನು ಸಲುಹಿದ್ದಾರೆ. ಅಣ್ಣ ಮತ್ತು ಅಮ್ಮ ಕೂಡ ಬಹಳಷ್ಟು ತ್ಯಾಗ ಮಾಡಿದ್ದಾರೆ. ಈಗ ಬಂದಿರುವ ಹಣದಿಂದ ನನ್ನ ಹೊಸಮನೆ ಕನಸು ನನಸಾಗಲಿದೆ ಎಂದಿದ್ದರು ಸಿರಾಜ್.

ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆಡಿದ ಮೇಲೆ ಈ ಸಿರಾಜ್ ಭಾರತಕ್ಕೂ ಆಡಿದ. ಇಡೀ RCB ತಂಡ ಹೈದರಾಬಾದಿನಲ್ಲಿ ಪಂದ್ಯದ‌ ಎರಡ್ಮೂರು ಮುಂಚಿನ ದಿನ ABD ಸಹಿತ ಈತನ ಹೈದರಾಬಾದಿನ ಹೊಸ ಮನೆಗೆ ಹೋಗಿ ಬಿರಿಯಾನೀನ ನೆಲದ ಮೇಲೆ ಕೂತು ತಿಂದು ಖುಷಿಪಟ್ಟಿದ್ದರು. ನಿಮಗೆ ಗೊತ್ತೆ ಆ ಹೊಸ ಮನೇನ ಈತ RCB ಮಾಡಿದ್ದ ಬಿಡ್ ಮೇಲೆ‌ ಕೊಂಡುಕೊಂಡಿದ್ದ.

ಕಳೆದ ರಾತ್ರಿ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಸಿರಾಜ್ ಪ್ರದರ್ಶನ ನೋಡಿ ಆತನ ಆಟೋ ಡ್ರೈವರ್ ತಂದೆ ಎಷ್ಟು ಖುಷಿಪಟ್ಟಿರಬಹುದು? ಬಡವರ ಮಕ್ಕಳ ಸಂಭ್ರಮಗಳು ಸಣ್ಣದಾದರೂ ಅವು ಜಗತ್ತಿನ ಕಣ್ಣರಳಿಸುತ್ತವೆ ಅಲ್ಲವೆ.

Credit: siddu satyanavar

ರಾಜಕೀಯ

ಮೇ 5ರಂದು ಅದಾಲತ್.. ಗ್ರಾ.ಪಂ ಸದಸ್ಯ ಸ್ಥಾನಗಳ ಕರಡು ಪ್ರಕಟಣೆಗೆ ಆಕ್ಷೇಪಣೆ ಸಲ್ಲಿಸುವ ಅವಧಿ ವಿಸ್ತರಣೆ

ಮೇ 5ರಂದು ಅದಾಲತ್.. ಗ್ರಾ.ಪಂ ಸದಸ್ಯ ಸ್ಥಾನಗಳ ಕರಡು ಪ್ರಕಟಣೆಗೆ ಆಕ್ಷೇಪಣೆ ಸಲ್ಲಿಸುವ

ಕರ್ನಾಟಕ ಪಂಚಾಯತ್‌ರಾಜ್ ಸೀಮಾ ನಿರ್ಣಯ ಆಯೋಗ ಏಪ್ರಿಲ್ 18ರಂದು ಹೊರಡಿಸಿರುವ ರಾಜ್ಯದ ಗ್ರಾಮ ಪಂಚಾಯಿತಿಗಳ ಚುನಾಯಿತ ಸದಸ್ಯ (Grama Panchayat member) ಸ್ಥಾನಗಳ ಕರಡು ಪ್ರಕಟಣೆಗೆ ಆಕ್ಷೇಪಣೆ ಸಲ್ಲಿಸುವ ಅವಧಿಯನ್ನು ಮೇ 2ರ ಸಂಜೆ

[ccc_my_favorite_select_button post_id="121469"]
ಮಧ್ಯವರ್ತಿಗಳನ್ನು ದೂರವಿಟ್ಟು, ಜನರ ಸಮಸ್ಯೆಗಳನ್ನು ಬಗೆಹರಿಸಿ: ಸಿಎಂ ಸಿದ್ದರಾಮಯ್ಯ ಸೂಚನೆ

ಮಧ್ಯವರ್ತಿಗಳನ್ನು ದೂರವಿಟ್ಟು, ಜನರ ಸಮಸ್ಯೆಗಳನ್ನು ಬಗೆಹರಿಸಿ: ಸಿಎಂ ಸಿದ್ದರಾಮಯ್ಯ ಸೂಚನೆ

ಮಧ್ಯವರ್ತಿಗಳು (Brokers) ಎಲ್ಲೆಡೆ ಇರುತ್ತಾರೆ ಆದರೆ ಅವರನ್ನು ಕಚೇರಿಯೊಳಗೆ ಬಿಟ್ಟುಕೊಳ್ಳದೇ ಹೊರಗೆ ಕಳಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ( Cm Siddaramaiah) ಅಧಿಕಾರಿಗಳಿಗೆ ಸೂಚಿಸಿದರು

[ccc_my_favorite_select_button post_id="121435"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ದೊಡ್ಡಬಳ್ಳಾಪುರ: ವಕೀಲರ ಭವನದಲ್ಲಿ ವಾರ್ಷಿಕ ಕ್ರೀಡಾಕೂಟದ ಪ್ರಶಸ್ತಿ ವಿತರಣೆ..

ದೊಡ್ಡಬಳ್ಳಾಪುರ: ವಕೀಲರ ಭವನದಲ್ಲಿ ವಾರ್ಷಿಕ ಕ್ರೀಡಾಕೂಟದ ಪ್ರಶಸ್ತಿ ವಿತರಣೆ..

ದೊಡ್ಡಬಳ್ಳಾಪುರ ತಾಲೂಕು ವಕೀಲರ ಸಂಘ ಹಾಗೂ ನ್ಯಾಯಾಂಗ ಇಲಾಖೆಯಿಂದ ವಾರ್ಷಿಕ ಕ್ರೀಡಾಕೂಟ 2026-27ರ (Annual sports event) ಪ್ರಶಸ್ತಿ ವಿತರಣೆ ಕಾರ್ಯಕ್ರಮ (Awards ceremony) ನಗರದ ವಕೀಲರ ಭವನದಲ್ಲಿ ಆಯೋಜಿಸಲಾಗಿತ್ತು.

[ccc_my_favorite_select_button post_id="121459"]
ದೊಡ್ಡಬಳ್ಳಾಪುರ: ಸಿಡಿಲು ಬಡಿದು 2 ಹಸುಗಳ ಸಾವು..!

ದೊಡ್ಡಬಳ್ಳಾಪುರ: ಸಿಡಿಲು ಬಡಿದು 2 ಹಸುಗಳ ಸಾವು..!

ಬಿಸಿಲ ಬೇಗೆಯಿಂದ ದೊಡ್ಡಬಳ್ಳಾಪುರ (Doddaballapur) ತಾಲೂಕಿನ ಜನತೆ ತತ್ತರಿಸುತ್ತಿರುವ ನಡುವೆಯೇ ಇಂದು ಮಧ್ಯಾಹ್ನದಿಂದ ತಾಲೂಕಿನ ಹಲವೆಡೆ ಮಳೆಯ ಸಿಂಚನವಾಗಿದೆ.

[ccc_my_favorite_select_button post_id="121471"]
ದೊಡ್ಡಬಳ್ಳಾಪುರ:  ಡಿವೈಡರ್ಗೆ ಕಾರು ಡಿಕ್ಕಿ.. ಚಾಲಕನಿಗೆ ಗಂಭೀರ ಗಾಯ

ದೊಡ್ಡಬಳ್ಳಾಪುರ: ಡಿವೈಡರ್ಗೆ ಕಾರು ಡಿಕ್ಕಿ.. ಚಾಲಕನಿಗೆ ಗಂಭೀರ ಗಾಯ

ದಾಬಸ್ ಪೇಟೆ ಮಾರ್ಗವಾಗಿ ದೊಡ್ಡಬಳ್ಳಾಪುರ ಕಡೆಗೆ ತೆರಳುತ್ತಿದ್ದ ಕಾರು, ಏಕಾಏಕಿ ಚಾಲಕ ನಿಯಂತ್ರಣ ತಪ್ಪಿ ರಸ್ತೆ ಬದಿಯ ಡಿವೈಡರ್ಗೆ ಡಿಕ್ಕಿ (Accident) ಹೊಡೆದಿದೆ.

[ccc_my_favorite_select_button post_id="121485"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]