ಬೆಂಗಳೂರು: ಸರ್ಜಾ ಕುಟುಂಬಕ್ಕೆ ಇಂದು ಜೂನಿಯರ್ ಚಿರು ಎಂಟ್ರಿಯಾಗಿದ್ದಾನೆ.
ಬುಧವಾರ ರಾತ್ರಿ ಕೆ.ಆರ್ ರಸ್ತೆಯ ಅಕ್ಷ ಆಸ್ಪತ್ರೆಗೆ ದಾಖಲಾಗಿದ್ದ ಮೇಘನಾ ರಾಜ್ ಅವರು ಇಂದು ಬೆಳಗ್ಗೆ 11:07ಕ್ಕೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಮೇಘನಾ ತಾಯಿ ಪ್ರಮಿಳಾ ಜೋಷಾಯಿ, ತಂದೆ ಸುಂದರ್ ರಾಜ್ ಸೇರಿದಂತೆ ಕುಟುಂಬಸ್ಥರು ಹಾಗೂ ಸ್ನೇಹಿತರು ಆಸ್ಪತ್ರೆಯಲ್ಲಿ ತಾಯಿ ಮಗುವಿನ ಜೊತೆಗಿದ್ದಾರೆ.

