ದೊಡ್ಡಬಳ್ಳಾಪುರ: ಸಂಜೆಯಷ್ಟೆ ಹರಿತಲೇಖನಿಯಲ್ಲಿ ವರದಿಯಾಗಿದ್ದ, ಮ್ಯಾನ್ ಹೋಲ್ ಗಳಿಂದ ಉಕ್ಕಿ ಹರಿಯುತ್ತಿರುವ ತ್ಯಾಜ್ಯ ನೀರು. ವರದಿ ಕುರಿತಂತೆ ನಗರಸಭೆ ಸಿಬ್ಬಂದಿ ತ್ವರಿತವಾಗಿ ಸ್ಪಂದಿಸಿದ್ದು, ಜೆಟ್ಟಿಂಗ್ ಮೆಷಿನ್ ತಂದು ತ್ಯಾಜ್ಯ ನೀರನ್ನು ಹೊರ ತೆಗೆಯುತ್ತಿದ್ದಾರೆ.
ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಹಾಗೂ ಕೆಲ ನೂತನ ಮನೆಯವರು ತ್ಯಾಜ್ಯ ಹಾಗೂ ಮಳೆ ನೀರನ್ನು ಒಳಚರಂಡಿಗೆ ಹರಿಬಿಟ್ಟಿದ್ದ ಕಾರಣ, ತ್ಯಾಜ್ಯ ನೀರು ಮ್ಯಾನ್ ಹೋಲ್ ಮೂಲಕ ಹೊರಬಂದು ನಗರವಾಸಿಗಳಿಗೆ ತೀವ್ರ ಸಂಕಷ್ಟಕ್ಕೆ ಉಂಟುಮಾಡಿತ್ತು.
ನಗರದ ಹಳೆ ಆಸ್ಪತ್ರೆಯ ರಸ್ತೆ, ಕೆನರಾ ಬ್ಯಾಂಕ್ ಗೆ ಸಾಗುವ ರಸ್ತೆ, ತಾಲೂಕು ಕಚೇರಿ ಮುಂಭಾಗ ಸೇರಿದಂತೆ ಬಹುತೇಕ ಕಡೆ ಮ್ಯಾನ್ ಹೋಲ್ ಗಳಿಂದ ತ್ಯಾಜ್ಯ ನೀರು ಹೊರಬರುತ್ತಿದ್ದ ಕಾರಣ ಸ್ಥಳೀಯರು, ಪಾದಚಾರಿಗಳು, ವಾಹನ ಸವಾರರಿಗೆ ತೀವ್ರ ತೊಂದರೆಯಾಗಿತ್ತು.
ಈ ಕುರಿತಂತೆ ಹರಿತಲೇಖನಿ ನಗರಸಭೆ ಪೌರಾಯುಕ್ತ ರಮೇಶ್ ಎಸ್.ಸುಣಗಾರ್ ಅವರ ಗಮನಕ್ಕೆ ತಂದಿದ್ದು, ಕೂಡಲೆ ನೆಲಮಂಗಲದಿಂದ ಜೆಟ್ಟಿಂಗ್ ಮಿಷನ್ ತರೆಸಿ ತ್ಯಾಜ್ಯ ನೀರನ್ನು ಹೊರ ತೆಗೆಯಲಾಗುವುದು ಎಂದು ಭರವಸೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

