ದೊಡ್ಡಬಳ್ಳಾಪುರ: ತಾಲೂಕಿನಲ್ಲಿಯೇ ಪ್ರಪ್ರಥಮ ಎನ್ನಲಾದ ಶೂಟ್ ಔಟ್ ನಡೆಸಿ ಆರೋಪಿಯ ಬಂಧಿಸುವ ಮೂಲಕ ತಾಲ್ಲೂಕಿನ ಗಮನ ಸೆಳೆದಿದ್ದ ಗ್ರಾಮಾಂತರ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ವಿ.ಗಜೇಂದ್ರ ದಿಢೀರ್ ಬೆಳವಣಿಗೆಯಲ್ಲಿ ವರ್ಗಾವಣೆಯಾಗಿದ್ದಾರೆ.
2018ರ ಜನವರಿ ತಿಂಗಳಲ್ಲಿ ಅತ್ತಿಬೆಲೆ ಪೊಲೀಸ್ ಠಾಣೆಯಿಂದ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಆಗಿ ಕರ್ತವ್ಯಕ್ಕೆ ನೇಮಕಗೊಂಡ ನಂತರ ಗಜೇಂದ್ರರ ಶಿಸ್ತುಬದ್ಧ ಕಾರ್ಯವೈಖರಿಯಿಂದಾಗಿ ಬಹು ಬೇಗ ತಾಲೂಕಿನ ಜನರ ಮನ್ನಣೆಗೆ ಪಾತ್ರವಾದರು.
ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವ್ಯಾಪ್ತಿಯಲ್ಲಿ ನಿಧಿ ಶೋಧ ಪ್ರಕರಣದಡಿಯಲ್ಲಿ ತ್ವರಿತಗತಿಯ ಆರೋಪಿಗಳ ಬಂಧಿಸಿ ಬಲಿಗಾಗಿ ಸಿದ್ದಮಾಡಲಾಗುತ್ತಿದ್ದ ಎರಡು ಜೀವಗಳ ರಕ್ಷಣೆ, ಕೋಳಿ ಪಂದ್ಯದಲ್ಲಿ ಭಾಗಿಯಾದ್ದ 70 ಜನ ಬಂಧನ, ಅನುಮಾನಸ್ಪದವಾಗಿ ಸಿಕ್ಕ ತಲೆಬುರುಡೆಯ ಬೆನ್ನತ್ತಿ ಕೊಲೆ ಆರೋಪಿಗಳ ಬಂಧನ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಆಲಹಳ್ಳಿ ಬಳಿ ತಾಲೂಕಿನಲ್ಲಿ ಪ್ರಪ್ರಥಮವಾಗಿ ಶೂಟೌಟ್ ನಡೆಸಿ ಹತ್ಯೆ ನಡೆಸಲು ಮುಂದಾದ ಮಲ್ಲೋಹಳ್ಳಿಯ ರೌಡಿಶೀಟರ್ ಬಂಧನ, ವಿದೇಶಿ ಮಹಿಳೆಯ ಮೇಲೆ ಅತ್ಯಾಚಾರದ ದೂರನ್ನು ಬೆನ್ನತ್ತಿ ಟ್ಯಾಕ್ಸಿ ಚಾಲಕ ಹಾಗು ಆತನ ಗೆಳೆಯರ ಬಂಧನ, ನೂರಾರು ಜೂಜು ಅಡ್ಡೆಯ ಮೇಲೆ ದಾಳಿ ಸೇರಿದಂತೆ ಹಲವು ಪ್ರಕರಣಗಳ ಇತ್ಯರ್ಥಗೊಳಿಸಿದಲ್ಲದೆ. ಕಳೆದ ಎರಡು ವರ್ಷ 10 ತಿಂಗಳ ಅವಧಿಯಲ್ಲಿ ತಾಲೂಕಿನ ಜನತೆಯ ವಿಶ್ವಾಸಾರ್ಹ ಪೊಲೀಸ್ ಅಧಿಕಾರಿಯಾಗಿ ಕರ್ತವ್ಯ ನಡೆಸಿದ್ದರು.
ರವಿ.ಡಿ.ಚೆನ್ನಣ್ಣನವರ್ ನೇತೃತ್ವದಲ್ಲಿ ತಾಲೂಕಿನ ಜಿಂಕೆಬಚ್ಚಹಳ್ಳಿ ಗ್ರಾಮದಲ್ಲಿ ನಮ್ಮೂರಲ್ಲಿ ಒಂದು ದಿನ ಕಾರ್ಯಕ್ರಮ ಆಯೋಜನೆ, ಕರೊನಾ ಸೋಂಕು ತಡೆಗಟ್ಟಲು ಕಾರ್ಯ ನಿರ್ವಹಣೆಯಲ್ಲಿ ಭಾಗಿಯಾಗಿ ಸ್ವಯಂ ಕರೊನಾ ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆದು ನಂತರ ಕರ್ತವ್ಯ ನಿರ್ವಹಿಸಿ ಪ್ರಶಂಸೆ ಪಾತ್ರರಾಗಿದ್ದ ಗಜೇಂದ್ರ ವರ್ಗಾವಣೆಯಾಗಿದ್ದು, ಅವರ ಸ್ಥಾನಕ್ಕೆ ವಿಜಯಪುರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಂಜುನಾಥ್ ಬಂದಿದ್ದಾರೆ.
ಅಧಿಕಾರಿಗಳು ಬರುತ್ತಾರೆ, ತೆರಳುತ್ತಾರೆ ಆದರೆ ಅವರ ಕರ್ತವ್ಯ ನಿರ್ವಹಣೆಯ ವೇಳೆ ಕೈಗೊಂಡ ದಿಟ್ಟ, ಜನಪರ ಹಾಗೂ ಪ್ರಾಮಾಣಿಕ ಕ್ರಮಗಳಲ್ಲಿ ಅವರ ನೆನಪು ಶಾಶ್ವತವಾಗಿ ಉಳಿಯುತ್ತದೆ.
ಉನ್ನತ ಅಧಿಕಾರಿ ಸಲಹೆ, ಪ್ರೋತ್ಸಾಹ ಹಾಗೂ ತಾಲೂಕಿನ ಜನರ ಸಹಕಾರಕ್ಕೆ ಋಣಿ: ಕಳೆದ ಎರಡು ವರ್ಷಗಳ ಅವಧಿಯಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕಿನ ಜನರ ಸಹಕಾರ ಅಪಾರವಾಗಿತ್ತು. ನನ್ನ ಯಾವುದೇ ಸಾಧನೆಯ ಹಿಂದೆ ಹಿರಿಯ ಅಧಿಕಾರಿಗಳ ಸಲಹೆ, ಪ್ರೋತ್ಸಾಹ ಸಿಬ್ಬಂದಿಗಳ ಸಹಕಾರ ಹೆಚ್ಚಾಗಿತ್ತು. ಇಷ್ಟು ದಿನಗಳ ಕಾಲ ಬಹಳಷ್ಟು ಪ್ರೀತಿ, ಸಹಕಾರ ನೀಡಿದ ತಾಲೂಕಿನ ಜನತೆ ಹೃದಯ ಪೂರ್ವಕ ಧನ್ಯವಾದಗಳು ಎಂದು ಹರಿತಲೇಖನಿ ಮೂಲಕ ತಿಳಿಸಿರುವ ಗಜೇಂದ್ರ ಅವರು, ಮತ್ತೆ ದೊಡ್ಡಬಳ್ಳಾಪುರದಲ್ಲಿ ಕಾರ್ಯನಿರ್ವಹಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹರಿತಲೇಖನಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ ಪ್ರಮುಖ ಸುದ್ದಿಗಳ ಅಪ್ಡೇಟ್ ಪಡೆಯಿರಿ

