ದೊಡ್ಡಬಳ್ಳಾಪುರ: ನಗರದ ಶ್ರೀ ದೇವರಾಜ್ ಅರಸ್ ಅಂತಾರಾಷ್ಟ್ರೀಯ ವಸತಿ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.
ಶಾಲೆಯ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಧ್ವಜಾರೋಹಣವನ್ನು ಆರ್.ಎಲ್.ಜಾಲಪ್ಪ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಜೆ.ನಾಗೇಂದ್ರ ಸ್ವಾಮಿ ನೆರವೇರಿಸಿ ಮಾತನಾಡಿ, ಕನ್ನಡ ರಾಜ್ಯೋತ್ಸವ ಕೇವಲ ಒಂದು ದಿನದ ಹಬ್ಬವಲ್ಲ. ಬದುಕಿನುದ್ದಕ್ಕೂ ಕನ್ನಡ ಪ್ರೀತಿ ಮೆರೆಯ ಬೇಕಾದ ಹಬ್ಬವಾಗಿದೆ. ಕನ್ನಡ, ಕರ್ನಾಟಕ ಬರೀ ಭಾಷೆಯಲ್ಲ, ಬರೀ ನೆಲವಲ್ಲ ಅದೊಂದು ಭಾವನಾತ್ಮಕ ಸಂಬಂಧ, ಎಂದೂ ಬಿಡಿಸಲಾರದ ಬಾಂಧವ್ಯ. ಕರುನಾಡು ಎಂಬ ಪದವೇ ಅಮೃತಕ್ಕೆ ಸಮಾನ. ನಮ್ಮ ಹೆಮ್ಮೆ ಸರ್ವ ಜನಾಂಗದ ಈ ಶಾಂತಿಯ ತೋಟ. ಇಂತಹ ಹೆಮ್ಮೆಯ ನಾಡಲ್ಲಿ ಜನ್ಮಿಸಿರುವುದು ನಮ್ಮ ಸೌಭಾಗ್ಯವೆಂದರು.
ಶಾಲೆಯ ನಿರ್ದೇಶಕ ಜೆ.ರಾಜೇಂದ್ರ ಮಾತನಾಡಿ, ಈ ಸುದೀರ್ಘ ವರ್ಷಗಳಲ್ಲಿ ಕರ್ನಾಟಕ ಸಾಧಿಸಿರುವ ಪ್ರಗತಿ ಅಮೋಘ. ದೇಶದ ರಾಜಕೀಯ. ಆರ್ಥಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಹೊಂದಿರುವ ಕರ್ನಾಟಕ, ಜಾಗತಿಕವಾಗಿ ಗಮನ ಸೆಳೆದಿರುವ ರಾಜ್ಯವೂ ಹೌದು. ಏಕೀಕೃತ ಕರ್ನಾಟಕಕ್ಕಾಗಿ ನಡೆದ ಹೋರಾಟ ಹಾಗೂ ಕರ್ನಾಟಕ ರಾಜ್ಯ ರಚನೆಯಾದಾಗಿನಿಂದ, ಅದು ಸಾಗಿಬಂದ ದಾರಿ ನಿಜಕ್ಕೂ ಅನುಕರಣೀಯ. ಒಂದು ರಾಜ್ಯವಾಗಿ ಇದು ಸಾಗಿಸಿದ ಪ್ರಗತಿ ಅನನ್ಯವಾದುದು. ಆದರೆ ಕರೊನಾ ಕಾರಣ ಶಾಲಾ ಮಕ್ಕಳಿಲ್ಲ ಕನ್ನಡ ರಾಜ್ಯೋತ್ಸವ ಆಚರಿಸುವಂತಾಗಿದ್ದು ಬೇಸರದ ಸಂಗತಿಯೆಂದರು.
ಈ ವೇಳೆ ಶಿಕ್ಷಕರಾದ ದಯಾಶಂಕರ್, ಎಂ.ಬಿ.ರಮೇಶ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಂಶುಪಾಲರಾದ ದೇವಿಕಾರಾಣಿ, ವ್ಯವಸ್ಥಾಪಕ ರವಿಕುಮಾರ್, ಧನಂಜಯ್, ಶಿಕ್ಷಕರಾದ ಕೆ.ಎಲ್.ಸ್ವರ್ಣ, ಶೈಲಜಾ, ರಜನಿ, ಸತ್ಯನಾರಾಯಣ್, ಸತೀಶ್, ನಾಗರಾಜ್, ನಾರಾಯಣ್, ಮಧು ಮತ್ತಿತರರಿದ್ದರು.
ಕ್ಷಣ ಕ್ಷಣದ ತಾಜಾ ಸುದ್ದಿ, ಮಾಹಿತಿಗಾಗಿ Harithalekhaniಯನ್ನು Facebook / Twitterಗಳಲ್ಲಿ ಅನುಸರಿಸಿ.

