ದೊಡ್ಡಬಳ್ಳಾಪುರ: ಒಂಟಿಯಾಗಿ ಇರುವ ಮಹಿಳೆಯರ ಕತ್ತಿನಲ್ಲಿನ ಸರಗಳನ್ನು ಕಿತ್ತುಕೊಂಡು ಪರಾರಿಯಾಗುತ್ತಿರುವ ಈ ದ್ವಿಚಕ್ರ ವಾಹನದಲ್ಲಿನ ಕಳ್ಳರು ಕಂಡು ಬಂದಲ್ಲಿ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಸರ್ಕಲ್ ಇನ್ಸ್ಪೆಕ್ಟರ್ ನವೀನ್ ಕುಮಾರ್ ಮನವಿ ಮಾಡಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಈ ಫೋಟೋಗಳಲ್ಲಿರುವ ವ್ಯಕ್ತಿಗಳು ಪಲ್ಸರ್ ಬೈಕ್ ನಲ್ಲಿ ಮಾದನಾಯಕನಹಳ್ಳಿ, ನೆಲಮಂಗಲ, ದೊಡ್ಡಬೆಳವಂಗಲ, ರಾಜನಕುಂಟೆ, ಸೋಲದೇವನಹಳ್ಳಿ, ಗ್ರಾಮಗಳಲ್ಲಿ ಸುತ್ತಾಡಿ ಹಸುಗಳನ್ನು, ಕುರಿಗಳನ್ನು ಮೇಯಿಸುವ ಒಂಟಿ ಮಹಿಳೆಯರ ಕುತ್ತಿಯಲ್ಲಿನ ಸರಗಳನ್ನು ಕಿತ್ತುಕೊಳ್ಳುವವರಾಗಿದ್ದಾರೆ.
ಇವರ ಕುರಿತು ಮಾಹಿತಿ ಕಂಡು ಬಂದಲ್ಲಿ ದೊಡ್ಡಬೆಳವಂಗಲ ಠಾಣೆ, ರಾಜಾನುಕುಂಟೆ ಪೊಲೀಸ್ ಠಾಣೆ, ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ, ಹೊಸಹಳ್ಳಿ ಪೊಲೀಸ್ ಠಾಣೆ. ಅಥವಾ ದೊಡ್ಡಬಳ್ಳಾಪುರ ಸರ್ಕಲ್ ಕಚೇರಿಗೆ ತಿಳಿಸಲು ಕೋರಿದ್ದಾರೆ.
ಅಥವಾ ಇವರ ಕುರಿತು ಮಾಹಿತಿ ದೊರೆತಲ್ಲಿ. 9480802453, 9480802455, 9480802456, 9480802457 ಮೋಬೈಲ್ ಸಂಖ್ಯೆಗೆ ಕರೆ ಮಾಡಲು ತಿಳಿಸಿದ್ದಾರೆ.
ಹರಿತಲೇಖನಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಟ್ವಿಟರ್ ನಲ್ಲಿ ಫಾಲೋ ಮಾಡುವ ಮೂಲಕ ಪ್ರಮುಖ ಸುದ್ದಿಗಳ ಅಪ್ಡೇಟ್ ಪಡೆಯಿರಿ.

