ದೊಡ್ಡಬಳ್ಳಾಪುರ: ಮಕ್ಕಳಾಗಲು, ಪಾರ್ಶುವಾಯು ಸೇರಿದಂತೆ ಹಲವು ರೋಗಗಳಿಗೆ ಔಷಧಿ ಕೊಡ್ತಿನೆಂದು ಬಂದ ನಕಲಿ ಆರ್ಯುವೇದ ಪಂಡಿತನಿಗೆ ಗ್ರಾಮಸ್ಥರು ಗೂಸಾ ನೀಡಿ ಕಳುಹಿಸಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ತಿರುಮಗೊಂಡನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ನಾಗರಾಜು ಎಂಬ ಆರ್ಯುವೇದ ಪಂಡಿತನೆಂದು ಕಳೆದ ತಿಂಗಳು ಗ್ರಾಮಕ್ಕೆ ಭೇಟಿ ನೀಡಿ ಮಕ್ಕಳಾಗಲು, ಪಾರ್ಶುವಾಯು ರೋಗಕ್ಕೆ ಔಷಧಿ ಕೋಡುವುದ್ದಾಗಿ ಹೇಳಿದ, ಈತನ ಮಾತು ನಂಬಿದ ಮಹಿಳೆಯೋರ್ವರು ಮಕ್ಕಳಾಗಲು ಔಷಧಿಯನ್ನ ಆತನನಿಂದ ತೆಗೆದುಕೊಂಡಿದ್ಳು, ಔಷಧಿ ನೀಡುವ ವೇಳೆ ಆಕೆಯಿಂದ ಎರಡು ಮೊಬೈಲ್ ಮತ್ತು 30 ಸಾವಿರ ಹಣವನ್ನ ಆಕೆಯಿಂದ ದೋಚಿ ಪರಾರಿಯಾಗಿದ್ದ ಎನ್ನಲಾಗಿದೆ.
ಈ ಮುಂಚೆ ಸಹ ಈ ಗ್ರಾಮದ ಕೆಲವರಿಗೆ ರೋಗ ಗುಣವಾಗಲು ಆರ್ಯುವೇದ ಔಷಧಿ ನೀಡಿದ್ದು, ರೋಗ ಮಾತ್ರ ವಾಸಿಯಾಗಿರಲಿಲ್ಲ ಎಂಬುದು ಗ್ರಾಮಸ್ಥರ ಆರೋಪ. ಗ್ರಹಚಾರ ಕೆಟ್ಟು ಇಂದು ಇದೇ ವ್ಯಕ್ತಿ ಗ್ರಾಮಕ್ಕೆ ಬಂದು ಮಕ್ಕಳಾಗಲು,ಪಾರ್ಶುವಾಯು ಸೇರಿದಂತೆ ಹಲವು ರೋಗಿಗಳಿಗೆ ಆರ್ಯುವೇದ ಔಷಧಿ ನೀಡುವುದ್ದಾಗಿ ಕೂಗಿ ಕೊಂಡು ಬಂದಿದ್ದಾನೆ, ಮೊದಲೇ ಈತನಿಂದ ಮೋಸಹೋಗಿದ್ದ ಗ್ರಾಮಸ್ದರು ಈತನನ್ನು ಹಿಡಿದು ಗೂಸಾ ನೀಡಿದ್ದಾರೆ, ಆರ್ಯುವೇದ ಪಂಡಿತನೆಂಬುವುದಕ್ಕೆ ಆತನ ಬಳಿ ಯಾವುದೇ ಪತ್ರಗಳಿಲ್ಲ, ಆತನನ್ನ ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು ಮತ್ತೂಮ್ಮೆ ಗ್ರಾಮಕ್ಕೆ ಕಾಲಿಟ್ಟರೇ ಪೊಲೀಸರಿಗೆ ಒಪ್ಪಿಸುವುದಾಗಿ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

