ಬೆಂಗಳೂರು: ಕನ್ನಡ ನಾಡಿನ ಮೇರು ನಟರಲ್ಲಿ ಒಬ್ಬರಾದ ವಿಷ್ಣು ಸರ್ ಬಗ್ಗೆ ಅವಹೇಳನವಾಗಿ ಮಾತನಾಡಿರುವ ತೆಲುಗು ನಟ ಮಂಡಿಯೂರಿ ತಲೆಬಾಗಿ ಕ್ಷಮೆ ಕೇಳಿದ್ದಾನೆ. ( ವಿಡಿಯೋ ನೋಡಿ )
ವಿಡಿಯೋ ಮೂಲಕ ಕ್ಷಮೆ ಕೇಳಿರುವ ರಂಗರಾಜು, ಯಾವುದೋ ಫ್ಲೋ ನಲ್ಲಿ ಮಾತನಾಡಿಬಿಟ್ಟೆ . ಆ ಪಾಪಕ್ಕೆ ನಂಗೆ ಈಗ ಕರೊನಾ ಬಂದಿದೆ. ದಯಮಾಡಿ ನನ್ನನ್ನು ಕ್ಷಮಿಸಿ.ಡಾ.ವಿಷ್ಣುವರ್ಧನ್ ಅವರ ಅಭಿಮಾನಿಗಳಲ್ಲಿ, ಭಾರತಿ ಮೇಡಂ ಹತ್ತಿರ, ಸುದೀಪ್, ಪುನೀತ್, ಉಪೇಂದ್ರ ಇವರ ಬಳಿ ಕ್ಷಮೆಯಾಚಿಸುತ್ತೇನೆ.. ನನ್ನ ಬಿಟ್ಟುಬಿಡಿ. ತಪ್ಪು ಮಾಡಿಬಿಟ್ಟೆ ಎಂದು ಅಲವತ್ತುಕೊಂಡಿದ್ದಾರೆ.
ತೆಲುಗು ನಟ ವಿಜಯ್ ರಂಗರಾಜು ಎಂಬುವರು ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದ ವೇಳೆ.ವಿಷ್ಣುವರ್ಧನ್ ಬಗ್ಗೆ ಅವಹೇಳನಾಕಾರಿಯಾಗಿ ಮಾತನಾಡಿ ವಿಷ್ಣು ಅಭಿಮಾನಿಗಳು ಕೆರಳುವಂತೆ ಮಾಡಿತ್ತು.
ಅಲ್ಲದೆ ಸಾಹಸಸಿಂಹ’ ಡಾ. ವಿಷ್ಣುವರ್ಧನ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ತೆಲುಗು ನಟ ವಿಜಯ್ ರಂಗರಾಜು ವಿರುದ್ಧ ಇಡೀ ಸ್ಯಾಂಡಲ್ವುಡ್ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ನಟರಾದ ಪುನೀತ್ ರಾಜ್ಕುಮಾರ್, ಕಿಚ್ಚ ಸುದೀಪ್, ಜಗ್ಗೇಶ್, ಯಶ್, ಶ್ರೀಮುರಳಿ, ಗಣೇಶ್, ಸೃಜನ್ ಲೋಕೇಶ್, ರಿಷಬ್ ಶೆಟ್ಟಿ ಸೇರಿದಂತೆ ಅನೇಕರು ವಿಜಯ್ ರಂಗರಾಜು ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದರು.
(ವಿಡಿಯೋ ಕೃಪೆ: BTV)
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

