ದೊಡ್ಡಬಳ್ಳಾಪುರ: 3 ದಿನಗಳಿಂದ ನಡೆಸುತ್ತಿದ್ದ ಸಾರಿಗೆ ಸಂಸ್ಥೆ ಸಿಬ್ಬಂದಿ ಮುಷ್ಕರ ಅಂತ್ಯಗೊಂಡಿದ್ದು, ಬಸ್ ಸೌಕರ್ಯವಿಲ್ಲದೇ ತೊಂದರೆಗೀಡಾಗಿದ್ದ ಜನ ಸಾಮಾನ್ಯರು ನಿಟ್ಟುಸಿರು ಬಿಟ್ಟರೆನ್ನುವ ಮುನ್ನವೆ…ನಗರದ ಡಿಪೋದಿಂದ ಬಸ್ ಸೇವೆ ಆರಂಭಿಸಿದ್ದ ಬಸ್ಗಳು ಮತ್ತೆ ಡಿಪೋಗೆ ಮರಳಿ ನಿರಾಸೆ ಮೂಡಿಸಿದೆ.
ಸಾರಿಗೆ ಸಚಿವ ಸೇರಿದಂತೆ ಹಿರಿಯ ಸಚಿವರೊಂದಿದೆ ಇಡೀ ದಿನ ಸರ್ಕಾರ ನಡೆಸಿದ ಸರಣಿ ಮಾತುಕತೆ ಯಶಸ್ವಿಯಾಗಿದ್ದು, ತಕ್ಷಣವೇ ಬಸ್ ಸಂಚಾರ ಪುನರಾರಂಭಿಸಲು ಸಾರಿಗೆ ಸಿಬ್ಬಂದಿ ಸಂಘಟನೆ ಮುಖಂಡರು ಸಮ್ಮತಿಸಿದ್ದಾರ ಬಸ್ ಸೇವೆ ಆರಂಭಿಸಲಾಗುವುದೆಂದು ತಿಳಿಸಿದ ಬೆನ್ನಲ್ಲೆ ನಗರದ ಡಿಪೋದಿಂದ ಬಸ್ ಸೇವೆ ಆರಂಭಿಸಲಾಗಿತ್ತು, ಆದರೆ ಸಂಘಟನೆಗಳ ಮುಖಂಡರು ಬಂದ್ ಮುಂದುವರೆಸುವುದಾಗಿ ತಿಳಿಸಿದ ಹಿನ್ನೆಲೆ ಸೇವೆ ಆರಂಭಿಸಿದ್ದ ಬಸ್ಗಳು ಡಿಪೋಗೆ ಹಿಂತಿರುಗಿ ಬಂದಿವೆ. (ಸಿಬ್ಬಂದಿಗಳಿಗೆ ತೊಂದರೆ ಆಗಬಾರದೆಂಬ ಕಾರಣಕ್ಕೆ ಪೋಟೋ ಬಳಸಿಲ್ಲ)
ಸಾರಿಗೆ ಸಿಬ್ಬಂದಿಯನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ವಿವಿಧ ಸಾರಿಗೆ ನೌಕರರ ಸಂಘಟನೆಗಳು ಕಳೆದ ಮೂರು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

