ದೊಡ್ಡಬಳ್ಳಾಪುರ: ಸಾರಿಗೆ ನೌಕರರು ಹಾಗೂ ಸರ್ಕರದ ನಡುವಿನ ಹಗ್ಗ ಜಗ್ಗಾಟ ಮುಕ್ತಾಯಗೊಂಡಿದ್ದು ಸೋಮವಾರ ಸಂಜೆಯಿಂದ ತಾಲೂಕಿನಲ್ಲಿ ಬಸ್ ಸಂಚಾರ ಆರಂಭವಾಗಿದೆ.
ನಗರದ ಬಸ್ ಡಿಪೋಗೆ ಸೋಮವಾರ ಸಂಜೆ 6ರಿಂದ ನೌಕರರು ಕರ್ತವ್ಯಕ್ಕೆ ಮರಳಿದ್ದು ಬಸ್ ಸಂಚಾರ ಆರಂಭಿಸಲಾಯಿತು. ಇಂದು 52 ಬಸ್ಸುಗಳು ರಸ್ತೆಗೆ ಇಳಿದಿವೆ ಎಂದು ಡಿಪೋ ವ್ಯವಸ್ಥಾಪಕ ಆನಂದ್ ಹರಿತಲೇಖನಿಗೆ ತಿಳಿಸಿದ್ದಾರೆ.
ಇನ್ನು ಮುಷ್ಕರ ಕುರಿತು ನೌಕರರ 10 ಬೇಡಿಕೆಗಳಲ್ಲಿ 9 ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಲಿಖಿತ ಭರವಸೆ ನೀಡಿದೆ. 6 ನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ಪರಿಷ್ಕರಣೆ ಸೇರಿ ಹಾಲಿ ಭರವಸೆಗಳ ಭರವಸೆಗಳ ಅನುಷ್ಠಾನಕ್ಕೆ ಸಾರಿಗೆ ನೌಕರರ ಒಕ್ಕೂಟ 3 ತಿಂಗಳ ಗಡುವು ವಿಧಿಸಿದೆ. ಸರ್ಕಾರ ಭರವಸೆಗಳನ್ನು ಈಡೇರಿಸದಿದ್ದರೆ ಮತ್ತೆ ಹೋರಾಟ ಮಾಡುವುದಾಗಿ ಎಚ್ಚರಿಕೆಯನ್ನು ಸಹ ನೀಡಿವೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

