ದೊಡ್ಡಬಳ್ಳಾಪುರ: ಜಿದ್ದಾಜಿದ್ದಿನಿಂದ ನಡೆದ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಮುಗಿದಿದ್ದು ಶೇ.99.03 ರಷ್ಟು ಮತದಾನ ನಡೆದಿದೆ ಎಂದು ಚುನಾವಣಾಧಿಕಾರಿ ಚಿಕ್ಕನರಸಿಂಹಯ್ಯ ಹರಿತಲೇಖನಿಗೆ ತಿಳಿಸಿದ್ದಾರೆ.
ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಇಂದು ಬೆಳಿಗ್ಗೆ 7.30ರಿಂದ ಆರಂಭವಾದ ಮತದಾನ ಪ್ರಕ್ರಿಯೆ ಸಂಜೆ 4 ಗಂಟೆಯವರೆಗೆ ನಡೆಯಿತು.
929 ಮತದಾರರಲ್ಲಿ 920 ಮಂದಿ ಮತ ಚಲಾಯಿಸಿದ್ದು ಶೇ.99.03 ರಷ್ಟು ಮತದಾನ ನಡೆದಿದೆ ಎನ್ನಲಾಗಿದೆ. ಮತ ಎಣಿಕೆ ಕಾರ್ಯ ಕೆಲವೇ ಕ್ಷಣಗಳಲ್ಲಿ ಆರಂಭವಾಗಲಿದ್ದು ಫಲಿತಾಂಶ ರಾತ್ರಿ 11ರ ವೇಳೆಗೆ ದೊರಕಲಿದೆ ಎಂದು ಅಂದಾಜಿಸಲಾಗಿದೆ.
ಈ ಚುನಾವಣೆಯನ್ನು ಎರಡು ಬಣಗಳು ಪ್ರತಿಷ್ಟೆಯಾಗಿ ಪರಿಗಣಿಸಿ ಮತಯಾಚನೆ ನಡೆದಿದ್ದು, ಇಂದು ಸಹ ಕಾಲೇಜಿನ ಗೇಟ್ ಮುಂಬಾಗವೂ ಮತಯಾಚನೆ ನಿರಂತರವಾಗಿ ನಡೆಸುತ್ತಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

