ಬೆಂಗಳೂರು: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ 2021-22ನೇ ಸಾಲಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕ್ರೀಡಾ ಶಾಲೆ/ ನಿಲಯಗಳಿಗೆ ಪ್ರತಿಭಾನ್ವಿತ ಕ್ರೀಡಾ ಪಟುಗಳ ಆಯ್ಕೆ ಪ್ರಕ್ರಿಯೆಯು ತಾಲ್ಲೂಕುವಾರು ನಡೆಸಲಾಗುತ್ತಿದೆ.
ಆಯ್ಕೆ ಪ್ರಕ್ರಿಯೆಯು 2020ರ ಡಿಸೆಂಬರ್ 18 ರಂದು ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿರುವ ಭಗತ್ಸಿಂಗ್ ಕ್ರೀಡಾಂಗಣ, ಡಿಸೆಂಬರ್ 19 ದೇವನಹಳ್ಳಿ ಟೌನ್ನಲ್ಲಿರುವ ಕ್ರೀಡಾಂಗಣ, ಡಿಸೆಂಬರ್ 28 ರಂದು ನೆಲಮಂಗಲ ತಾಲ್ಲೂಕಿನಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣ, ಡಿಸೆಂಬರ್ 29 ರಂದು ಹೊಸಕೋಟೆ ತಾಲ್ಲೂಕಿನಲ್ಲಿರುವ ಶ್ರೀ ಚನ್ನಭೈರೇಗೌಡ ಕ್ರೀಡಾಂಗಣದಲ್ಲಿ ನಡೆಯಲಿದೆ.
ಆಯ್ಕೆ ಪ್ರಕ್ರಿಯೆಯ ವಿವರಗಳಿಗಾಗಿ ಸಂಚಾಲಕರಾದ ಅಥ್ಲೆಟಿಕ್ಸ್ ತರಬೇತುದಾರರಾದ ಪ್ರಭು.ಎಂ. ಮೊ.ಸಂ.: 9945029942, ದೊಡ್ಡಬಳ್ಳಾಪುರ ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರಾದ ಎಚ್.ನಾಗರಾಜ್, ಮೊ.ಸಂ.: 9964759800, 9591026790, ಹೊಸಕೋಟೆ ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರಾದ ಎಸ್.ಎನ್.ಎಸ್. ಹುಸೇನಿ, ಮೊ.ಸಂ.: 9113218838, 8762939296, ದೇವನಹಳ್ಳಿ ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರಾದ ಎ.ಜನಾರ್ಧನ್, ಮೊ.ಸಂ.: 9611262811, 8792719985, ನೆಲಮಂಗಲ ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರಾದ ನಾರಾಯಣ್.ಎಲ್, ಮೊ.ಸಂ: 8660635308, 9845542660 ಅನ್ನು ಸಂಪರ್ಕಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರ ಕಚೇರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊಠಡಿ ಸಂಖ್ಯೆ-112, ಜಿಲ್ಲಾಡಳಿತ ಭವನ, ಬೀರಸಂದ್ರ, ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ-562110, ದೂ.ಸಂ.: 080-29787443 ಹಾಗೂ ಮೊ.ಸಂ.: 9845608598, 9945029942 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಆರ್.ಗೀತಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

