ದೊಡ್ಡಬಳ್ಳಾಪುರ: ತೀವ್ರ ಕುತೂಹಲ ಕೆರಳಿಸಿದ್ದ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳ ಆಯ್ಕೆ ಚುನಾವಣೆಯಲ್ಲಿ ಜೈಕುಮಾರ್ ತಂಡದ 12ಮಂದಿ ಗೆಲುವನ್ನು ಸಾಧಿಸುವ ಮೂಲಕ ಆಡಳಿತ ಮಂಡಳಿಯ ಚುಕ್ಕಾಣಿ ತಮ್ಮದಾಗಿಸಿಕೊಂಡಿದ್ದಾರೆ.
ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಇಂದು ಬೆಳಗ್ಗಿನ ಜಾವದವರೆಗೂ ನಡೆದ ಮತ ಎಣಿಕೆಯಲ್ಲಿ ಜೈಕುಮಾರ್ ತಂಡದ 12 ಮಂದಿ ಮತ್ತು ಬಿ.ಎಸ್.ಸಿದ್ದಗಂಗಯ್ಯ, ಮಲ್ಲಿಕಾರ್ಜುನರೆಡ್ಡಿ ಸಿಂಡಿಕೇಟ್ನ 7 ಮಂದಿ ಆಯ್ಕೆಯಾಗಿದ್ದಾರೆ.
ಚುನಾಯಿತರ ವಿವರ: ಜೈ ಕುಮಾರ್- 606, ಚಂದ್ರಪ್ಪ- 566, ವಸಂತಗೌಡ- 476, ನರಸಿಂಹಮೂರ್ತಿ- 467, ಶ್ರೀನಿವಾಸಮೂರ್ತಿ- 466, ಬಸವಲಿಂಗಯ್ಯ- 448, ಅಂಜತ್ ಖಾನ್- 436, ರಮೇಶ್- 519, ನಾರಾಯಣಸ್ವಾಮಿ- 458, ಮಲ್ಲಿಕಾರ್ಜುನ ರೆಡ್ಡಿ- 456,ಆಂಜಿನಪ್ಪ- 448, ನಾಗೇಶ- 445, ಕೇಶವ ಮೂರ್ತಿ- 435, ಶುಭ- 448, ಚಂದ್ರಕಲಾ- 538, ಜ್ಯೋತಿ- 491, ಮಂಜುಳ- 446, ಶಾಂತಮ್ಮ- 449, ರಾಜೇಶ್ವರಿ- 447
ಚುನಾವಣಾಧಿಕಾರಿ ಚಿಕ್ಕನರಸಿಂಹಯ್ಯ ಅವರ ನೇತೃತ್ವದಲ್ಲಿ ನಡೆದ ಈ ಚುನಾವಣೆ ಬಹಳಷ್ಟು ಕುತೂಹಲಕ್ಕೆ ಕಾರಣವಾಗಿತ್ತು.
ಎರಡು ಸಿಂಡಿಕೇಟ್‌ಗಳಾಗಿ ನಡೆದಿದ್ದ ಚುನಾವಣೆಯಲ್ಲಿ ಜೈಕುಮಾರ್ ಹಾಗೂ ಬಿ.ಎಸ್.ಸಿದ್ದಗಂಗಯ್ಯ, ಮಲ್ಲಿಕಾರ್ಜುನರೆಡ್ಡಿ ಸಿಂಡಿಕೇಟ್ ತೀವ್ರ ಜಿದ್ದಾಜಿದ್ದಿ ಹೋರಾಟ ನಡೆಸಿದ್ದರು.
ಕಳೆದ ಐದು ವರ್ಷಗಳಿಂದಲೂ ಬಿ.ಎಸ್. ಸಿದ್ದಗಂಗಯ್ಯ ಅಧ್ಯಕ್ಷರಾಗಿ, ಜೈಕುಮಾರ್ ಕಾರ್ಯದರ್ಶಿಯಾಗಿ ಆಡಳಿತ ನಿರ್ವಹಿಸಿದ್ದರು. ಆದರೆ, ಈ ಚುನಾವಣೆಯಲ್ಲಿ ಇಬ್ಬರ ನಡುವೆಯೇ ಸ್ಪರ್ಧೆ ಏರ್ಪಟ್ಟಿತ್ತು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

