ಬೆಂಗಳೂರು: ಗ್ರಾಮ ಪಂಚಾಯತಿಗಳಿಗೆ ಎರಡು ಹಂತದಲ್ಲಿ ಚುನಾವಣೆ ಜರುಗಲಿದೆ. ಮುಕ್ತ ಹಾಗೂ ಶಾಂತಿಯುತ ಮತದಾನ ನಡೆಸಲು ಡಿಸೆಂಬರ್ 22 ಹಾಗೂ 27 ರಂದು ಮತದಾನ ಜರುಗುವ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮದ್ಯಪಾನ, ಮದ್ಯಮಾರಾಟ, ಮದ್ಯ ಸಾಗಾಣಿಕೆ ಹಾಗೂ ಮದ್ಯ ಸಂಗ್ರಹ ನಿಷೇಧಿಸುವ ಆದೇಶ ಶೀಘ್ರದಲ್ಲೇ ಹೊರಬೀಳಲಿದೆ.
ಹರಿತಲೇಖನಿಗೆ ದೊರೆತಿರುವ ಉನ್ನತ ಮೂಲಗಳ ಮಾಹಿತಿಯಂತೆ, ಮೊದಲ ಹಂತದ ಮತದಾನದ 48 ಗಂಟೆ ಪೂರ್ವ ದಿವಸಗಳು ಹಾಗೂ ಮತದಾನದ ದಿವಸ ಅಂದರೆ ದಿನಾಂಕ 20-12-2020 ರಂದು ಸಾಯಂಕಾಲ 5 ಗಂಟೆಯಿಂದ ದಿನಾಂಕ 22-12-2020ರ ಸಾಯಂಕಾಲ 5 ಗಂಟೆವರೆಗೆ ಹಾಗೂ ಎರಡನೇ ಹಂತದ ಮತದಾನದ 48 ಗಂಟೆ ಪೂರ್ವ ದಿವಸಗಳು ಹಾಗೂ ಮತದಾನದ ದಿವಸ ಅಂದರೆ 25-12-2020 ರಂದು ಸಾಯಂಕಾಲ 5 ಗಂಟೆಯಿಂದ ದಿನಾಂಕ 27-12-2020ರ ಸಾಯಂಕಾಲ 5 ಗಂಟೆವರೆಗೆ ಮದ್ಯಪಾನ, ಮದ್ಯಮಾರಾಟ, ಮದ್ಯ ಸಾಗಾಣಿಕೆ ಹಾಗೂ ಮದ್ಯ ಸಂಗ್ರಹ ನಿಷೇಧಿಸಿ, ಒಣ ದಿನಗಳೆಂದು ಘೋಷಿಸಲು ತೀರ್ಮಾನಿಸಲಾಗಿದೆ ಎನ್ನಲಾಗುತ್ತಿದೆ.
ಅಲ್ಲದೆ ಈ ಅವಧಿಯಲ್ಲಿ ಮದ್ಯದ ಅಂಗಡಿಗಳು, ಬಿಯರ್ ಬಾರ್‍ಗಳು, ಕ್ಲಬ್‍ಗಳು ಮತ್ತು ಮದ್ಯದ ಡಿಪೋಗಳನ್ನು ಮುಚ್ಚಲು ಆದೇಶಿಸಲಾಗುವುದು ಎನ್ನಲಾಗುತ್ತಿದ್ದು ಈಗಾಗಲೇ ಕೆಲ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳು ಈ ಕುರಿತು ಆದೇಶಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

