ಅರ್ಧರಾತ್ರಿಯ•••ಪೂರ್ಣಸತ್ಯಗಳು

ಪ್ರಪಂಚದಲ್ಲೇ ಅತಿ ದಡ್ಡ ಪ್ರಜಾಪ್ರಭುತ್ವದ ದೇಶ ನಮ್ಮ ಭಾರತ. ಅದರ ಜೊತೆಗೆ ಇಡೀ ವಿಶ್ವದ ಅತ್ಯಂತ ಪ್ರಾಚೀನ ಸಂಸ್ಕೃತಿ ಹೊಂದಿರುವ ದೇಶ ನಮ್ಮದು ಎಂಬ ಹೆಗ್ಗಳಿಕೆ ಸಹ ಇದೆ. ಒಬ್ಬ ಭಾರತೀಯನಾಗಿ ಹೆಮ್ಮೆಪಡಲು ಇದಕ್ಕಿಂತಲೂ ಹೆಚ್ಚಿನ ಕಾರಣ ಇನ್ನೊಂದು ಬೇಕಿಲ್ಲವೆಂದರೆ ಅತಿಶಯೋಕ್ತಿಯಾಗಲಾರದು.

ಇಂತಹ ಭಾರತ ದೇಶವು ಸ್ವತಂತ್ರಗೊಂಡದ್ದು 1947 ರ ಆಗಸ್ಟ್ 14 ರ ಮಧ್ಯರಾತ್ರಿ 12 ಗಂಟೆಗೆ ಎಂಬುದನ್ನು ನಾವುಗಳೆಲ್ಲರೂ ಪಠ್ಯಪುಸ್ತಕಗಳಿಂದ “ತಿಳಿದಿದ್ದೇವೆ” ಎನ್ನುವುದಕ್ಕಿಂತಲೂ “ತಿಳಿಯಲ್ಪಟ್ಟಿದ್ದೇವೆ” ಎಂಬುದೇ ವಾಸ್ತವ ಸತ್ಯ ಸಂಗತಿ.

ಹಾಗಾದರೆ ನಮ್ಮ ದೇಶಕ್ಕೆ ನಿಜವಾಗಿಯೂ ಸ್ವಾತಂತ್ರ್ಯ ಸಿಕ್ಕಿಲ್ಲವೇ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಿದರೆ ಆಶ್ಚರ್ಯವೇನಿಲ್ಲ. ಆ ನಿಮ್ಮ ಪ್ರಶ್ನೆಗೆ ನನ್ನ ಬಳಿ ಸ್ಪಷ್ಟ ಉತ್ತರ ಇದೆ. ಆ ಉತ್ತರ ಅಥವಾ ಸತ್ಯ ಸಂಗತಿ ಹುಡುಕುತ್ತಾ ಹೊರಟರೆ, ಮೊದಲಿಗೆ ನಾವು ಸ್ವಾತಂತ್ರ್ಯ ಪೂರ್ವದ ಐದಾರು ದಶಕಗಳ ಗತಕಾಲಕ್ಕೆ ತೆರಳಬೇಕಾಗುತ್ತದೆ. ಹಾಗೆ ತೆರಳಿದರೆ ಇಂದಿನ ನಮ್ಮ ಪಠ್ಯಪುಸ್ತಕಗಳು ನಮಗೆ ಒತ್ತಾಯವಾಗಿ ಕಲಿಸಿದ ನಮ್ಮ ದೇಶದ ಇತಿಹಾಸವನ್ನು ಹೊರತುಪಡಿಸಿ ಸ್ವಾತಂತ್ರ್ಯ ಹೋರಾಟದ ನೈಜ ಇತಿಹಾಸವೇ ನಮಗೆ ತಿಳಿಯುತ್ತದೆ.

ಭಾರತದ ಮೇಲೆ ಬ್ರಿಟಿಷ್ ಆಡಳಿತವನ್ನು ತೆರವುಗೊಳಿಸಿ, ಬ್ರಿಟಿಷರನ್ನು ನಮ್ಮ ದೇಶದಿಂದ ತೊಲಗಿಸುವ ಸಲುವಾಗಿ ನಡೆದ ಸಂಘರ್ಷವನ್ನು ನಾವು “ಸ್ವಾತಂತ್ರ್ಯ ಹೋರಾಟ” ಎಂದು ತಿಳಿದಿದ್ದೇವೆ. ಅಷ್ಟಕ್ಕೂ ಅಖಂಡ *ಭಾರತವು ವಿಶ್ವದ ಮೊಟ್ಟಮೊದಲ ಸರ್ವತಂತ್ರ ಸ್ವತಂತ್ರ ಸ್ವಾವಲಂಬಿ ರಾಷ್ಟ್ರ*  ಎಂಬುದು ಕೆಲವರಿಗಷ್ಟೇ ತಿಳಿದ *ಬೆತ್ತಲೆಸತ್ಯ* .

ಕೇವಲ ಬ್ರಿಟಿಷರಲ್ಲದೇ ಅವರ ಹಿಂದಿನ ಮೊಘಲರು, ಡಚ್ಚರು, ಫೋರ್ಚುಗೀಸರು ಭಾರತಕ್ಕೆ ಪ್ರವೇಶವಾಗುವ ಮುಂಚೆಯೇ ನಮ್ಮ ಅಖಂಡ ಭಾರತ ಸ್ವತಂತ್ರ ಸ್ವಾವಲಂಬಿ ದೇಶವಾಗಿ ನಾಗರೀಕತೆಯನ್ನು ಅಳವಡಿಸಿಕೊಂಡಿತ್ತು. ಅದನ್ನೂ ಮೀರಿ ಭರತ ಖಂಡದ ಗತವೈಭವ ಸಾರಬೇಕೆಂದರೆ, ಇಡೀ ವಿಶ್ವದ ಇತರೆ ಭಾಗದ ಮನುಕುಲಕ್ಕೆ “ತಾವು ಮನುಷ್ಯರು” ಎಂಬ ಅರಿವಾಗುವುದರೊಳಗಾಗಿಯೇ ನಮ್ಮ ಭಾರತದಲ್ಲಿನ ರಾಜರ್ಷಿಗಳು ಇಡೀ ಬ್ರಹ್ಮಾಂಡದ ಇಂಚಿಂಚೂ ರಹಸ್ಯಗಳನ್ನು ಶ್ಲೋಕಗಳಲ್ಲಿ   ನಿರೂಪಿಸಿಟ್ಟಿದ್ದರು. ಜಗದ ಮುಂದೆ ಭಾರತೀಯರೆನಿಸಿಕೊಳ್ಳಲು ಇದಕ್ಕಿಂತ ಹೆಮ್ಮೆಯ ವಿಷಯ ಇನ್ನೊಂದು ಬೇಡ ಎನಿಸುತ್ತದೆ. ಇರಲಿ, ಭಾರತದ ಗತಸಾರ್ವಭೌಮತ್ವದ ಬಗ್ಗೆ ಇನ್ನೊಮ್ಮೆ ಚರ್ಚಿಸೋಣ‌ ವಿಷಯಾಂತರವಾಗುವುದು ಬೇಡ.

ಇಂತಿಪ್ಪ ನಮ್ಮ ಭಾರತದ ಹದಿನೆಂಟನೇ ಶತಮಾನದ ಅಂತ್ಯದ ಹಾಗೂ ಹತ್ತೊಂಬತ್ತನೇ ಶತಮಾನದ ಆದಿಯ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದವರ ಪೈಕಿ ಎರಡು ನಮೂನೆಯ ಗುಂಪುಗಳಿದ್ದವು. ಅದರಲ್ಲಿ ಮೊದಲನೆಯದು ಮಂಗಲ್ ಪಾಂಡೆ,ರಾಯಣ್ಣ,ಚೆನ್ನಮ್ಮ,ಲಕ್ಷ್ಮೀಬಾಯಿಯಿಂದ ಹಿಡಿದು ಲಾಲಾ ಲಜಪತರಾಯ್, ಅರವಿಂದ್ ಘೋಷ್,ಆಜಾದ್,ಭಗತ್,ರಾಜಗುರು, ಸುಖದೇವ್ ಹಾಗೂ ನೇತಾಜಿಯಂಥವರ ದೊಡ್ಡ ಕ್ರಾಂತಿಕಾರಿ ಪಡೆಯೇ ಇತ್ತು.

ಅವರ ಉದ್ದೇಶ ನಮ್ಮ ಭಾರತದಿಂದ ಆಂಗ್ಲರ ಪಲಾಯನ ಹೇಗಿರಬೇಕೆಂದರೆ, ಆಂಗ್ಲರ ಹೆಜ್ಜೆ ಗುರುತುಗಳೂ ಸಹ ನಮ್ಮ ನೆಲದ ಮಣ್ಣಿನಲ್ಲಿ ಉಳಿಯಬಾರದೆಂಬಂತೆ ಇತ್ತು. ಅದಕ್ಕೆ ತಕ್ಕಂತೆ ಅಗ್ನಿಪಥದ ಹೋರಾಟಗಳೂ, ಬಲಿದಾನಗಳೂ ನಡೆದವು.

ಇವು ಒಂದು ಕಡೆಯಾದರೆ, ಅದೇ ಸ್ವಾತಂತ್ರ್ಯ ಹೋರಾಟದ ಇನ್ನೊಂದು ಗುಂಪಿನಲ್ಲಿ ಮಹಾತ್ಮ ಗಾಂಧಿ, ಸರ್ದಾರ್ ಪಟೇಲ್, ನೆಹರು, ಜಿನ್ನಾ, ಮುಂತಾದವರಿದ್ದರು. ಸರ್ದಾರ್ ಪಟೇಲರು ಎರಡನೇ ಗುಂಪಿನಲ್ಲಿ ಗುರುತಿಸಿಕೊಂಡರೂ ಅವರ ಹೋರಾಟದ ಮನೋಭಾವ ಕ್ರಾಂತಿಕಾರಿ ಬುನಾದಿಯ ಮೇಲೆ ನಿಂತಿತ್ತು.

ಈ ಗುಂಪಿನ ಅಹಿಂಸಾತ್ಮಕ ಅಥವಾ ಹೊಂದಾಣಿಕೆಯ ಚಳುವಳಿಗಳು ಬ್ರಿಟಿಷರ ನಿದ್ದೆಗೆಡಿಸದಿದ್ದರೂ ದೇಶದ ತುಂಬೆಲ್ಲಾ ವ್ಯವಸ್ಥಿತವಾಗಿ ಪ್ರಚಾರ ಪಡೆದವು. ಕ್ರಾಂತಿಕಾರಿಗಳು ಬ್ರಿಟಿಷ್ ಸೈನ್ಯದ ಬೂಟಿನೇಟು, ಲಾಠಿಯೇಟು ತಿಂದು ಪ್ರಾಣಬಲಿ ಕೊಟ್ಟರೆ, ಎರಡನೇ ಗುಂಪಿನ ಹೋರಾಟದಲ್ಲಿ ಸೆರೆವಾಸ ಅನುಭವಿಸಿದ ನಾಯಕರು ಐಷಾರಾಮಿ ರಾಜಾತಿಥ್ಯ ಪಡೆದರು. ನೇತಾಜಿಯವರು ಮಾರುವೇಷ ಧರಿಸಿ ದೇಶ ಬಿಟ್ಟು ಹೋಗಿ, ಅನ್ಯ ಆಂಗ್ಲ ವಿರೋಧಿ ದೇಶಗಳ ಸೈನ್ಯಗಳನ್ನು ಭಾರತಕ್ಕೆ ಕರೆತರಲು ಅಣಿಗೊಳ್ಳುತ್ತಿದ್ದದ್ದನ್ನು ಕಂಡು  ಇತ್ತ ಕಡೆ ಆಂಗ್ಲರು ಹೆದರಿ ಚಡ್ಡಿ ಒದ್ದೆ ಮಾಡಿಕೊಳ್ಳುವ ಜೊತೆಗೆ ಎರಡನೇ ಗುಂಪಿನ ಜೊತೆಗೆ ಹೊಂದಾಣಿಕೆಯ ಸಂಧಾನಕ್ಕೆ ಅಣಿಯಾಯಿತು. ಅದರ ಫಲವಾಗಿಯೇ ಕ್ವಿಟ್ ಇಂಡಿಯಾ ಚಳುವಳಿ ವಾಪಸು ಪಡೆದಿದ್ದು ಯಾಕೆ ಎಂಬುದು ಚಿದಂಬರ ರಹಸ್ಯವಾಗಿ ಉಳಿದು ಹೋಯಿತು.

ಸ್ವಾತಂತ್ರ್ಯ ಬರುವ ಮುನ್ನವೇ ಅದೇ ಆಂಗ್ಲರ ಮಧ್ಯಸ್ಥಿಕೆಯಲ್ಲಿ ಇತ್ತಕಡೆ ಎರಡನೇ ಗುಂಪು ದೇಶ ಒಡೆಯಲು ವೇದಿಕೆ ನಿರ್ಮಿಸಿಕೊಂಡಿತ್ತು. ಇದೆಲ್ಲದರ ನಡುವೆ ಭಾರತವನ್ನು ಸಾಂಸ್ಕೃತಿಕವಾಗಿ ಬರಡು ಮಾಡುವ ಆಂಗ್ಲರ ದು(ದೂ)ರಾಲೋಚನೆಯ ಕಾರ್ಯಫಲದೋಸುಗವಾಗಿ,

ನೇತಾಜಿಯವರು ದೇಶದಲ್ಲಿ ಇಲ್ಲದ ಸಮಯದಲ್ಲಿ ಕ್ರಾಂತಿಕಾರಿ ಪಡೆಯನ್ನು ಬಲವಂತವಾಗಿ ನೇಪಥ್ಯಕ್ಕೆ ಸರಿಸಿ, ಆಂಗ್ಲರು ಹಾಗೂ ಎರಡನೇ ಗುಂಪಿನ ನಡುವೆ ಹೊಂದಾಣಿಕೆ ಏರ್ಪಟ್ಟು 1947 ರ ಆಗಸ್ಟ್ 14 ರ ಮಧ್ಯರಾತ್ರಿ 12 ಗಂಟೆಗೆ *”ಕೆಂಪು ಆಂಗ್ಲರಿಂದ ಕಪ್ಪು ಆಂಗ್ಲರಿಗೆ ಅಧಿಕಾರ ಹಸ್ತಾಂತರವಾಯಿತು”.* 

ಇದನ್ನೇ ನಮಗೆ ಪಠ್ಯಪುಸ್ತಕಗಳಲ್ಲಿ ‘ಸ್ವಾತಂತ್ರ್ಯ ಲಭಿಸಿತು’ ಎಂದು ನಂಬಿಸಲಾಯಿತು. ಹಾಗಾದರೆ 1947 ರ ಆಗಸ್ಟ್ 14 ರ ಮಧ್ಯರಾತ್ರಿ ನಡೆದದ್ದಾದರೂ ಏನು!? ಎಂಬ ಪ್ರಶ್ನೆಗೆ ಉತ್ತರ…

ವಾಸ್ತವದ ಅಂಶವೇನೆಂದರೆ, ಭರತಖಂಡ ಆದಿಯಿಂದಲೂ ಸರ್ವತಂತ್ರ ಸ್ವತಂತ್ರ ರಾಷ್ಟ್ರ. ಭಾರತದ ಒಂದು ವರ್ಗ  ಮಾತ್ರ ಕೆಂಪು ಆಂಗ್ಲರ ಗುಲಾಮಗಿರಿಯಲ್ಲಿ ಬಿದ್ದಿತ್ತು. ಇದನ್ನು ವಿರೋಧಿಸಿ ಬಂಡೆದ್ದ ಕ್ರಾಂತಿಕಿಡಿಗಳ ಹೋರಾಟಕ್ಕೆ ಹೆದರಿದ ಬ್ರಿಟಿಷ್ ಆಡಳಿತ ಒಪ್ಪಂದ ಮಾಡಿಕೊಂಡು ತನ್ನ ಅಧಿಕಾರವನ್ನು ಹಸ್ತಾಂತರ ಮಾಡಿತಷ್ಟೇ… 

ಹಾಗೇನಾದರೂ ಬ್ರಿಟಿಷ್ ಆಡಳಿತದಿಂದ ಭಾರತಕ್ಕೆ ಮುಕ್ತಿ ಸಿಕ್ಕಿದ್ದೇ ಹೌದಾದರೆ, ಭಾರತದ ಸಂವಿಧಾನದಲ್ಲಿ ಇಂದಿಗೂ ಬ್ರಿಟಿಷ್‌ ಕಾಲದ ಕುರುಡು ಕಾನೂನುಗಳು ಈಗಲೂ ಪ್ರಸ್ತುತವಾಗಿರುವುದು ಯಾಕೆ!? ಇಂತಹ ಅನೇಕಾನೇಕ ಬೆತ್ತಲೆಯಾದ ರಹಸ್ಯ ಪ್ರಶ್ನೆಗಳು ಈಗಲೂ ನಮ್ಮನ್ನು ಕಾಡುತ್ತಿವೆ.

ಇವುಗಳಿಗೆಲ್ಲಾ ನಮ್ಮ ಪ್ರಸ್ತುತ ಪಠ್ಯಪುಸ್ತಕಗಳ ಕಪೋಲಕಲ್ಪಿತ ಇತಿಹಾಸಗಳನ್ನು ಹೊರತುಪಡಿಸಿ ಸತ್ಯಗಳನ್ನು ಹುಡುಕುವ ಪ್ರಯತ್ನದಲ್ಲಿ….

ಇಂತಿ ನಿಮ್ಮವ ಜಿ.ಎನ್.ಪ್ರದೀಪ್

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

ರಾಜಕೀಯ

ಸಹಜವಾಗಿ ಅಡುಗೆ ಅನಿಲದ ಬೆಲೆ ಏರಿಕೆಯಾಗಿದೆ: ಪ್ರತಿಪಕ್ಷ ನಾಯಕ ಆರ್‌.ಅಶೋಕ

ಸಹಜವಾಗಿ ಅಡುಗೆ ಅನಿಲದ ಬೆಲೆ ಏರಿಕೆಯಾಗಿದೆ: ಪ್ರತಿಪಕ್ಷ ನಾಯಕ ಆರ್‌.ಅಶೋಕ

ಯುದ್ಧ ಇನ್ನೂ ಸ್ಥಗಿತಗೊಂಡಿಲ್ಲ. ಅಡುಗೆ ಅನಿಲ ಸೇರಿದಂತೆ ತೈಲ ಸಮಸ್ಯೆ ಎಲ್ಲ ದೇಶಗಳಿಗೆ ತಟ್ಟಿದೆ. ಸಹಜವಾಗಿ ಅಡುಗೆ ಅನಿಲದ ಬೆಲೆ ಏರಿಕೆಯಾಗಿದೆ: ಆರ್‌. ಅಶೋಕ (R. Ashoka)

[ccc_my_favorite_select_button post_id="121608"]
ಬೌರಿಂಗ್ ಆಸ್ಪತ್ರೆ ದುರ್ಘಟನೆ: ಟೀಕೆ ಮಾಡೋದ್ ಬಿಟ್ಟು ಬಿಜೆಪಿಗರು ಸಹಾಯ ಮಾಡಲ್ಲ – ಡಿಸಿಎಂ‌ ಡಿ.ಕೆ. ಶಿವಕುಮಾರ್

ಬೌರಿಂಗ್ ಆಸ್ಪತ್ರೆ ದುರ್ಘಟನೆ: ಟೀಕೆ ಮಾಡೋದ್ ಬಿಟ್ಟು ಬಿಜೆಪಿಗರು ಸಹಾಯ ಮಾಡಲ್ಲ –

"ಬೌರಿಂಗ್ ಆಸ್ಪತ್ರೆ (Bowring Hospital) ಕಾಂಪೌಂಡ್ ಕುಸಿದು ಏಳು ಜನ ಮೃತಪಟ್ಟಿರುವುದು ಅತ್ಯಂತ ದುಃಖಕರ ವಿಚಾರ. ಇಂತಹ ಘಟನೆಗಳು ಆಗಬಾರದಿತ್ತು. ನನಗೂ ಇದರಿಂದ ಆಘಾತವಾಗಿದೆ" ಎಂದು ಡಿಸಿಎಂ ಡಿ.ಕೆ‌. ಶಿವಕುಮಾರ್ (D.K. Shivakumar) ಬೇಸರ

[ccc_my_favorite_select_button post_id="121538"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ವೇಪಿಂಗ್ ಮಾಡಿದ್ದ ರಿಯಾನ್ ಪರಾಗ್ ಕಠಿಣ ಕ್ರಮದಿಂದ ಪಾರು..!

ವೇಪಿಂಗ್ ಮಾಡಿದ್ದ ರಿಯಾನ್ ಪರಾಗ್ ಕಠಿಣ ಕ್ರಮದಿಂದ ಪಾರು..!

ಮುಲ್ಲನ್‌ಪುರದಲ್ಲಿ ನಡೆದ ಐಪಿಎಲ್ (IPL) ಪಂದ್ಯದ ವೇಳೆ ವ್ಯಾಪಿಂಗ್ ಮಾಡಿದ್ದಕ್ಕಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ರಿಯಾನ್ ಪರಾಗ್‌ಗೆ (Riyan Parag) ಪಂದ್ಯ ಶುಲ್ಕದ 25% ದಂಡ ವಿಧಿಸಿದೆ, ರಾಜಸ್ಥಾನ ರಾಯಲ್ಸ್ ನಾಯಕ ಕಠಿಣ

[ccc_my_favorite_select_button post_id="121572"]
ಮದುವೆಗೆ ಹುಡುಗಿ ಸಿಗಲಿಲ್ಲವೆಂದು ಯುವಕ ಆತ್ಮಹತ್ಯೆ..!

ಮದುವೆಗೆ ಹುಡುಗಿ ಸಿಗಲಿಲ್ಲವೆಂದು ಯುವಕ ಆತ್ಮಹತ್ಯೆ..!

ಮದುವೆಯಾಗಲು ಸೂಕ್ತ ಯುವತಿ ದೊರೆಯದ ಕಾರಣ ಮನನೊಂದ ಯುವಕನೊಬ್ಬ ಕಲ್ಯಾಣಿಗೆ ಬಿದ್ದು ಆತ್ಮಹತ್ಯೆ (suicide) ಮಾಡಿಕೊಂಡಿರುವ ಘಟನೆ ನಡೆದಿದೆ.

[ccc_my_favorite_select_button post_id="121591"]
ದೊಡ್ಡಬಳ್ಳಾಪುರ:  ಡಿವೈಡರ್ಗೆ ಕಾರು ಡಿಕ್ಕಿ.. ಚಾಲಕನಿಗೆ ಗಂಭೀರ ಗಾಯ

ದೊಡ್ಡಬಳ್ಳಾಪುರ: ಡಿವೈಡರ್ಗೆ ಕಾರು ಡಿಕ್ಕಿ.. ಚಾಲಕನಿಗೆ ಗಂಭೀರ ಗಾಯ

ದಾಬಸ್ ಪೇಟೆ ಮಾರ್ಗವಾಗಿ ದೊಡ್ಡಬಳ್ಳಾಪುರ ಕಡೆಗೆ ತೆರಳುತ್ತಿದ್ದ ಕಾರು, ಏಕಾಏಕಿ ಚಾಲಕ ನಿಯಂತ್ರಣ ತಪ್ಪಿ ರಸ್ತೆ ಬದಿಯ ಡಿವೈಡರ್ಗೆ ಡಿಕ್ಕಿ (Accident) ಹೊಡೆದಿದೆ.

[ccc_my_favorite_select_button post_id="121485"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]