ಬೆಂಗಳೂರು: ಬ್ರಿಟನ್ ನಲ್ಲಿ ಕರೊನಾ ಸೋಂಕು ರೂಪಾಂತರ ವಿಚಾರದ ಕುರಿತು ಆತಂಕವನ್ನು ಉಂಟು ಮಾಡುವ ವರದಿ ಕುರಿತು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಚಾಟಿ ಬೀಸಿ, ನಂತರ ಪೊಸ್ಟ್ ಡಿಲೀಟ್ ಮಾಡಿದ್ದಾರೆ.
ಅವರ ಪೊಸ್ಟ್ ನಲ್ಲಿನ ಅಭಿಪ್ರಾಯದಂತೆ ಕರೊನಾ ಸೋಂಕಿನ ಕುರಿತು ಜನರಲ್ಲಿ ಜಾಗ್ರತೆ ಮೂಡಿಸ ಬೇಕೆ ಅಥವಾ ಆತಂಕಿತರನ್ನಾಗಿಸಬೇಕೇ ಎಂಬುದಾಗಿ ಬರೆದಿದ್ದು, ಪೋಸ್ಟ್ ನಲ್ಲಿ ಮಾದ್ಯಮಗಳ ವಿರುದ್ದ ಆಕ್ರೋಶದ ಕಾಮೆಂಟ್ ಗಳು ಬಂದ ಕೂಡಲೆ ಪೋಸ್ಟ್ ಡಿಲೀಟ್ ಮಾಡಿದ್ದಾರೆ.
ಶಾಲೆ ಆರಂಭಿಸುತ್ತೇವೆ: ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್ಕುಮಾರ್, ಕರೊನಾ ಹೊಸ ರೂಪಾಂತರಕ್ಕೆ ಆತಂಕಪಡುವ ಅಗತ್ಯವಿಲ್ಲ ಎಂದು ಕೇಂದ್ರ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ದೇಶದ ಜನರಿಗೆ ಧೈರ್ಯ ತುಂಬಿದ್ದಾರೆ. ಈ ಹಿನ್ನೆಲೆಯಲ್ಲಿ ತಾಂತ್ರಿಕ ಸಲಹಾ ಸಮಿತಿ ಸಲಹೆ ಮೇರೆಗೆ ಜನವರಿ 1 ರಿಂದ 10, 12 ತರಗತಿಗಳು ಪ್ರಾರಂಭಿಸುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಸುವರ್ಣ ಸುದ್ದಿವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಸುರೇಶ್ಕುಮಾರ್, ಈಗ ಹೊಸ ವೈರಸ್ ಬಗ್ಗೆ ಅವಲೋಕಿಸಲು ನಮಗೆ 9 ದಿನಗಳ ಸಮಯವಿದೆ. ಹೊಸ ವೈರಸ್ನ ನಿಜವಾದ ಶಕ್ತಿ ಎಷ್ಟು ಅನ್ನೋದನ್ನ ಅವಲೋಕಿಸುತ್ತೇವೆ. ಈ ಬಗ್ಗೆ ತಾಂತ್ರಿಕ ಸಲಹಾ ಸಮಿತಿ ಏನು ಸಲಹೆ ನೀಡುತ್ತೆ ಅದರಂತೆ ಮುನ್ನಡೆಯುತ್ತೇವೆ ಎಂದು ಹೇಳಿದರು.
ವಿದ್ಯಾಗಮದ ಮೂಲಕ ಶಿಕ್ಷಣ’ ಪರಿಸ್ಥಿತಿ ನೋಡಿಕೊಂಡು 6,7, 8,9 ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾಗಮದ ಮೂಲಕ ಶಿಕ್ಷಣ ನೀಡಲು ಮುಂದಾಗುತ್ತೇವೆ. ಖಾಸಗಿ ಶಾಲೆಯವರು ವಿದ್ಯಾಗಮ ಯೋಜನೆ ಮೂಲಕ ಶಿಕ್ಷಣ ಆರಂಭಿಸಲು ಮುಂದೆ ಬಂದಿದ್ದಾರೆ. ಕೊರೋನಾ ಸೊಂಕು ಕಡಿಮೆ ಇರುವ ಜಿಲ್ಲೆಗಳಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶೈಕ್ಷಣಿಕ ತರಗತಿಗಳನ್ನೇ ಆರಂಭಿಸುವ ಬಗ್ಗೆ ಹೈ ಕೋಕೋರ್ಟ್ ಸಲಹೆ ನೀಡಿದೆ. ಆದರೆ ಈ ಬಗ್ಗೆ ತಾಂತ್ರಿಕ ಸಲಹಾ ಸಮಿತಿಯ ವರದಿ ಅನ್ವಯವೇ ನಾವು ನಿರ್ಧಾರ ತೆಗೆದುಕೊಳ್ತೇವೆ ಎಂದು ತಿಳಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

