ದೊಡ್ಡಬಳ್ಳಾಪುರ: ನಗರದ ಭುವನೇಶ್ವರಿ ನಗರದಲ್ಲಿ ಚೋಳ ತೋಟದ ಸಮೀಪ ಒಣಗಿದ್ದ ತೆಂಗಿನ ಮರವೊಂದು ವಿದ್ಯುತ್ ತಂತಿಗಳ ಮೇಲೆ ಬಿದ್ದ ಪರಿಣಾಮ, 6 ಕಂಬಗಳು ಉರುಳಿ ಬಿದ್ದಿರುವ ಘಟನೆ ಬುಧವಾರ ರಾತ್ರಿ 8.30ರ ವೇಳೆಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ತೋಟದಲ್ಲಿದ್ದ ತೆಂಗಿನ ಮರ ತಂತಿಗಳ ಮೇಲೆ ಬಿದ್ದ ರಭಸಕ್ಕೆ ತಂತಿಗಳು ಒಂದಕ್ಕೊಂದು ತಾಗಿ ಭಾರಿ ಶಬ್ದ ಹಾಗೂ ಬೆಂಕಿ ಕಾಣಿಸಿಕೊಂಡಿದೆ. ಘಟನೆಗೆ ಬೆಚ್ಚಿ ಬಿದ್ದ ಸ್ಥಳೀಯರು ಮನೆಯಿಂದ ಹೊರ ಬಂದಿದ್ದಾರೆ. ಮರ ಬಿದ್ದ ರಭಸಕ್ಕೆ ತಂತಿಗಳ ಸಂಪರ್ಕವಿದ್ದ ವಿದ್ಯುತ್ ಕಂಬಗಳು ಸಹ ಮುರಿದು ಬಿದ್ದಿವೆ. ತಕ್ಷಣವೇ ವಿದ್ಯುತ್ ಕಡಿತವಾಗಿದ್ದರಿಂದ ಹೆಚ್ಚಿನ ಅನಾಹುತವಾಗಿಲ್ಲ. ಬೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ಬಂದು ಸಂಪರ್ಕ ಕಡಿತಗೊಳಿಸಿದ್ದು, ದುರಸ್ತಿ ಕಾರ್ಯ ಪ್ರಗತಿಯಲ್ಲಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

