ನವದೆಹಲಿ: ಕೇಷಿ ವಿಧೇಯಕ ತಿದ್ದುಪಡಿ ಕುರಿತು ರೈತರ ಪ್ರತಿಭಟನೆಯ ನಡುವೆಯೇ ನವದೆಹಲಿ: ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ 6 ರಾಜ್ಯಗಳ ರೈತರ ಜೊತೆಗೆ ಮಾತುಕತೆ ನಡೆಸಲಿದ್ದಾರೆ. ಇದೇ ವೇಳೆ ಕೇಂದ್ರದ ಯೋಜನೆಯ ಭಾಗವಾಗಿ ಸುಮಾರು 9 ಕೋಟಿ ರೈತರ ಖಾತೆಗೆ ಒಟ್ಟು 18 ಕೋವಿರ ಕೋಟಿ ರೂ ಜಮೆಯಾಗಲಿದೆ.
ಇಂದು ಮಧ್ಯಾಹ್ನ 12 ಗಂಟೆಗೆ ಸಭೆ ಆರಂಭವಾಗಲಿದೆ. ಪಿಎಂ ಕಿಸಾನ್ ಸನ್ಮಾನ್ ನಿಧಿ ಯೋಜನೆಯ ಅಡಿ ರೈತರ ಖಾತೆಗೆ ಹಣ ಜಮೆಯಾಗಲಿದೆ. ಜೊತೆಗೆ ಸರ್ಕಾರ ಜಾರಿ ಮಾಡಿರುವ ರೈತಪರ ಯೋಜನೆಗಳ ಬಗ್ಗೆ ಪ್ರಧಾನಿಗಳೊಂದಿಗೆ ರೈತರು ನೇರ ಮಾತುಕತೆ ನಡೆಸಲಿದ್ದಾರೆ.
ಈ ಕುರಿತು ಕಳೆದ ರಾತ್ರಿ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ನಾಳೆ ದೇಶದ ರೈತರಿಗೆ ಪ್ರಮುಖವಾದ ದಿನ. ನಾಳೆ 12 ಗಂಟೆಗೆ 9 ಕೋಟಿಗೂ ಹೆಚ್ಚು ರೈತರಿಗೆ ಪಿಎಮ್-ಕಿಸಾನ್ ಸಮ್ಮಾನ್ ಯೋಜನೆಯಡಿ ಮುಂದಿನ ಕಂತು ಬಿಡುಗಡೆ ಮಾಡುವ ಅವಕಾಶ ನನ್ನದಾಗಲಿದೆ ಎಂದಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

